ಮುಂಬೈ: ಇಂದು ಬೆಳಗ್ಗೆ 3090 ಅಂಕಗಳ ಸಾರ್ವಕಾಲಿಕ ಕುಸಿತ ಕಂಡಿದ್ದ ಷೇರುಪೇಟೆ, ಮುಕ್ಕಾಲುಗಂಟೆ ಸ್ಥಗಿತಗೊಂಡಿತ್ತು.
ಈ ಆಘಾತದ ಬಳಿಕ ಚೇತರಿಕೆ ಹಾದಿ ಹಿಡಿದ ಷೇರುಪೇಟೆ ಒಂದೇ ದಿನದಲ್ಲಿ ಸುಮಾರು 4500 ಅಂಕಗಳಷ್ಟು ರಿಕವರಿ ಮಾಡಿಕೊಂಡು ಹೂಡಿಕೆದಾರರಲ್ಲಿ ಹರ್ಷ ಮೂಡುವಂತೆ ಮಾಡಿದೆ.
ರಾಷ್ಟ್ರೀಯ ಷೇರುಸೂಚ್ಯಂಕ ನಿಫ್ಟಿ ಬೆಳಗ್ಗೆ 8,555 ಅಂಕಗಳಿಗೆ ಕುಸಿತಕಂಡಿತ್ತು. ಅದೀಗ 10,068 ಅಂಕಗಳಿಗೆ ಏರಿಕೆ ಕಂಡಿದೆ. ಮಧ್ಯಾಹ್ನ 1.26 ಗಂಟೆ ಸಮಯದಲ್ಲಿ ಸೆನ್ಸೆಕ್ಸ್ 1529 ಅಂಕಗಳ ಏರಿಕೆ ದಾಖಲಿಸಿತು. ಈ ಮೂಲಕ 29,900 ಸಾವಿರಕ್ಕೆ ಕುಸಿದಿದ್ದ ಮಾರುಕಟ್ಟೆ 34307 ಕ್ಕೆ ಹೆಚ್ಚಳ ಕಂಡಿತು.
ಆಗ ನಿಫ್ಟಿ 435 ಅಂಕ ಏರಿಕೆ ಕಂಡು 10025ಕ್ಕೆ ತಲುಪಿತು. ಇನ್ನು ನಿನ್ನೆ 74.50ಕ್ಕೆ ಕುಸಿದಿದ್ದ ರೂಪಾಯಿ 60 ಪೈಸೆಯಷ್ಟು ಮೌಲ್ಯ ವೃದ್ಧಿಸಿಕೊಳ್ಳುವ ಮೂಲಕ ಡಾಲರ್ ವಿರುದ್ಧ 73.92ಕ್ಕೆ ಏರಿಕೆ ಕಂಡಿತು.