ETV Bharat / business

ಮತ್ತೆ ಶುರುವಾಯಿತು 'ಗೋಲ್ಡ್ ಬಾಂಡ್ ಸ್ಕೀಮ್': ಹೂಡಿಕೆ, ಬಡ್ಡಿ ದರವೆಷ್ಟು ಗೊತ್ತೆ? - sovereign gold bond scheme 2020-21 series

999 ಶುದ್ಧತೆಯ ಚಿನ್ನಕ್ಕೆ [ಇಂಡಿಯಾ ಬುಲಿಯನ್ ಮತ್ತು ಜ್ಯುವೆಲ್ಲರ್ಸ್ ಅಸೋಸಿಯೇಷನ್ ​​ಲಿಮಿಟೆಡ್ (ಐಬಿಜೆಎ) ಪ್ರಕಟಿಸಿದ] ಸರಾಸರಿ ಮುಕ್ತಾಯದ ಬೆಲೆಯ ಆಧಾರದ ಮೇಲೆ ಬಾಂಡ್‌ನ ಅತ್ಯಲ್ಪ ಮೌಲ್ಯ ಪ್ರತಿ ಗ್ರಾಂ. ಚಿನ್ನಕ್ಕೆ 5,177 ರೂ. ಎಂದು ಆರ್‌ಬಿಐ ತಿಳಿಸಿದೆ.

Sovereign Gold
ಗೋಲ್ಡ್ ಬಾಂಡ್ ಸ್ಕಿಮ್
author img

By

Published : Nov 7, 2020, 4:48 PM IST

ನವದೆಹಲಿ: ಕೇಂದ್ರ ಸರ್ಕಾರ ರೂಪಿಸಿರುವ ಚಿನ್ನ ನಗದೀಕರಣ ಮತ್ತು ಸವರನ್ ಚಿನ್ನದ ಬಾಂಡ್ ಯೋಜನೆ ಮತ್ತೆ ಆರಂಭವಾಗಲಿದೆ.

ಸವರನ್ ಗೋಲ್ಡ್ ಬಾಂಡ್ ಅಥವಾ ಎಸ್‌ಜಿಬಿ ಯೋಜನೆ ವಿತರಣಾ ಬೆಲೆಯು ಪ್ರತಿ ಗ್ರಾಂ. ಚಿನ್ನಕ್ಕೆ 5,177 ರೂ.ಯಷ್ಟು ನಿಗದಿಪಡಿಸಲಾಗಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಪ್ರಕಟಣೆಯಲ್ಲಿ ತಿಳಿಸಿದೆ.

ಸವರಿನ್​ ಗೋಲ್ಡ್​ ಬಾಂಡ್ ಯೋಜನೆ 2020-21-ಸರಣಿ VIIIರ ಚಂದಾದಾರಿಕೆ 2020ರ ನವೆಂಬರ್ 9 ರಿಂದ 13ರ ತನಕ ತೆರೆದಿರುತ್ತೆ.

999 ಶುದ್ಧತೆಯ ಚಿನ್ನಕ್ಕೆ [ಇಂಡಿಯಾ ಬುಲಿಯನ್ ಮತ್ತು ಜ್ಯುವೆಲ್ಲರ್ಸ್ ಅಸೋಸಿಯೇಷನ್ ​​ಲಿಮಿಟೆಡ್ (ಐಬಿಜೆಎ) ಪ್ರಕಟಿಸಿದ] ಸರಾಸರಿ ಮುಕ್ತಾಯದ ಬೆಲೆಯ ಆಧಾರದ ಮೇಲೆ ಬಾಂಡ್‌ನ ಅತ್ಯಲ್ಪ ಮೌಲ್ಯ ಪ್ರತಿ ಗ್ರಾಂ. ಚಿನ್ನಕ್ಕೆ 5,177 ರೂ. ಎಂದು ಆರ್‌ಬಿಐ ತಿಳಿಸಿದೆ.

ಬೆಲೆ ಮತ್ತು ಪಾವತಿ

ಭಾರತೀಯ ಚಿನ್ನ ಹಾಗೂ ಆಭರಣ ಸಂಘಟನೆ ಪ್ರಕಟಿಸುವ ದರ ಆಧರಿಸಿ ಬಾಂಡ್‌ಗಳ ಬೆಲೆ ನಿಗದಿಪಡಿಸಲಾಗುತ್ತದೆ. ಬಾಂಡ್‌ ಖರೀದಿಸುವ ಸಂದರ್ಭದಲ್ಲಿ ಮಾರುಕಟ್ಟೆಯ ಗ್ರಾಂ. ಚಿನ್ನದ ದರಕ್ಕಿಂತ ₹ 50 ಕಡಿಮೆ ನಿಗದಿ ಮಾಡಲಾಗುತ್ತದೆ.

ಮಾರಾಟ ಆಗುವ ಸ್ಥಳಗಳು

ರಾಷ್ಟ್ರೀಯ ಷೇರು ವಿನಿಮಯ ಕೇಂದ್ರ (ಎನ್‌ಎಸ್‌ಇ), ಅಂಚೆ ಕಚೇರಿಗಳು, ಬ್ಯಾಂಕ್‌ಗಳು, ಸ್ಟಾಕ್‌ ಹೋಲ್ಡಿಂಗ್‌ ಕಾರ್ಪೊರೇಷನ್‌ ಆಫ್‌ ಇಂಡಿಯಾ (ಎಸ್‌ಎಚ್‌ಸಿಐಎಲ್‌) ಮತ್ತು ಮುಂಬೈ ಷೇರು ವಿನಿಮಯ ಕೇಂದ್ರದಂಥ ಮಾನ್ಯತೆ ಪಡೆದ ಷೇರು ವಿನಿಮಯ ಕೇಂದ್ರಗಳಲ್ಲಿ ಖರೀದಿಸಬಹುದು. ಕನಿಷ್ಠ ಒಂದು ಗ್ರಾಂ. ಚಿನ್ನವನ್ನು ಬಾಂಡ್ ರೂಪದಲ್ಲಿ ಖರೀದಿಸಬಹುದು. ಹಣಕಾಸು ವರ್ಷದಲ್ಲಿ ವ್ಯಕ್ತಿಯೊಬ್ಬ 500 ಗ್ರಾಂ ತನಕ ಖರೀದಿಗೆ ಅವಕಾಶವಿದೆ.

ಬಡ್ಡಿ ಮತ್ತು ಬಾಂಡ್ ಅವಧಿ

ಚಿನ್ನದ ಬಾಂಡ್‌ಗಳಿಗೆ ವಾರ್ಷಿಕ ಶೇ 2.5ರಷ್ಟು ಬಡ್ಡಿ ದೊರೆಯುತ್ತದೆ. ಬಡ್ಡಿಯನ್ನು ಪ್ರತಿ 6 ತಿಂಗಳಿಗೊಮ್ಮೆ ನೀಡಲಾಗುತ್ತದೆ. ಬಾಂಡ್‌ ಅವಧಿ 8 ವರ್ಷಗಳು. ಜತೆಗೆ 5ನೇ ವರ್ಷದಲ್ಲಿ ಯೋಜನೆಯಿಂದ ಹೊರಬರುವ ಅವಕಾಶವಿದೆ.

ತೆರಿಗೆ

ಚಿನ್ನದ ಯೋಜನೆಗಳಿಗೆ ಅನ್ವಯವಾಗುವಂತಹ ಆದಾಯ ತೆರಿಗೆ ಕಾಯ್ದೆ ಚಿನ್ನದ ಬಾಂಡ್​ಗೂ ಅನ್ವಯವಾಗುತ್ತದೆ. ಬಾಂಡ್‌ಗಳು ಗಳಿಸುವ ಬಡ್ಡಿಯನ್ನು ಹೂಡಿಕೆದಾರರ ಗಳಿಕೆಗೆ ಸೇರಿಸಿ, ತೆರಿಗೆ ವಿಧಿಸಲಾಗುತ್ತದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.