ETV Bharat / business

ಹೋಟೆಲ್​ನಲ್ಲಿ ಈರುಳ್ಳಿ ಅಂದ್ರೆ ಜೇಬಿಗೆ ಕತ್ತರಿ.. ಇಡ್ಲಿ,ವಡೆಗಿಂತ ಆನಿಯನ್‌ ಚೂರು ಬೆಲೆ ಜಾಸ್ತಿ!

ಈರುಳ್ಳಿ ಬೆಲೆ ಗಗನಕ್ಕೇರಿ ರೆಸ್ಟೋರೆಂಟ್ ಮಾಲೀಕರು ನಿತ್ಯದ ವ್ಯವಹಾರ ನಡೆಸಲು ಹೆಣಗಾಡುತ್ತಿದ್ದಾರೆ. ಮಾಲೀಕರಿಗೆ ಬೆಲೆ ಏರಿಕೆ ಬಿಟ್ಟರೇ ಬೇರೆ ಯಾವುದೇ ದಾರಿ ಕಾಣಿಸುತ್ತಿಲ್ಲ. ಹೀಗಾಗಿ, ಗ್ರಾಹಕರಿಗೆ ಹೋಟೆಲ್​ನ ತಿಂಡಿ, ಆಹಾರ ಪದಾರ್ಥಗಳು ತುಟ್ಟಿಯಾಗಲಿವೆ. ಚೂರು ಈರುಳ್ಳಿ ತಟ್ಟೆಗೆ 15 ರೂ. ಹೆಚ್ಚುವರಿ ವೆಚ್ಚವಾಗಲಿದೆ ಎಂಬ ಬೋರ್ಡ್​ಗಳು ಹೋಟೆಲ್​ ಮುಂದುಗಡೆ ಹಾಕಲಾಗುತ್ತಿದೆ.

onion
ಈರುಳ್ಳಿ
author img

By

Published : Nov 29, 2019, 3:29 PM IST

ಮುಂಬೈ: ಏರುತ್ತಿರುವ ಈರುಳ್ಳಿ ಬೆಲೆ ನಗರದ ರೆಸ್ಟೋರೆಂಟ್‌, ತಿಂಡಿ-ತಿನಿಸು ಮಳಿಗೆ ಮತ್ತು ಹೋಟೆಲ್‌ಗಳ ಆಹಾರ ಪದಾರ್ಥಗಳ ಬೆಲೆಯಲ್ಲಿ ಹೆಚ್ಚಳವಾಗಿದೆ.

ಈರುಳ್ಳಿ ಬೆಲೆ ಗಗನಕ್ಕೇರಿದ್ದು ರೆಸ್ಟೋರೆಂಟ್ ಮಾಲೀಕರು ನಿತ್ಯದ ವ್ಯವಹಾರ ನಡೆಸಲು ಹೆಣಗಾಡುತ್ತಿದ್ದಾರೆ. ಮಾಲೀಕರಿಗೆ ಬೆಲೆ ಏರಿಕೆ ಬಿಟ್ಟರೇ ಬೇರೆ ಯಾವುದೇ ದಾರಿ ಕಾಣಿಸುತ್ತಿಲ್ಲ. ಹೀಗಾಗಿ, ಗ್ರಾಹಕರಿಗೆ ಹೋಟೆಲ್​ನ ತಿಂಡಿ, ಆಹಾರ ಪದಾರ್ಥಗಳು ತುಟ್ಟಿಯಾಗಲಿವೆ. ಚಿಲ್ಲರೆ ತರಕಾರಿ ಮಾರಾಟಗಾರರ ಪ್ರಕಾರ, ನಗರ ಮತ್ತು ಕಿರುಪಟ್ಟಣಗಳಲ್ಲಿ ಪ್ರತಿ ಕೆಜಿ ಈರುಳ್ಳಿ 70-80 ರೂ.ಗಳಲ್ಲಿ ಮಾರಾಟ ಆಗುತ್ತಿದೆ.

ಅನೇಕ ಗ್ರಾಹಕರು ಆಹಾರ ಪದಾರ್ಥದೊಂದಿಗೆ ಈರುಳ್ಳಿ ಚೂರುಗಳನ್ನು ತಿನ್ನಲು ಬೇಡಿಕೆಯಿಡುತ್ತಾರೆ. ಆದರೆ, ಚೂರು ಈರುಳ್ಳಿ ತಟ್ಟಗೆ 15 ರೂ. ಹೆಚ್ಚುವರಿ ವೆಚ್ಚವಾಗಲಿದೆ ಎಂಬ ಬೋರ್ಡ್ ಹಾಕಿದ್ದೇವೆ. ಅವರ ಬೇಡಿಕೆಗೆ ತಕ್ಕಂತೆ ಪೂರೈಸಲು ನಮಗೆ ಸಾಧ್ಯವಾಗದ ಕಾರಣ ನಾವು ಈ ನಿರ್ಧಾರ ತೆಗೆದುಕೊಂಡಿದ್ದೇವೆ. ಅದನ್ನು ಉಚಿತವಾಗಿ ನೀಡಲು ಆಗುತ್ತಿಲ್ಲ ಎನ್ನುತ್ತಾರೆ ಭಾರತ್ ಲಂಚ್ ಹೋಮ್ ನಡೆಸುತ್ತಿರುವ ಪ್ರಕಾಶ್ ಶೆಟ್ಟಿ.

ಕಳೆದ ವಾರ ಗ್ರಾಹಕರಿಗೆ ನಿತ್ಯ 10 ಕೆಜಿ ಈರುಳ್ಳಿ ಚೂರುಗಳನ್ನು ನೀಡುತ್ತಿದ್ದೆವು. ಇಂದು ಅದೇ ರೀತಿ ನೀಡಲು ಆಗುವುದಿಲ್ಲ. ಆದ್ದರಿಂದ ನಾವು ಈರುಳ್ಳಿ ಚೂರು ಪ್ಲೇಟ್​ಗೆ ಹೆಚ್ಚಿನ ಬೆಲೆ ನಿಗದಿಪಡಿಸಿದ್ದೇವೆ ಎಂದರು.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.