ಲಂಡನ್: ಜಾಗತಿಕ ಸಮುದಾಯದಲ್ಲಿ ಕೊರೊನಾ ವೈರಸ್ ಸೃಷ್ಟಿಸುತ್ತಿರುವ ಅವಾಂತರಕ್ಕೆ ಆರ್ಥಿಕತೆಯ ಅಡಿಪಾಯವೇ ಅಲುಗಾಡುತ್ತಿದೆ. ಇದರ ಹೊಡೆತಕ್ಕೆ ಅಕ್ಷರಶಃ ಕಚ್ಚಾ ತೈಲ ಮಾರುಕಟ್ಟೆ ಐತಿಹಾಸಿದಲ್ಲಿ ಕಂಡು ಕೇಳರಿಯದ ಮಟ್ಟಕ್ಕೆ ಬೆಲೆ ಇಳಿಕೆಯಾಗಿದೆ.
ವಿಶ್ವದ ಅನೇಕ ರಾಷ್ಟ್ರಗಳು ದಿಗ್ಬಂಧನ ವಿಧಿಸಿರುವ ಹಿನ್ನೆಲ್ಲೆಯಲ್ಲಿ ತೈಲ ಬೆಲೆ ಬ್ಯಾರೆಲ್‌ಗೆ 1 ಡಾಲರ್ಗೂ ಕಡಿಮೆ ಆಗಿದೆ. ಅಮೆರಿಕದ ವೆಸ್ಟ್ ಟೆಕ್ಸಾಸ್ ಮಧ್ಯಂತರ (ಡಬ್ಲ್ಯುಟಿಐ) ಕಚ್ಚಾ ತೈಲ ಬೆಲೆ ಬ್ಯಾರೆಲ್‌ಗೆ 1 ಡಾಲರ್‌ಗಿಂತ ಕಡಿಮೆ ಮಟ್ಟದಲ್ಲಿ ಕ್ಷೀಣಿಸಿದೆ.
ಸುಮಾರು 180ಕ್ಕೂ ಅಧಿಕ ರಾಷ್ಟ್ರಗಳಲ್ಲಿ ಕೋವಿಡ್ 19 ವೈರಸ್ ವ್ಯಾಪಿಸಿಕೊಂಡಿದೆ. ವೈರಸ್ ನಿಯಂತ್ರಣಕ್ಕೆ ಆ ರಾಷ್ಟ್ರಗಳಲ್ಲಿ ಲಾಕ್ಡೌನ್ ಘೋಷಣೆ ಮಾಡಲಾಗಿದೆ. ಇದರಿಂದ ಜನ ಜೀವನವೇ ಸಂಪೂರ್ಣವಾಗಿ ಸ್ತಬ್ಧವಾಗಿದೆ. ಇಡೀ ಸಂಚಾರ ವ್ಯವಸ್ಥೆಯೇ ಸ್ಥಗಿತವಾಗಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಬೇಡಿಕೆ ಕಳೆದುಕೊಂಡ ಪ್ರಯುಕ್ತ ಬೆಲೆಯಲ್ಲಿ ಕುಸಿತ ಕಂಡುಬಂದಿದೆ.
ಕಚ್ಚಾ ತೈಲ ರಫ್ತು ರಾಷ್ಟ್ರಗಳ ಸಂಘಟನೆ (ಒಪೆಕ್) ಹಾಗೂ ಅದರ ಮಿತ್ರ ರಾಷ್ಟ್ರಗಳು ಇತ್ತೀಚೆಗೆ ಕಡಿಮೆ ತೈಲ ಉತ್ಪಾದನೆ ಮಾಡಿಕೊಳ್ಳುವ ಒಪ್ಪಂದ ಮಾಡಿಕೊಂಡಿದ್ದವು. ಆದರೂ ಬೆಲೆಯಲ್ಲಿ ಐತಿಹಾಸಿಕ ಕುಸಿತ ದಾಖಲಾಗಿದೆ.