ತಿರುವನಂತಪುರಂ: ಕೊಲ್ಲಂ ಜಿಲ್ಲೆಯ ಆಭರಣ ಮಳಿಗೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಆರು ಮಂದಿ ಸ್ನೇಹಿತರಿಗೆ ಓಣಂ ಬಂಪರ್ ಲಾಟರಿಯಲ್ಲಿ ಜಂಟಿಯಾಗಿ 12 ಕೋಟಿ ರೂ. ಬಹುಮಾನ ಸಿಕ್ಕಿದೆ.
ಲಾಟರಿ ವಿಜೇತ ಆರು ಜನ ಸ್ನೇಹಿತರು ಸೇರಿ ತಮ್ಮ ಜ್ಯುವೆಲ್ಲರಿ ಅಂಗಡಿಯ ಮುಂದೆ ಲಾಟರಿ ಮಾರಾಟಗಾರರಿಂದ 300 ರೂ.ಗಳ ಎರಡು ಟಿಕೆಟ್ ಖರೀದಿಸಿದ್ದಾರೆ. ಅದರಲ್ಲಿ ಒಂದು ಟಿಕೆಟ್ಗೆ ರಾಜ್ಯ ಲಾಟರಿ ಇಲಾಖೆ ನೀಡುವ ಅತ್ಯಧಿಕ ಬಹುಮಾನ ಇವರ ಪಾಲಾಗಿದೆ.
ಗುರುವಾರದಂದು ಫಲಿತಾಂಶ ಪ್ರಕಟವಾದ್ದು ರೋನಿ, ವಿವೇಕ್, ರಾಜೀವ್, ಸುಬಿನ್ ಥಾಮಸ್, ರಿಮ್ಜಿನ್ ಮತ್ತು ರತೀಶ್ ಎಂಬ ಆರು ಮಂದಿ ಪ್ರಥಮ ಬಹುಮಾನ ಬಹುಮಾನ ಗೆದ್ದಿದ್ದಾರೆ.
ಲಾಟರಿ ಗೆದ್ದ ಬಳಿಕ ತಮ್ಮ ಅಭಿಪ್ರಾಯ ತಿಳಿಸಿದ ಸ್ನೇಹಿತರು, 'ಜ್ಯುವೆಲ್ಲರಿಯಲ್ಲಿ ಈಗ ನಾವು ಮಾಡುತ್ತಿರುವ ಕೆಲಸವನ್ನು ಮುಂದುವರೆಸುತ್ತೇವೆ. ಈ ಹಣ ಏನು ಮಾಡಬೇಕೆಂಬುದರ ಬಗ್ಗೆ ನಾವು ಇನ್ನೂ ನಿರ್ಧರಿಸಿಲ್ಲ' ಎಂದರು.
ಒಟ್ಟು 12 ಕೋಟಿ ರೂ ಲಾಟರಿ ಬಹುಮಾನದಲ್ಲಿ ಶೇ 10ರಷ್ಟು ಏಜೆನ್ಸಿ ಕಮಿಷನ್, ಆದಾಯ ತೆರಿಗೆ ಮತ್ತು ಹೆಚ್ಚುವರಿ ಶುಲ್ಕ ಕಡಿತಗೊಂಡು ವಿಜೇತರಿಗೆ ಸುಮಾರು 7 ಕೋಟಿ ರೂ. ಸಿಗಲಿದೆ. ಇದರ ಜೊತೆಗೆ ದ್ವಿತೀಯ ಬಹುಮಾನವು 10 ಟಿಕೆಟ್ಗಳಿಗೆ ತಲಾ 50 ಲಕ್ಷ ರೂ. ಮತ್ತು ತೃತೀಯ ಬಹುಮಾನವು 20 ಟಿಕೆಟ್ಗಳೀಗೆ ತಲಾ 10 ಲಕ್ಷ ರೂ. ನೀಡಲಾಗುತ್ತಿದೆ.