ನವದೆಹಲಿ: ಜಾಗತಿಕ ಆರ್ಥಿಕ ವಿದ್ಯಮಾನ ಹಾಗೂ ಅಂತಾ ರಾಷ್ಟ್ರೀಯ ರಾಜಕೀಯ ಬಿಕ್ಕಟ್ಟುಗಳಿಂದ ಸಾರ್ವಕಾಲಿಕ ಬೆಲೆ ಏರಿಕೆ ದಾಖಲಿಸಿದ ಚಿನ್ನ ಮತ್ತು ಬೆಳ್ಳಿಯ ಧಾರಣಿಯಲ್ಲಿ ಇಳಿಕೆ ಕಂಡಿದೆ.
ರಾಷ್ಟ್ರ ರಾಜಧಾನಿ ದೆಹಲಿಯ ಚಿನಿವಾರ ಪೇಟೆಯಲ್ಲಿ ಬುಧವಾರ ಪ್ರತಿ 10 ಗ್ರಾಂ. ಚಿನ್ನದ ಮೇಲೆ 425 ರೂ. ಇಳಿಕೆಯಾಗಿ ₹ 37,945ರಲ್ಲಿ ಮಾರಾಟ ಆಗುತ್ತಿದೆ. ಬಂಗಾರದ ನಡೆ ಅನುಸರಿಸಿದ ಬೆಳ್ಳಿಯು ಪ್ರತಿ ಕೆ.ಜಿ. ದರದ ಮೇಲೆ ₹ 690 ಕುಸಿದು ₹ 44,310ರಲ್ಲಿ ವಹಿವಾಟು ನಡೆಸುತ್ತಿದೆ.
ಜಾಗತಿಕ ಮಾರುಕಟ್ಟೆಯ ನ್ಯೂಯಾರ್ಕ್ನಲ್ಲಿ ಪ್ರತಿ ಔನ್ಸ್ ಚಿನ್ನ 1,509.09 ಡಾಲರ್ನಲ್ಲಿ ವಹಿವಾಟು ನಡೆಸುತ್ತಿದೆ. ಔನ್ಸ್ ಬೆಳ್ಳಿ 17.22ರಲ್ಲಿ ಮಾರಾಟ ಆಗುತ್ತಿದೆ. ಪ್ರತಿ 8 ಗ್ರಾಂ. ಸಾವರಿನ್ ಚಿನ್ನದ ಮೇಲೂ 100 ರೂ. ಇಳಿಕೆಯಾಗಿ ₹ 28,700 ಮಾರಾಟ ನಿರತವಾಗಿದೆ.
ದೆಹಲಿಯಲ್ಲಿ 99.9 ಹಾಗೂ 99.5 ಪ್ರತಿಶತದ ಶುದ್ಧತೆಯ ಚಿನ್ನದ ದರದಲ್ಲಿ ತಲಾ ₹ 425 ಇಳಿಕೆಯಾಗಿದ್ದು, ₹ 37,945 ಮತ್ತು 37,775ರಲ್ಲಿ ಗ್ರಾಹಕರು ಖರೀದಿಸುತ್ತಿದ್ದಾರೆ.