ಮುಂಬೈ : ಹೂಡಿಕೆದಾರರ ಖರೀದಿಯ ಭರಾಟೆ ನಡುವೆ ದೇಶೀಯ ಈಕ್ವಿಟಿ ಮಾರುಕಟ್ಟೆ ಬುಧವಾರದ ವಹಿವಾಟಿನಂದು ಮತ್ತೊಂದು ದಾಖಲೆಯ ಗರಿಷ್ಠ ಮಟ್ಟದಲ್ಲಿ ಕೊನೆಗೊಂಡಿತು. ಸತತ ಎಂಟನೇ ಸೀಷನ್ನಲ್ಲೂ ಸೆನ್ಸೆಕ್ಸ್ ಹಸಿರು ಬಣ್ಣದಲ್ಲಿ ನೆಲೆಸಿತು.
ಮುಂಬೈ ಷೇರು ಸೂಚ್ಯಂಕ ಸೆನ್ಸೆಕ್ಸ್ 316 ಅಂಕ ಅಥವಾ ಶೇ 0.73ರಷ್ಟು ಏರಿಕೆಯಾಗಿ 43,594 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಸೂಚ್ಯಂಕ ನಿಫ್ಟಿ 118 ಅಂಕ ಅಥವಾ ಶೇ 0.93ರಷ್ಟು ಏರಿಕೆಯಾಗಿ 12,749 ಅಂಕಗಳ ಮಟ್ಟದಲ್ಲಿ ಕೊನೆಗೊಂಡಿತು.
ಷೇರುಪೇಟೆ ಏರಿಕೆಯಲ್ಲಿ ಇನ್ಫೋಸಿಸ್, ಎಚ್‌ಡಿಎಫ್‌ಸಿ, ಆಕ್ಸಿಸ್ ಬ್ಯಾಂಕ್ ಮತ್ತು ಐಟಿಸಿ ಪ್ರಮುಖ ಕೊಡುಗೆ ನೀಡಿದ್ದರೆ, ರಿಲಯನ್ಸ್ ಇಂಡಸ್ಟ್ರೀಸ್ (ಆರ್‌ಐಎಲ್) ಅತಿದೊಡ್ಡ (ಶೇ 4ರಷ್ಟು) ಕುಸಿತ ಕಂಡಿತು.
ಕೋವಿಡ್-19 ಪ್ರಕರಣ ಏರಿಕೆಯ ನಡುವೆಯೂ ಲಸಿಕೆಯ ಸುದ್ದಿಯು ಪ್ರಯಾಣಿಕ ವರ್ಗದ ಸ್ಟಾಕ್‌ಗಳ ದರ ಏರಿಕೆಯಾದವು. ಯುರೋ ಎಸ್‌ಟಿಒಎಕ್ಸ್‌ಎಕ್ಸ್- 600 ಶೇ 0.4ರಷ್ಟು ಏರಿಕೆಯಾಗಿದ್ದು, ಈ ವಾರ 5 ಪ್ರತಿಶತದಷ್ಟು ಹೆಚ್ಚಳವಾಗಿದೆ. ಜಪಾನ್‌ನ ಹೊರಗಿನ ಏಷ್ಯಾ-ಪೆಸಿಫಿಕ್ ಷೇರುಗಳು ಶೇ 0.1ರಷ್ಟು ಲಾಭ ಕಂಡಿವೆ. ವಾಲ್ ಸ್ಟ್ರೀಟ್ ಫ್ಯೂಚರ್ಸ್ ಗೇಜ್ ಸಹ ಏರಿದ್ದು, ಎಸ್ & ಪಿ 500 ಫ್ಯೂಚರ್ ಶೇ 0.3ರಷ್ಟು ಏರಿಕೆಯಾಗಿದೆ.