ETV Bharat / business

ಷೇರು ಮಾರಾಟದ ಭಾರಕ್ಕೆ ಕುಸಿದ ಸೆನ್ಸೆಕ್ಸ್​: ಒಂದೇ ದಿನ 549 ಅಂಕ ಇಳಿಕೆ

ದಿನದ ಅಂತ್ಯದ ವೇಳೆಗೆ ಬಿಎಸ್‌ಇ ಸೂಚ್ಯಂಕ 549.49 ಅಂಕ ಅಥವಾ ಶೇ 1.11ರಷ್ಟು ತಗ್ಗಿ 49,034.67 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಸೂಚ್ಯಂಕ ನಿಫ್ಟಿ 161.90 ಅಂಕ ಕುಸಿದು 14,433.70 ಅಂಕಗಳಲ್ಲಿ ಕೊನೆಗೊಂಡಿತು.

Sensex
ಸೆನ್ಸೆಕ್ಸ್
author img

By

Published : Jan 15, 2021, 4:49 PM IST

ಮುಂಬೈ: ಜಾಗತಿಕ ಮಾರುಕಟ್ಟೆಯಲ್ಲಿ ಹೆಚ್ಚಿದ ಋಣಾತ್ಮಕ ಪ್ರವೃತ್ತಿಯ ಮಧ್ಯೆ ಇಂಡೆಕ್ಸಿಸ್ ಮೇಜರ್​ಗಳಾದ ಎಚ್‌ಡಿಎಫ್‌ಸಿ ಮತ್ತು ಐಸಿಐಸಿಐ ಬ್ಯಾಂಕ್‌ಗಳಲ್ಲಿನ ನಷ್ಟದಿಂದಾಗಿ ಈಕ್ವಿಟಿ ಬೆಂಚ್‌ಮಾರ್ಕ್ ಸೆನ್ಸೆಕ್ಸ್ ಶುಕ್ರವಾರ 549 ಅಂಕ ಕುಸಿಯಿತು.

30 ಷೇರುಗಳ ಬಿಎಸ್‌ಇ ಸೂಚ್ಯಂಕವು ಆರಂಭಿಕ ವಹಿವಾಟಿನಲ್ಲೇ 246.16 ಅಂಕ ಮತ್ತು ರಾಷ್ಟ್ರೀಯ ಸೂಚ್ಯಂಕ ನಿಫ್ಟಿ 67.65 ಅಂಕ ಕುಸಿತ ಕಂಡಿತ್ತು. ಹೆಚ್ಚಿನ ಮಟ್ಟದ ಲಾಭ ಬುಕ್ಕಿಂಗ್​ನಿಂದಾಗಿ ಪೇಟೆಯಲ್ಲಿ ಷೇರುಗಳ ಮಾರಾಟದ ಒತ್ತಡದಿಂದ ಸೂಚ್ಯಂಕ ಇಳಿಕೆಯಾಗಿದೆ ಎಂದು ವ್ಯಾಪಾರಿಗಳು ಅಭಿಪ್ರಾಯಪಟ್ಟರು.

ಇದನ್ನೂ ಓದಿ: ಬಿಮ್ಸ್​​ಟೆಕ್ ರಾಷ್ಟ್ರಗಳತ್ತ ತೆರಳುವಂತೆ ದೇಶಿ ಸ್ಟಾರ್ಟ್ಅಪ್​ ಉದ್ಯಮಿಗಳಿಗೆ ಗೋಯಲ್ ಕರೆ​

ದಿನದ ಅಂತ್ಯದ ವೇಳೆಗೆ ಬಿಎಸ್‌ಇ ಸೂಚ್ಯಂಕ 549.49 ಅಂಕ ಅಥವಾ ಶೇ 1.11ರಷ್ಟು ತಗ್ಗಿ 49,034.67 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಸೂಚ್ಯಂಕ ನಿಫ್ಟಿ 161.90 ಅಂಕ ಕುಸಿದು 14,433.70 ಅಂಕಗಳಲ್ಲಿ ಕೊನೆಗೊಂಡಿತು.

ಸೆನ್ಸೆಕ್ಸ್ ಪ್ಯಾಕ್‌ನಲ್ಲಿ ಟೆಕ್ ಮಹೀಂದ್ರಾ ಅಗ್ರ ನಷ್ಟ ಅನುಭವಿಸಿದ್ದು, ಶೇ 4ಕ್ಕಿಂತಲೂ ಅಧಿಕ ಕುಸಿಯಿತು. ಎಚ್‌ಸಿಎಲ್ ಟೆಕ್, ಒಎನ್‌ಜಿಸಿ, ಏಷ್ಯಾನ್ ಪೆಯಿಂಟ್ಸ್, ಅಲ್ಟ್ರಾಟೆಕ್ ಸಿಮೆಂಟ್ ಮತ್ತು ಎಚ್‌ಡಿಎಫ್‌ಸಿ ನಂತರದ ಸ್ಥಾನದಲ್ಲಿವೆ. ಮತ್ತೊಂದೆಡೆ ಭಾರ್ತಿ ಏರ್‌ಟೆಲ್, ಐಟಿಸಿ, ಬಜಾಜ್ ಆಟೋ ಮತ್ತು ಬಜಾಜ್ ಫೈನಾನ್ಸ್ ಲಾಭ ಗಳಿಸಿದವು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.