ನವದೆಹಲಿ: ಕಚ್ಚಾ ತೈಲ ಬೆಲೆ ಮತ್ತು ದುರ್ಬಲ ಜಾಗತಿಕ ಮಾರುಕಟ್ಟೆಗಳ ಕುಸಿತದಿಂದಾಗಿ ಮುಂಬೈ ಸೂಚ್ಯಂಕದ ಸೆನ್ಸೆಕ್ಸ್ ಮಂಗಳವಾರದ ವಹಿವಾಟಿನಂದು ಶೇ 3ರಷ್ಟು ಕುಸಿತ ದಾಖಲಿಸಿದೆ.
ದಿನದ ವಹಿವಾಟಿನಲ್ಲಿ ಹಣಕಾಸು, ಲೋಹ, ಇಂಧನ ಮತ್ತು ಆಟೋ ಷೇರುಗಳು ಭಾರಿ ಪ್ರಮಾಣದಲ್ಲಿ ಮಾರಾಟದ ಒತ್ತಡಕ್ಕೆ ಒಳಗಾದವು. ಸೆನ್ಸೆಕ್ಸ್ನ 30 ಷೇರುಗಳಲ್ಲಿ 27 ಷೇರುಗಳು ರೆಡ್ ವಲಯದಲ್ಲಿ ಕೊನೆಗೊಂಡಿವೆ. ಇಂಡಸ್ಇಂಡ್ ಬ್ಯಾಂಕ್ನ ಷೇರು ಮೌಲ್ಯದಲ್ಲಿ ಶೇ 12ರಷ್ಟು ಕಸಿತವಾಗುವ ಮೂಲದ ಅತಿ ಹೆಚ್ಚು ನಷ್ಟ ಅನುಭವಿಸಿತು. ನಂತರದ ಸ್ಥಾನದಲ್ಲಿ ಬಜಾಜ್ ಫೈನಾನ್ಸ್ ಶೇ 9ರಷ್ಟು, ಐಸಿಐಸಿಐ ಬ್ಯಾಂಕ್ ಶೇ 8ಕ್ಕಿಂತಲೂ ಹೆಚ್ಚು, ಆಕ್ಸಿಸ್ ಬ್ಯಾಂಕ್ ಶೇ 7.6ರಷ್ಟು ಕುಸಿತ ಕಂಡವು.
ದಿನದ ವಹಿವಾಟಿನ ಅಂತ್ಯಕ್ಕೆ ಬಿಎಸ್ಇ ಸೆನ್ಸೆಕ್ಸ್ 1,011 ಅಂಕ ಅಥವಾ ಶೇ 3.2ರಷ್ಟು ಕುಸಿದು 30,637 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಸೂಚ್ಯಂಕ ನಿಫ್ಟಿ 280.40 ಅಂಕ ಇಳಿಕೆ ಕಂಡು 8981.45 ಅಂಕಗಳ ಮಟ್ಟದಲ್ಲಿ ನಿರಾಶದಾಯಕವಾಗಿ ಕೊನೆಗೊಂಡಿತು.
ಬಜಾಜ್ ಫೈನಾನ್ಸ್, ಐಸಿಐಸಿಐ ಬ್ಯಾಂಕ್, ಆಕ್ಸಿಸ್ ಬ್ಯಾಂಕ್, ಎಂ & ಎಂ, ಟಾಟಾ ಸ್ಟೀಲ್, ಒಎನ್‌ಜಿಸಿ ಮತ್ತು ಮಾರುತಿ ಷೇರಗಳು ನಷ್ಟ ಕಂಡುಕೊಂಡಿದ್ದರೇ ಭಾರ್ತಿ ಏರ್‌ಟೆಲ್, ಹೀರೋ ಮೋಟೊಕಾರ್ಪ್ ಮತ್ತು ನೆಸ್ಲೆ ಇಂಡಿಯಾ ಗರಿಷ್ಠ ಲಾಭ ಗಳಿಸಿದವು.
ಅಮೆರಿಕದ ವೆಸ್ಟ್ ಟೆಕ್ಸಸ್ ಮಧ್ಯಂತರ (ಡಬ್ಲ್ಯುಟಿಐ) ಮೇ ಒಪ್ಪಂದ ವಿತರಣೆಯ ಕಚ್ಚಾ ತೈಲ ದರವು ಪ್ರತಿ ಬ್ಯಾರೆಲ್ ಮೇಲೆ ಐತಿಹಾಸಿಕ 1.1 ಡಾಲರ್ಗೆ ಕುಸಿಯಿತು. ಬ್ರೆಂಟ್ ಕಚ್ಚಾ ತೈಲ, ಜೂನ್ ವಿತರಣೆ ಒಪ್ಪಂದ ದರವು ಪ್ರತಿ ಬ್ಯಾರೆಲ್ ಮೇಲೆ ಶೇ 5ರಷ್ಟು ಇಳಿಕೆಯಾಗಿ 20.30 ಡಾಲರ್ನಲ್ಲಿ ವಹಿವಾಟು ನಡೆಸಿತು. ಋಣಾತ್ಮಕ ಕಚ್ಚಾ ತೈಲದಿಂದ ಅಮೆರಿಕದ ವಾಲ್ ಸ್ಟ್ರೀಟ್ ಕುಸಿತ ಕಂಡಿತು. ತತ್ಪರಿಣಾಮವಾಗಿ ಶಾಂಘೈ, ಹಾಂಗ್ಕಾಂಗ್, ಟೊಕಿಯೋ ಹಾಗೂ ಸಿಯೋಲ್ ಮಾರುಕಟ್ಟೆಗಳು ಸಹ ದೊಡ್ಡ ಮಟ್ಟದ ನಷ್ಟಕ್ಕೆ ಒಳಗಾದವು.