ETV Bharat / business

279 ಅಂಕ ಜಿಗಿದ ಸೆನ್ಸೆಕ್ಸ್​: ದಿನದ ಲಾಭಾಂಶ ಬಾಚಿಕೊಂಡ ಐಟಿ, ಹಣಕಾಸು ವಲಯ

ದಿನದ ಅಂತ್ಯಕ್ಕೆ ಮುಂಬೈ ಷೇರು ಸೂಚ್ಯಂಕ ಸೆನ್ಸೆಕ್ಸ್​  278.60 ಅಂಕಗಳ ಏರಿಕೆಯೊಂದಿಗೆ 278.60 ಅಂಶಗಳ ಮಟ್ಟದಲ್ಲೂ ರಾಷ್ಟ್ರೀಯ ಷೇರು ಸೂಚ್ಯಂಕ ನಿಫ್ಟಿ 100.10 ಅಂಕಗಳ ಜಿಗತದೊಂದಿಗೆ 11,257.10 ಅಂಶಗಳಲ್ಲಿ ಆಶಾದಾಯಕವಾಗಿ ಮುಕ್ತಾಯಗೊಳಿಸಿತು.

ಸಾಂದರ್ಭಿಕ ಚಿತ್ರ
author img

By

Published : May 16, 2019, 5:10 PM IST

ಮುಂಬೈ: ಜಾಗತಿಕ ಷೇರು ಮಾರುಕಟ್ಟೆಗಳಲ್ಲಿ ಮಿಶ್ರ ಪ್ರತಿಕ್ರಿಯೆ ತೋರಿ ಬಂದಿರುವ ಹೊರತಾಗಿಯೂ ಗುರುವಾರದ ವಹಿವಾಟಿನಲ್ಲಿ ಸೆನ್ಸೆಕ್ಸ್​ 278 ಅಂಕಗಳ ಜಿಗಿತ ದಾಖಲಿಸಿದೆ.

ಐಟಿ ಮತ್ತು ಹಣಕಾಸು ವಲಯದ ಷೇರುಗಳ ಮೌಲ್ಯದಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ. ದಿನದ ಅಂತ್ಯಕ್ಕೆ ಮುಂಬೈ ಷೇರು ಸೂಚ್ಯಂಕ ಸೆನ್ಸೆಕ್ಸ್​ 278.60 ಅಂಕಗಳ ಏರಿಕೆಯೊಂದಿಗೆ 278.60 ಅಂಶಗಳ ಮಟ್ಟದಲ್ಲೂ ರಾಷ್ಟ್ರೀಯ ಷೇರು ಸೂಚ್ಯಂಕ ನಿಫ್ಟಿ 100.10 ಅಂಕಗಳ ಜಿಗತದೊಂದಿಗೆ 11,257.10 ಅಂಶಗಳಲ್ಲಿ ಆಶಾದಾಯಕವಾಗಿ ಮುಕ್ತಾಯಗೊಳಿಸಿತು.

ಬಜಾಜ್​ ಫಿನಾನ್ಸ್​, ಟಾಟಾ ಮೋಟರ್‌, ಇನ್ಫೋಸಿಸ್‌, ವೇದಾಂತ, ಒಎನ್‌ಜಿಸಿ, ಪವರ್‌ ಗ್ರಿಡ್‌, ಎನ್‌ಟಿಪಿಸಿ, ಎಕ್ಸಿಸ್‌ ಬ್ಯಾಂಕ್‌, ಐಸಿಐಸಿಐ ಬ್ಯಾಂಕ್‌, ಕೋಟಕ್‌ ಬ್ಯಾಂಕ್‌, ಎಸ್‌ಬಿಐ, ಎಚ್​ಡಿಎಫ್​ಸಿ ಬ್ಯಾಂಕ್‌, ಟಾಟಾ ಸ್ಟೀಲ್‌ ಷೇರುಗಳು ಏರಿಕೆ ದಾಖಲಿಸಿದವು.

ಏಷ್ಯಾನ್ ಪೆಯಿಂಟ್ಸ್​, ಮಾರುತಿ, ಎಚ್​ಡಿಎಫ್​ಸಿ, ಎಂ ಆ್ಯಂಡ್ ಎಂ, ಐಟಿಸಿ, ಕೋಲ್ ಇಂಡಿಯಾ, ಇಂಡಸ್​ಇಂಡ್​ ಬ್ಯಾಂಕ್​, ಭಾರ್ತಿ ಏರ್​ಟೆಲ್​, ಯೆಸ್​ ಬ್ಯಾಂಕ್​ ಷೇರುಗಳ ಮೌಲ್ಯದಲ್ಲಿ ಇಳಿಕೆ ಕಂಡುಬಂತು.

ಡಾಲರ್‌ ಎದುರು ರೂಪಾಯಿ 27 ಪೈಸೆ ಏರಿಕೆದಾಖಲಿಸಿ ₹ 70.07 ಮಟ್ಟದಲ್ಲಿ ವಹಿವಾಟು ನಿರತವಾಗಿದೆ. ಬ್ರೆಂಟ್‌ ಕಚ್ಚಾ ತೈಲ ಬೆಲೆ ಶೇ 0.56ರ ಏರಿಕೆ ಕಂಡು ಬ್ಯಾರಲ್‌ಗೆ 72.17 ಡಾಲರ್‌ ದರದಲ್ಲಿ ಮಾರಾಟ ಕಂಡಿತು. ವಿದೇಶಿ ಸಾಂಸ್ಥಿಕ ಹೂಡಿಕೆದಾರರು ₹ 1,142.44 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದರೇ ದೇಶಿ ಸಾಂಸ್ಥಿಕ ಹೂಡಿಕೆದಾರರು ₹ 671.77 ಕೋಟಿ ಮೌಲ್ಯದ ಷೇರು ಖರೀಸಿದರು.

Intro:Body:Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.