ETV Bharat / business

ಆರಂಭಿಕ ವಹಿವಾಟಿನಲ್ಲೇ ದಾಖಲೆ ಜಿಗಿತ ಕಂಡ ಷೇರುಪೇಟೆ ಸೆನ್ಸೆಕ್ಸ್​, ನಿಫ್ಟಿ - ಆರಂಭಿಕ ವಹಿವಾಟಿನಲ್ಲೇ ದಾಖಲೆ ಜಿಗಿತ ಕಂಡ ಷೇರುಪೇಟೆ ಸೆನ್ಸೆಕ್ಸ್​, ನಿಫ್ಟಿ

ಆರಂಭಿಕ ವಹಿವಾಟಿನಲ್ಲೇ ಮುಂಬೈ ಷೇರುಪೇಟೆಯಲ್ಲಿ ಗೂಳಿ ಓಟ ಕಂಡು ಬಂದಿದೆ. ಸೆನ್ಸೆಕ್ಸ್​ 250 ಅಂಕ, ನಿಫ್ಟಿ 80.85 ರಷ್ಟು ಹೆಚ್ಚಳವಾಗಿದೆ.

ಷೇರುಪೇಟೆ
ಷೇರುಪೇಟೆ
author img

By

Published : Sep 21, 2021, 12:10 PM IST

ಮುಂಬೈ: ನಿನ್ನೆ ವಹಿವಾಟಿನಲ್ಲಿ ಭಾರಿ ಕುಸಿತ ಕಂಡಿದ್ದ ಷೇರುಪೇಟೆ ಇಂದು ಪುಟಿದೆದ್ದಿದೆ. ದಿನದ ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್​ 250 ಅಂಕಗಳಷ್ಟು ಏರಿಕೆ ಕಂಡಿದ್ದು, 58,755.43 ಕ್ಕೆ ತಲುಪಿದೆ, ನಿಫ್ಟಿ 80.85 ಪಾಯಿಂಟ್​ ಹೆಚ್ಚಳವಾಗಿದ್ದು 17,477.75 ಕ್ಕೇರಿದೆ.

ಹೆಚ್​ಸಿಎಲ್​​ನ ವಹಿವಾಟು ಶೇಕಡಾ 2 ರಷ್ಟು ಏರಿಕೆಯಾಗಿದೆ. ನಂತರದ ಸ್ಥಾನದಲ್ಲಿ ಎಚ್‌ಯುಎಲ್, ಇನ್ಫೋಸಿಸ್, ಏಶಿಯನ್ ಪೇಂಟ್ಸ್, ಟಾಟಾ ಸ್ಟೀಲ್ ಮತ್ತು ಐಟಿಸಿಗಳಿವೆ. ಮತ್ತೊಂದೆಡೆ, ಮಾರುತಿ, ನೆಸ್ಲೆ ಇಂಡಿಯಾ, ಸನ್ ಫಾರ್ಮಾ, ಬಜಾಜ್ ಫಿನ್‌ಸರ್ವ್ ಮತ್ತು ಬಜಾಜ್ ಆಟೋಗಳು ಹಿನ್ನಡೆ ಅನುಭವಿಸಿವೆ.

ಹಿಂದಿನ ದಿನ ಜಾಗತಿಕ ಮಾರುಕಟ್ಟೆಗಳಲ್ಲಿ ಕಂಡುಬಂದ ಮಾರಾಟದ ಒತ್ತಡದಿಂದಾಗಿ ದೇಶದ ಷೇರುಪೇಟೆಗಳಲ್ಲಿ ವಹಿವಾಟು ಭಾರಿ ಇಳಿಕೆ ಕಂಡಿತು. ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ 525 ಅಂಶ ಇಳಿಕೆ ಕಂಡು 58,490 ಅಂಶಗಳಲ್ಲಿ ವಹಿವಾಟು ಅಂತ್ಯಗೊಂಡಿತ್ತು. ದಿನದ ವಹಿವಾಟಿನಲ್ಲಿ ಹೂಡಿಕೆದಾರರ ಮೌಲ್ಯವು ₹ 3.49 ಲಕ್ಷ ಕೋಟಿಗಳಷ್ಟು ಇಳಿಯಿತು. ಇದರಿಂದ ಬಿಎಸ್‌ಇನಲ್ಲಿ ನೋಂದಾಯಿತ ಕಂಪನಿಗಳ ಒಟ್ಟಾರೆ ಬಂಡವಾಳ ಮೌಲ್ಯವು ₹ 255.47 ಲಕ್ಷ ಕೋಟಿಗಳಿಗೆ ತಲುಪಿದೆ.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 188 ಅಂಶ ಇಳಿಕೆ ಕಂಡು 17,397 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ. ನಿನ್ನೆಯ ವಹಿವಾಟಿನಲ್ಲಿ ಟಾಟಾ ಸ್ಟೀಲ್‌ ಕಂಪನಿಯ ಷೇರು ಮೌಲ್ಯ ಶೇಕಡಾ 9.53ರಷ್ಟು ಇಳಿಕೆ ಕಂಡಿತ್ತು. ಬಿಎಸ್‌ಇ ಮಿಡ್‌ ಮತ್ತು ಸ್ಮಾಲ್‌ ಕ್ಯಾಪ್‌ ಸೂಚ್ಯಂಕಗಳು ಶೇ 1.84ರಷ್ಟು ಇಳಿಕೆ ಕಂಡಿದ್ದವು.

ಅಂತಾರಾಷ್ಟ್ರೀಯ ತೈಲ ಬೆಂಚ್‌ಮಾರ್ಕ್ ಬ್ರೆಂಟ್ ಕಚ್ಚಾ ತೈಲವು ಪ್ರತಿ ಬ್ಯಾರೆಲ್‌ಗೆ ಶೇಕಡಾ 0.91 ರಷ್ಟು ಏರಿಕೆಯಾಗಿ 74.59 ಡಾಲರ್‌ಗೆ ತಲುಪಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.