ETV Bharat / business

RBI ಬಡ್ಡಿದರ ಇಳಿಕೆ ಮಧ್ಯೆಯೂ 3 ದಿನಗಳ ಗೂಳಿಯ ಓಟಕ್ಕೆ ಬ್ರೇಕ್

author img

By

Published : Mar 27, 2020, 6:35 PM IST

ಶುಕ್ರವಾರದ ವಾರಾಂತ್ಯದ ವಹಿವಾಟಿನಲ್ಲಿ ಮುಂಬೈ ಸೂಚ್ಯಂಕ ಬಿಎಸ್​ಎ 131.18 ಅಂಶಗಳಷ್ಟು ಇಳಿಕೆಯಾಗಿ 29,815.59 ಮಟ್ಟದಲ್ಲೂ ರಾಷ್ಟ್ರೀಯ ಸೂಚ್ಯಂಕ ನಿಫ್ಟಿ 18.80 ಅಂಶಗಳ ಏರಿಕೆಯೊಂದಿಗೆ 8,660.25 ಅಂಶಗಳ ಮಟ್ಟದಲ್ಲಿ ಕೊನೆಗೊಂಡಿತು.

Nifty
ನಿಫ್ಟಿ

ಮುಂಬೈ: ಕೊರೊನಾ ಸೋಂಕಿನಿಂದ ಆರ್ಥಿಕತೆಯಲ್ಲಿ ಸಂಭವನೀಯ ಕುಸಿತವನ್ನು ತಡೆಯಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ತುರ್ತು ಕ್ರಮವಾಗಿ ರೆಪೊ ದರವನ್ನು 75 ಬೇಸಿಸ್ ಪಾಯಿಂಟ್‌ (ಬಿಪಿಎಸ್) ಕಡಿತಗೊಳಿಸಿದ್ದರೂ ಶುಕ್ರವಾರದ ಇಕ್ವಿಟಿ ಮಾರುಕಟ್ಟೆ ನಕರಾತ್ಮಕವಾಗಿ ಕೊನೆಗೊಳಿಸಿತು.

ಆರ್‌ಬಿಐ ಮೂರು ತಿಂಗಳ ಕಾಲ ಅಸಲು ಮತ್ತು ಬಡ್ಡಿ ಪಾವತಿಗಳಿಗೆ ನಿಷೇಧವನ್ನು ವಿಧಿಸಿತು. ಬ್ಯಾಂಕ್​ಗಳು ಮತ್ತು ಬ್ಯಾಂಕೇತರ ಹಣಕಾಸು ಕಂಪನಿಗಳಿಗೆ ಪಾವತಿ ಆಗದ ಮೊತ್ತವನ್ನು ನಿಷ್ಕ್ರಿಯ ಆಸ್ತಿ ಎಂದು ಪರಿಗಣಿಸಲಾಗುವುದಿಲ್ಲ ಎಂದು ಹೇಳಿತು. ಜನ ಸಾಮಾನ್ಯರ ಅಗತ್ಯಕ್ಕೆ ಅನುಗುಣವಾಗಿ ತೆಗೆದುಕೊಂಡ ಈ ನಿರ್ಧಾರಗಳು ಷೇರುಪೇಟೆಗೆ ಚೇತರಿಕೆ ನೀಡಲಿಲ್ಲ.

ಶುಕ್ರವಾರರ ವಾರಾಂತ್ಯದ ವಹಿವಾಟಿನಲ್ಲಿ ಮುಂಬೈ ಸೂಚ್ಯಂಕ ಬಿಎಸ್​ಎ 131.18 ಅಂಶಗಳಷ್ಟು ಇಳಿಕೆಯಾಗಿ 29,815.59 ಮಟ್ಟದಲ್ಲೂ ರಾಷ್ಟ್ರೀಯ ಸೂಚ್ಯಂಕ ನಿಫ್ಟಿ 18.80 ಅಂಶಗಳ ಏರಿಕೆಯೊಂದಿಗೆ 8,660.25 ಅಂಶಗಳ ಮಟ್ಟದಲ್ಲಿ ಕೊನೆಗೊಂಡಿತು.

ಬಜಾಜ್​ ಫೈನಾನ್ಸ್​ ದಿನದ ವಹಿವಾಟಿನಲ್ಲಿ ಗರಿಷ್ಠ ಪ್ರಮಾಣದ ನಷ್ಟಕ್ಕೆ ಒಳಗಾಯಿತು. ಉಳಿದಂತೆ ಹೀರೋ ಮೋಟೊಕಾರ್ಪ್​, ಇಂಡಸ್​ಲ್ಯಾಂಡ್ ಬ್ಯಾಂಕ್, ಮಾರುತಿ ಹಾಗೂ ಎಚ್​ಸಿಎಲ್​ ಟೆಕ್​ ಷೇರುಗಳು ಮೌಲ್ಯದಲ್ಲಿ ಇಳಿಕೆ ಆದವು. ಎಕ್ಸಸ್​ ಬ್ಯಾಂಕ್, ಐಟಿಸಿ, ಎನ್​ಟಿಪಿಸಿ ಮತ್ತು ಎಂ&ಎಂ ಷೇರುಗಳು ಗರಿಷ್ಠ ಲಾಭ ಮಾಡಿಕೊಂಡವು.

ಜಾಗತಿಕ ಮಾರುಕಟ್ಟೆಯಲ್ಲಿ ಶಾಂಘೈ, ಹಾಂಕಾಂಗ್​​, ಟೋಕಿಯೊ ಮತ್ತು ಸಿಯೋಲ್‌ನಲ್ಲಿನ ಬೆಂಚ್​ಮಾರ್ಕ್​ ಮೇಲ್ಮಟ್ಟದಲ್ಲಿ ಕೊನೆಗೊಂಡವು. ಆದರೆ, ಯುರೋಪಿನ ಮಾರುಕಟ್ಟೆಗಳು ರೆಡ್​ ಬಣ್ಣದಲ್ಲಿ ವಹಿವಾಟು ನಡೆಸುತ್ತಿವೆ. ಅಂತಾರಾಷ್ಟ್ರೀಯ ಫ್ಯೂಚರ್​ ಬ್ರೆಂಟ್ ಕಚ್ಚಾ ತೈಲವು ಪ್ರತಿ ಡಾಲರ್​ ಮೇಲೆ ಶೇ 2.20 ಇಳಿದು 25.76 ಡಾಲರ್‌ಗೆ ತಲುಪಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.