ETV Bharat / business

ಯುಎಸ್​ ಬಾಂಡ್​ ಮಾರುಕಟ್ಟೆ ಪ್ರಕ್ಷುಬ್ಧತೆಗೆ ಸೆನ್ಸೆಕ್ಸ್​ 440 ಅಂಕ ಇಳಿಕೆ - ಇಂದಿನ ನಿಫ್ಟಿ

ಮುಂಬೈ ರಾಷ್ಟ್ರೀಯ ಸೂಚ್ಯಂಕ ಸೆನ್ಸೆಕ್ಸ್ ಬೆಳಗ್ಗೆ 10.10ರ ವೇಳಗೆ 113 ಅಂಕ ಕುಸಿದು 50,732 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಸೂಚ್ಯಂಕ ನಿಫ್ಟಿ 34 ಅಂಕ ಇಳಿಕೆಯಾಗಿ 15,046 ಅಂಕಗಳ ಮಟ್ಟದಲ್ಲಿ ವಹಿವಾಟು ನಿರತವಾಗಿದೆ.

Sensex
Sensex
author img

By

Published : Mar 5, 2021, 10:46 AM IST

ಮುಂಬೈ: ಯುಎಸ್ ಬಾಂಡ್ ಮಾರುಕಟ್ಟೆ ಪ್ರಕ್ಷುಬ್ಧತೆಯು ಜಾಗತಿಕವಾಗಿ ಹೂಡಿಕೆದಾರರ ಚಿಂತೆಗೆ ನೂಕಿದ್ದರಿಂದ ಶುಕ್ರವಾರದ ಆರಂಭಿಕ ವಹಿವಾಟಿನಲ್ಲಿ ಬಿಎಸ್ಇ ಬೆಂಚ್‌ಮಾರ್ಕ್ ಸೆನ್ಸೆಕ್ಸ್ 440 ಅಂಕ ಕುಸಿದಿದ್ದು, ನಿಫ್ಟಿ 15,000 ಸಾವಿರ ಗಡಿಯಿಂದ ಕಳಗಿಳಿದಿದೆ.

ಮುಂಬೈ ರಾಷ್ಟ್ರೀಯ ಸೂಚ್ಯಂಕ ಸೆನ್ಸೆಕ್ಸ್ ಬೆಳಗ್ಗೆ 10.10ರ ವೇಳಗೆ 113 ಅಂಕ ಕುಸಿದು 50,732 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಸೂಚ್ಯಂಕ ನಿಫ್ಟಿ 34 ಅಂಕ ಇಳಿಕೆಯಾಗಿ 15,046 ಅಂಕಗಳ ಮಟ್ಟದಲ್ಲಿ ವಹಿವಾಟು ನಿರತವಾಗಿದೆ.

ಸೆನ್ಸೆಕ್ಸ್ ಪಟ್ಟಿಯಲ್ಲಿ ಇಂಡಸ್ಇಂಡ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಎಸ್‌ಬಿಐ, ಪವರ್‌ಗ್ರಿಡ್ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್ ದಿನದ ಟಾಪ್​ ಲೂಸರ್​ಗಳಾಗಿದ್ದು ಶೇ 3ರಷ್ಟು ಕುಸಿದಿವೆ. 21 ಷೇರುಗಳು ರೆಡ್​ ವಲಯದಲ್ಲಿ ವಹಿವಾಟು ನಡೆಸುತ್ತಿವೆ.

ಏಷ್ಯಾದ ಇತರೆಡೆಗಳಲ್ಲಿ ಬಾಂಡ್ ಮಾರುಕಟ್ಟೆಗಳಲ್ಲಿ ಇಳುವರಿ ಹೆಚ್ಚುತ್ತಿರುವ ಆತಂಕದ ಮಧ್ಯೆ ವಾಲ್ ಸ್ಟ್ರೀಟ್‌ನಲ್ಲಿ ಹಿಮ್ಮುಖವಾದ ಬಳಿಕ ಈಕ್ವಿಟಿ ಮಾರುಕಟ್ಟೆಗಳು ಶುಕ್ರವಾರದಂದು ಸಹ ತಮ್ಮ ಕುಸಿತ ಮುಂದುವರಿಸಿವೆ.

ಇದನ್ನೂ ಓದಿ: ರಿಲಯನ್ಸ್​ ಕಂಪನಿ ಉದ್ಯೋಗಿಗಳು & ಕುಟುಂಬಸ್ಥರಿಗೆ ಲಸಿಕಾ ವೆಚ್ಚ ನೀಡ್ತೀವಿ: ನೀತಾ ಅಂಬಾನಿ ಘೋಷಣೆ

ಯುಎಸ್ ಮಾರುಕಟ್ಟೆಯಲ್ಲಿ 'ಬಾಂಡ್ ಬೇರ್ಸ್ ವರ್ಸಸ್ ಈಕ್ವಿಟಿ ಬುಲ್ಸ್' ಆಟವು ಇತರ ಅಭಿವೃದ್ಧಿ ಹೊಂದಿದ ಮತ್ತು ಉದಯೋನ್ಮುಖ ಮಾರುಕಟ್ಟೆಗಳ ಮೇಲೆ ತನ್ನ ಪ್ರಭಾವ ಮುಂದುವರಿಸಲಿದೆ. ಹೆಚ್ಚು ಮೌಲ್ಯಯುತ ನಾಸ್ಡಾಕ್ ಹಿಮ್ಮುಖ ಸ್ಥಿತಿಯಲ್ಲಿದ್ದು, ಇದು ದಾಖಲೆಯ ಗರಿಷ್ಠ ಮಟ್ಟದಿಂದ ಶೇ 10ರಷ್ಟು ಕುಸಿದಿದೆ.

ಗುರುವಾರದ ವಹಿವಾಟಿನಂದು ಸೆನ್ಸೆಕ್ಸ್ 598.57 ಅಂಕ ಅಥವಾ ಶೇ 1.16ರಷ್ಟು ಕುಸಿದಿದೆ. ನಿಫ್ಟಿ ಕೂಡ 164.85 ಅಂಕ ಅಥವಾ ಶೇ 1.08ರಷ್ಟು ಇಳಿಕೆಯಾಗಿತ್ತು. ಜಾಗತಿಕ ಕಚ್ಚಾ ತೈಲ ಬ್ರೆಂಟ್ ಪ್ರತಿ ಬ್ಯಾರೆಲ್‌ಗೆ ಶೇ 0.77ರಷ್ಟು ಹೆಚ್ಚಳವಾಗಿ 64.32 ಡಾಲರ್‌ನಲ್ಲಿ ವಹಿವಾಟು ನಡೆಸುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.