ETV Bharat / business

ಮುಂಬೈ ಷೇರುಪೇಟೆಗೆ ಕೆಲ ರಾಜ್ಯಗಳ ಒಮಿಕ್ರಾನ್‌ ನಿರ್ಬಂಧದ ಹೊಡೆತ ; ದಿನದ ಆರಂಭದಲ್ಲೇ ಸೆನ್ಸೆಕ್ಸ್‌ 400 ಅಂಕಗಳ ಕುಸಿತ - ಮುಂಬೈ ಷೇರು ಮಾರುಕಟ್ಟೆ

ವಾರದ ಆರಂಭದಲ್ಲೇ ಮುಂಬೈ ಷೇರುಪೇಟೆಯಲ್ಲಿ ಸೆನ್ಸೆಕ್ಸ್‌ 400 ಅಂಕಗಳ ಕುಸಿತ ಕಂಡು 56,679ರಲ್ಲಿ ವಹಿವಾಟು ನಡೆಸುತ್ತಿದೆ. ರಾಷ್ಟ್ರೀಯ ಸಂವೇದಿ ಸೂಚ್ಯಂಕ ನಿಫ್ಟಿ 128 ಅಂಕಗಳ ಇಳಿಕೆಯ ಬಳಿಕ 16,875ಕ್ಕೆ ಇಳಿದೆ. ಮಿಡ್-ಸೆಷನ್ ವ್ಯವಹಾರದಲ್ಲಿ ಸೆನ್ಸೆಕ್ಸ್ 144 ಅಂಕಗಳ ಏರಿಕೆ ಕಂಡಿದೆ..

Sensex slumps over 400 pts in early trade; Nifty drops below 16,900
ಮುಂಬೈ ಷೇರುಪೇಟೆಗೆ ಕೆಲ ರಾಜ್ಯಗಳ ಒಮಿಕ್ರಾನ್‌ ನಿರ್ಬಂಧದ ಹೊಡೆತ; ದಿನದ ಆರಂಭದಲ್ಲೇ ಸೆನ್ಸೆಕ್ಸ್‌ 400 ಅಂಕಗಳ ಕುಸಿತ
author img

By

Published : Dec 27, 2021, 12:38 PM IST

ಮುಂಬೈ : ಕೋವಿಡ್‌ ರೂಪಾಂತರಿ ಒಮಿಕ್ರಾನ್‌ ಹೆಚ್ಚುತ್ತಿರುವುದರಿಂದ ದೇಶದ ವಿವಿಧ ರಾಜ್ಯಗಳಲ್ಲಿ ವಿಧಿಸುತ್ತಿರುವ ನಿರ್ಬಂಧಗಳು ಮುಂಬೈ ಷೇರುಪೇಟೆಯಲ್ಲಿಂದು ಪರಿಣಾಮ ಬೀರಿದೆ. ವಾರದ ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ 400 ಅಂಕಗಳ ಕುಸಿತ ಕಂಡು 56,679ರಲ್ಲಿ ವಹಿವಾಟು ನಡೆಸುತ್ತಿದೆ. ರಾಷ್ಟ್ರೀಯ ಸಂವೇದಿ ಸೂಚ್ಯಂಕ ನಿಫ್ಟಿ 128 ಅಂಕಗಳ ಇಳಿಕೆಯ ಬಳಿಕ 16,875ಕ್ಕೆ ತಲುಪಿದೆ.

ಇಂಡಸ್‌ಇಂಡ್ ಬ್ಯಾಂಕ್, ರಿಲಯನ್ಸ್ ಇಂಡಸ್ಟ್ರೀಸ್, ಇನ್ಫೋಸಿಸ್, ಹೆಚ್‌‌ಡಿಎಫ್‌ಸಿ ಬ್ಯಾಂಕ್‌, ಬಜಾಜ್ ಫೈನಾನ್ಸ್, ಏಷ್ಯನ್ ಪೇಂಟ್ಸ್, ಬಜಾಜ್ ಫಿನ್‌ಸರ್ವ್, ಮಾರುತಿ ಹಾಗೂ ಟಾಟಾ ಸ್ಟೀಲ್ ಷೇರುಗಳು ಹೆಚ್ಚಿನ ನಷ್ಟ ಅನುಭವಿಸಿದವು. ಆರಂಭದಲ್ಲಿ ಇಂಡಸ್‌ಇಂಡ್ ಬ್ಯಾಂಕ್ ಷೇರುಗಳ ಮೌಲ್ಯ ಶೇ.4ರಷ್ಟು ಕುಸಿತ ಕಂಡಿತು. ಪವರ್‌ಗ್ರಿಡ್, ಎಂ&ಎಂ ಹಾಗೂ ಡಾ ರೆಡ್ಡೀಸ್ ಲಾಭ ಗಳಿಸಿದವು.

ದೇಶದಲ್ಲಿ ಈವರೆಗೆ 17 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 578 ಒಮಿಕ್ರಾನ್ ಪ್ರಕರಣ ಪತ್ತೆಯಾಗಿವೆ. ಈ ಪೈಕಿ 130 ಸೋಂಕಿತರು ಚೇತರಿಸಿಕೊಂಡಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ನಿನ್ನೆ ಅಂಕಿ-ಅಂಶಗಳನ್ನು ಬಿಡುಗಡೆ ಮಾಡಿದೆ.

ಏಷ್ಯಾದ ಇತರೆ ಮಾರುಕಟ್ಟೆಗಳಾದ ಶಾಂಘೈ ಮತ್ತು ಹಾಂಗ್‌ಕಾಂಗ್‌ನಲ್ಲಿ ಷೇರುಗಳು ಮಿಡ್-ಸೆಷನ್ ಡೀಲ್‌ಗಳಲ್ಲಿ ಲಾಭದೊಂದಿಗೆ ವಹಿವಾಟು ನಡೆಸುತ್ತಿದ್ದರೆ, ಸಿಯೋಲ್ ಮತ್ತು ಟೋಕಿಯೋ ನಷ್ಟದಲ್ಲಿದ್ದವು. ಏತನ್ಮಧ್ಯೆ, ಅಂತಾರಾಷ್ಟ್ರೀಯ ತೈಲ ಮಾನದಂಡ ಬ್ರೆಂಟ್ ಕಚ್ಚಾ ತೈಲವು ಪ್ರತಿ ಬ್ಯಾರೆಲ್‌ಗೆ ಶೇ.0.40ರಷ್ಟು ಏರಿಕೆಯಾಗಿ 76.09 ಡಾಲರ್‌ಗೆ ಮಾರಾಟ ಆಗುತ್ತಿದೆ.

ಇತ್ತೀಚಿನ ವರದಿ ಪ್ರಕಾರ ಸೆನ್ಸೆಕ್ಸ್‌ 143 ಅಂಗಳ ಏರಿಕೆಯೊಂದಿಗೆ 57,267ರಲ್ಲಿ ವಹಿವಾಟು ನಡೆಸುತ್ತಿದ್ದರೆ, ನಿಫ್ಟಿ 35 ಅಂಕಗಳ ಜಿಗಿತ ಕಂಡು 17,039ಕ್ಕೆ ಬಂದು ನಿಂತಿದೆ.

ಇದನ್ನೂ ಓದಿ: ಪಿಎನ್​ಬಿ ವಂಚನೆ ಪ್ರಕರಣ : ನೀರವ್ ಮೋದಿಯ ಮುಂಬೈ ಆಸ್ತಿಗಳ ಹರಾಜಿಗೆ ಇಡಿ ಕ್ರಮ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.