ಮುಂಬೈ: ಜಾಗತಿಕ ಪೇಟೆಗಳ ನಡೆಯನ್ನು ಅನುಸರಿಸಿದ ದೇಶಿಯ ಈಕ್ವಿಟಿ ಮಾರುಕಟ್ಟೆಯೂ ಗುರುವಾರದ ವಹಿನಾಟಿನಂದು ಮಾರಾಟದ ಒತ್ತಡಕ್ಕೆ ಒಳಗಾಯಿತು.
ಯುಎಸ್ ಸೆಂಟ್ರಲ್ ಬ್ಯಾಂಕ್ ಈ ವರ್ಷ ಅಮೆರಿಕ ಆರ್ಥಿಕತೆಯ ಜಿಡಿಪಿ ಶೇ 6.5ರಷ್ಟು ಕುಸಿತ ಮತ್ತು ವರ್ಷದ ಕೊನೆಯಲ್ಲಿ ಶೇ 9.3ರಷ್ಟು ನಿರುದ್ಯೋಗ ದರವನ್ನು ನಿರೀಕ್ಷಿಸಿದೆ. ಇದು ಜಾಗತಿಕ ಷೇರುಪೇಟೆಗಳ ಮೇಲೆ ಪ್ರಭಾವ ಬೀರಿದೆ.
ಮತ್ತೊಂದು ಪ್ರಮುಖ ಬೆಳವಣಿಗೆಯಲ್ಲಿ ಸುಪ್ರೀಂ ಕೋರ್ಟ್ ಗುರುವಾರ ಸಾರ್ವಜನಿಕ ವಲಯದ ಸಂಸ್ಥೆಗಳಿಂದ (ಪಿಎಸ್‌ಯು) 4 ಟ್ರಿಲಿಯನ್ ಮೌಲ್ಯದ ಹೊಂದಾಣಿಕೆಯ ಒಟ್ಟು ಆದಾಯ (ಎಜಿಆರ್) ಬಾಕಿಗಳನ್ನು, ದೂರಸಂಪರ್ಕ ಇಲಾಖೆಯ (ಡಿಒಟಿ) ಬೇಡಿಕೆಯನ್ನು ಸಂಪೂರ್ಣವಾಗಿ ಅನುಮತಿಸಲಾಗುವುದಿಲ್ಲ ಎಂದು ಹೇಳಿದೆ.
ಖಾಸಗಿ ಟೆಲಿಕಾಂ ಆಪರೇಟರ್‌ಗಳು ಎಜಿಆರ್ ಬಾಕಿ ಹಣವನ್ನು ಹೇಗೆ ಪಾವತಿಸುತ್ತಾರೆ ಎಂಬ ವಿವರಣೆಯ ಅಫಿಡವಿಟ್‌ಗಳನ್ನು ಸಲ್ಲಿಸುವಂತೆ ನ್ಯಾಯಪೀಠ ಕೇಳಿದೆ. ಇದು ದೂರಸಂಪರ್ಕ ವಲಯದ ಷೇರುಗಳ ಕುಸಿತಕ್ಕೆ ಕಾರಣವಾಯಿತು.
ದಿನದ ವಹಿವಾಟು ಅಂತ್ಯಕ್ಕೆ ಮುಂಬೈ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ 708 ಅಂಕಗಳ ಇಳಿಕೆಯೊಂದಿಗೆ 33,538.37 ಮಟ್ಟದಲ್ಲೂ ರಾಷ್ಟ್ರೀಯ ಸಂವೇದಿ ಸೂಚ್ಯಂಕ ನಿಫ್ಟಿ 214.15 ಅಂಕಗಳ ಇಳಿಕೆಯೊಂದಿಗೆ 9,902 ಅಂಕಗಳಮಟ್ಟದಲ್ಲಿ ಕೊನೆಗೊಂಡಿತು.