ETV Bharat / business

ಮುಂಬೈ ಪೇಟೆಯಲ್ಲಿ ಗೂಳಿ-ಕರಡಿ ಜಿದ್ದಾಜಿದ್ದಿ: 758 ಅಂಶ ಜಿಗಿದು 18 ಅಂಕಕ್ಕಿಳಿದ ಸೆನ್ಸೆಕ್ಸ್​! - NSE

ದಿನದ ಮಧ್ಯಂತರ ವಹಿವಾಟಿನಲ್ಲಿ ಸೆನ್ಸೆಕ್ಸ್ ಗರಿಷ್ಠ 758 ಅಂಕ ಏರಿಕೆ ಕಂಡರೆ ರಾಷ್ಟ್ರೀಯ ಸೂಚ್ಯಂಕ ನಿಫ್ಟಿ 10,827 ಅಂಕಗಳ ಮಟ್ಟಕ್ಕೆ ತಲುಪಿತು. ವಹಿವಾಟು ಅಂತ್ಯದ ವೇಳೆಗೆ ಮುಂಬೈ ಸೂಚ್ಯಂಕ ಸೆನ್ಸೆಕ್ಸ್ 18.75 ಅಂಕ ಏರಿಕೆಯಾಗಿ 36,051.81 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಸೂಚ್ಯಂಕ ನಿಫ್ಟಿ 10.85 ಅಂಕ ಜಿಗಿದು 10,618.20 ಅಂಕಗಳ ಮಟ್ಟದಲ್ಲಿ ಕೊನೆಗೊಂಡಿತು.

Sensex
ಸೆನ್ಸೆಕ್ಸ್​
author img

By

Published : Jul 15, 2020, 7:15 PM IST

ಮುಂಬೈ: ದೇಶಿ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಹಾಗೂ ನಿಫ್ಟಿ ಬುಧವಾರದ ಆರಂಭಿಕ ವಹಿವಾಟಿನಲ್ಲಿ ಭರ್ಜರಿ ಏರಿಕೆ ಕಂಡಿದ್ದು, ಕೊನೆಯಗಳಿಗೆಯಲ್ಲಿ ಮಾರಾಟದ ಒತ್ತಡಕ್ಕೆ ಒಳಗಾಯಿತು. ರಿಲಯನ್ಸ್ ಇಂಡಸ್ಟ್ರೀಸ್ (ಆರ್​ಐಎಲ್), ಭಾರ್ತಿ ಏರ್​ಟೆಲ್​ ಮತ್ತು ಹೆಚ್​ಡಿಎಫ್​ಸಿ ಬ್ಯಾಕ್​ ಷೇರುಗಳು ಮಾರಾಟದ ಒತ್ತಡಕ್ಕೆ ಸಿಲುಕಿದವು.

ಆರ್‌ಐಎಲ್ ಷೇರುಗಳು ಬೆಳಗಿನ ವಹಿವಾಟಿನಲ್ಲಿ ಏರಿಕೆ ಕಂಡವು. 43ನೇ ವಾರ್ಷಿಕ ಸಾಮಾನ್ಯ ಸಭೆ (ಎಜಿಎಂ) ನಂತರ ಬಿಎಸ್‌ಇಯಲ್ಲಿ ಶೇ 4ರಷ್ಟು ಇಳಿಕೆ 1,840 ರೂ.ಗೆ ತಲುಪಿತು. ಆರ್​ಐಎಲ್ ಅಧ್ಯಕ್ಷ ಮುಖೇಶ್ ಅಂಬಾನಿ, ಜಿಯೋ ಪ್ಲಾಟ್‌ಫಾರ್ಮ್‌ಗಳಲ್ಲಿ ಶೇ 7.7ರಷ್ಟು ಪಾಲು ಪಡೆಯಲು ಗೂಗಲ್ 33,737 ಕೋಟಿ ರೂ. ಹೂಡಿಕೆ ಮಾಡಲಿದೆ ಎಂದು ಘೋಷಿಸಿದರೂ ಪೇಟೆ ಚೇತರಿಕೆಗೆ ನೆರವಾಗಲಿಲ್ಲ.

ದಿನದ ಮಧ್ಯಂತರ ವಹಿವಾಟಿನಲ್ಲಿ ಸೆನ್ಸೆಕ್ಸ್ ಗರಿಷ್ಠ 758 ಅಂಕ ಏರಿಕೆ ಕಂಡರೆ ರಾಷ್ಟ್ರೀಯ ಸೂಚ್ಯಂಕ ನಿಫ್ಟಿ 10,827 ಅಂಕಗಳ ಮಟ್ಟಕ್ಕೆ ತಲುಪಿತು. ವಹಿವಾಟು ಅಂತ್ಯದ ವೇಳೆಗೆ ಮುಂಬೈ ಸೂಚ್ಯಂಕ ಸೆನ್ಸೆಕ್ಸ್ 18.75 ಅಂಕ ಏರಿಕೆಯಾಗಿ 36,051.81 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಸೂಚ್ಯಂಕ ನಿಫ್ಟಿ 10.85 ಅಂಕ ಜಿಗಿದು 10,618.20 ಅಂಕಗಳ ಮಟ್ಟದಲ್ಲಿ ಕೊನೆಗೊಂಡಿತು.

ಇನ್ಫೋಸಿಸ್, ಹೆಚ್‌ಸಿಎಲ್ ಟೆಕ್, ಟಿಸಿಎಸ್, ಟೆಕ್ಎಂ, ಆಕ್ಸಿಸ್ ಬ್ಯಾಂಕ್, ಐಟಿಸಿ ಆರ್‌ಐಎಲ್, ಮಾರುತಿ, ಐಸಿಐಸಿಐ ಬ್ಯಾಂಕ್, ಎಂ&ಎಂ, ಬಜಾಜ್​ ಆಟೋ, ಸನ್​ ಫಾರ್ಮಾ ಮತ್ತು ಎನ್​ಟಿಪಿಸಿ ದಿನದ ಟಾಪ್​ ಗೇನರ್​ಗಳಾದರು. ಭಾರ್ತಿ ಏರ್‌ಟೆಲ್, ಒಎನ್‌ಜಿಸಿ, ಇಂಡಸ್ಇಂಡ್ ಬ್ಯಾಂಕ್, ಎಸ್‌ಬಿಐ, ಹೆಚ್​ಡಿಎಫ್​ಸಿ ಬ್ಯಾಂಕ್​, ಬಜಾಜ್​ ಫೈನಾನ್ಸ್​, ಏಷ್ಯಾನ್ ಪೆಯಿಂಟ್ಸ್​, ಟೈಟನ್​, ಕೋಟಾಕ್​ ಬ್ಯಾಂಕ್, ಎಸ್​ಬಿಐಎನ್​ ಟಾಪ್​ ಲೂಸರ್ ಸಾಲಿಗೆ ಸೇರಿದವು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.