ETV Bharat / business

ಜಾಗತಿಕ ಪಾಸಿಟಿವ್ ಪ್ರವೃತ್ತಿ: ಮತ್ತೆ 50 ಸಾವಿರ ಗಡಿ ದಾಟಿದ ಸೆನ್ಸೆಕ್ಸ್​, 15 ಸಾವಿರದತ್ತ ನಿಫ್ಟಿ - ಷೇರು ಮಾರುಕಟ್ಟೆ ಕ್ಲೋಸಿಂಗ್ ಬೆಲ್

ದಿನದ ವಹಿವಾಟಿನ ಅಂತ್ಯದ ವೇಳೆಗೆ ಮುಂಬೈ ಸಂವೇದಿ ಷೇರು ಸೂಚ್ಯಂಕ ಸೆನ್ಸೆಕ್ಸ್ 612.60 ಅಂಕ ಅಥವಾ ಶೇ 1.24ರಷ್ಟು ಹೆಚ್ಚಳವಾಗಿ 50,193.33 ಅಂಕಗಳಿಗೆ ತಲುಪಿದೆ. ರಾಷ್ಟ್ರೀಯ ಸಂವೇದಿ ಸೂಚ್ಯಂಕ ನಿಫ್ಟಿ 15,000 ಅಂಕ ಮೀರಿ 184.95 ಅಂಕ ಅಥವಾ ಶೇ 1.24ರಷ್ಟು ಗಳಿಕೆಯಾಗಿ 15,108.10 ಅಂಕಗಳಲ್ಲಿ ಕೊನೆಗೊಂಡಿತು.

Sensex
Sensex
author img

By

Published : May 18, 2021, 4:46 PM IST

ಮುಂಬೈ: ಜಾಗತಿಕ ಮಾರುಕಟ್ಟೆಯಲ್ಲಿನ ಸಕಾರಾತ್ಮಕ ಪ್ರವೃತ್ತಿಯ ಮಧ್ಯೆ ಮುಂಬೈ ಸೂಚ್ಯಂಕದ ಮೇಜರ್​ಗಳಾದ ಎಚ್‌ಡಿಎಫ್‌ಸಿ ಬ್ಯಾಂಕ್, ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಬಜಾಜ್ ಫೈನಾನ್ಸ್​ಗಳ ಲಾಭದಿಂದಾಗಿ ಈಕ್ವಿಟಿ ಬೆಂಚ್‌ಮಾರ್ಕ್ ಸೆನ್ಸೆಕ್ಸ್ ಮಂಗಳವಾರ 613 ಅಂಕ ಹೆಚ್ಚಳವಾಗಿ 50,000 ಗಡಿ ದಾಟಿದೆ.

ದಿನದ ವಹಿವಾಟಿನ ಅಂತ್ಯದ ವೇಳೆಗೆ ಮುಂಬೈ ಸಂವೇದಿ ಷೇರು ಸೂಚ್ಯಂಕ ಸೆನ್ಸೆಕ್ಸ್ 612.60 ಅಂಕ ಅಥವಾ ಶೇ 1.24ರಷ್ಟು ಹೆಚ್ಚಳವಾಗಿ 50,193.33 ಅಂಕಗಳಿಗೆ ತಲುಪಿದೆ. ರಾಷ್ಟ್ರೀಯ ಸಂವೇದಿ ಸೂಚ್ಯಂಕ ನಿಫ್ಟಿ 15,000 ಅಂಕ ಮೀರಿ 184.95 ಅಂಕ ಅಥವಾ ಶೇ 1.24ರಷ್ಟು ಗಳಿಕೆಯಾಗಿ 15,108.10 ಅಂಕಗಳಲ್ಲಿ ಕೊನೆಗೊಂಡಿತು.

ಸೆನ್ಸೆಕ್ಸ್ ಪ್ಯಾಕ್‌ನಲ್ಲಿ ಎಂ&ಎಂ ಅಗ್ರ ಲಾಭ ಗಳಿಸಿದ್ದು, ಶೇ 6ರಷ್ಟು ಆದಾಯ ಪಡೆದಿದೆ. ನಂತರದ ಸ್ಥಾನದಲ್ಲಿ ಬಜಾಜ್ ಆಟೋ, ಟೈಟಾನ್, ಬಜಾಜ್ ಫೈನಾನ್ಸ್, ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಪವರ್‌ಗ್ರಿಡ್ ಇವೆ. ಭಾರ್ತಿ ಏರ್‌ಟೆಲ್, ಐಟಿಸಿ, ಡಾ. ರೆಡ್ಡಿಸ್ ಮತ್ತು ಎಸ್‌ಬಿಐ ದಿನದ ಟಾಪ್​ ಲೂಸರ್​ ಗಳಾದವು.

ಇದನ್ನೂ ಓದಿ: ಎಲೆಕ್ಟ್ರಿಕ್​ ಸ್ಕೂಟರ್​ಗಳಿಗೆ ವೈರ್​ಲೆಸ್​ ಚಾರ್ಜಿಂಗ್ ಪರಿಚಯಿಸಿದ ಎಲ್​ಜಿ

ದೇಶೀಯ ಷೇರುಗಳು ಕೋವಿಡ್​-19 ದೈನಂದಿನ ಕ್ಯಾಸೆಲೋಡ್ ಕುಸಿತದ ಆರಂಭಿಕ ಚಿಹ್ನೆ ಮತ್ತು ವೇಗವಾದ ಆರ್ಥಿಕ ಚೇತರಿಕೆಯ ನಿರೀಕ್ಷೆಗಳನ್ನು ಸುಧಾರಿಸಿದ್ದು ಹೂಡಿಕೆದಾರರನ್ನು ಉತ್ತೇಜಿಸಿತು ಎಂದು ರಿಲಯನ್ಸ್ ಸೆಕ್ಯುರಿಟೀಸ್‌ನ ಮುಖ್ಯ ಕಾರ್ಯತಂತ್ರದ ಬಿನೋದ್ ಮೋದಿ ಹೇಳಿದರು.

ಏಷ್ಯಾದ ಮಾರುಕಟ್ಟೆಗಳ ಬಲವಾದ ಸೂಚನೆಗಳು ಪೇಟೆಗೆ ಬೆಂಬಲಿಸಿದವು ಎಂದರು. ಏಷ್ಯಾದ ಶಾಂಘೈ, ಹಾಂಗ್ ಕಾಂಗ್, ಟೋಕಿಯೊ ಮತ್ತು ಸಿಯೋಲ್‌ನಲ್ಲಿನ ಪೇಟೆಗಳು ಸಕಾರಾತ್ಮಕ ನೋಟ್​ನೊಂದಿಗೆ ಕೊನೆಗೊಂಡವು.

ಯುರೋಪ್​ನಲ್ಲಿನ ಸ್ಟಾಕ್ ಎಕ್ಸ್​ಚೇಂಜ್​ಗಳು ಮಧ್ಯಂತರ ಅವಧಿಯಲ್ಲಿ ಲಾಭದೊಂದಿಗೆ ವಹಿವಾಟು ನಡೆಸುತ್ತಿದ್ದವು.

ಅಂತಾರಾಷ್ಟ್ರೀಯ ತೈಲ ಮಾನದಂಡವಾದ ಬ್ರೆಂಟ್ ಕಚ್ಚಾ ಬ್ಯಾರೆಲ್‌ಗೆ ಶೇ 0.82ರಷ್ಟು ಹೆಚ್ಚಳವಾಗಿ 70.03 ಡಾಲರ್‌ಗೆ ವಹಿವಾಟು ನಡೆಸುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.