ಮುಂಬೈ: ಭಾರತದ ಷೇರಪೇಟೆ ಕಳೆದ ಐದು ಸೆಷನ್‌ಗಳ ಭಾರಿ ನಷ್ಟದ ನಂತರ ಶುಕ್ರವಾರ ಬೆಳಗ್ಗೆ ಉತ್ತಮ ಚೇತರಿಕೆ ಕಂಡಿದ್ದು, ಬಿಎಸ್‌ಇ ಬೆಂಚ್‌ಮಾರ್ಕ್ ಸೆನ್ಸೆಕ್ಸ್ 400 ಅಂಕ ಜಿಗಿದಿದೆ. ಮುಖ್ಯವಾಗಿ ಬ್ಯಾಂಕಿಂಗ್, ಇಂಧನ ಮತ್ತು ಆಟೋ ಷೇರುಗಳು ಲಾಭ ದಾಖಲಿಸಿವೆ..
30 ಷೇರುಗಳ ಸೆನ್ಸೆಕ್ಸ್ ಸೂಚ್ಯಂಕ 403.16 ಅಂಕ ಅಥವಾ ಶೇ 0.86ರಷ್ಟು ಏರಿಕೆ ಕಂಡು 47,277.52 ಅಂಕಗಳಿಗೆ ತಲುಪಿದೆ. ರಾಷ್ಟ್ರೀಯ ಷೇರು ಸೂಚ್ಯಂಕ ನಿಫ್ಟಿ 118.65 ಅಂಕ ಅಥವಾ ಶೇ 0.86ರಷ್ಟು ಏರಿಕೆ ಕಂಡು 13,936.20 ಅಂಕಗಳಿಗೆ ತಲುಪಿದೆ.
ಸೆನ್ಸೆಕ್ಸ್ ಪಟ್ಟಿಯಲ್ಲಿ ಇಂಡಸ್ಇಂಡ್ ಬ್ಯಾಂಕ್, ಮಹೀಂದ್ರ ಅಂಡ್ ಮಹೀಂದ್ರಾ, ಎಲ್ & ಟಿ, ಒಎನ್‌ಜಿಸಿ, ಬಜಾಜ್ ಫೈನಾನ್ಸ್, ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಬಜಾಜ್ ಆಟೋ ಲಾಭ ಗಳಿಸಿವೆ. ಮತ್ತೊಂದೆಡೆ ಆಕ್ಸಿಸ್ ಬ್ಯಾಂಕ್, ಎಚ್‌ಯುಎಲ್, ಟೆಕ್ ಮಹೀಂದ್ರಾ, ಅಲ್ಟ್ರಾಟೆಕ್ ಸಿಮೆಂಟ್, ಮಾರುತಿ ಮತ್ತು ಟಿಸಿಎಸ್ ಟಾಪ್ ಲೂಸರ್ಗಳಾದವು.
ಇದನ್ನೂ ಓದಿ: ಗಣತಂತ್ರದ ಪವಿತ್ರ ದಿನ ತ್ರಿವರ್ಣ ಧ್ವಜಕ್ಕೆ ಅಪಮಾನ ಮಾಡಿದ್ದು ದುರದೃಷ್ಟಕರ: ರಾಷ್ಟ್ರಪತಿ ಬೇಸರ
ಹಿಂದಿನ ಐದು ಸೆಷನ್‌ಗಳಲ್ಲಿ ಸೆನ್ಸೆಕ್ಸ್ 2,917.76 ಅಂಕ ಕಳೆದುಕೊಂಡಿದ್ದರೆ, ನಿಫ್ಟಿ 827.15 ಅಂಕ ಕುಸಿದಿತ್ತು. ದೇಶೀಯ ಮಾರುಕಟ್ಟೆಗಳಲ್ಲಿ ಮುಂದುವರಿದ ಅನಿಶ್ಚಿತತೆ, ಕೇಂದ್ರ ಬಜೆಟ್ ಮತ್ತು ಜಾಗತಿಕ ಘಟನೆಗಳಿಗು ಮುನ್ನ ಲಾಭದ ಬುಕ್ಕಿಂಗ್ ಕಾಯ್ದುಕೊಂಡು ಹೂಡಿಕೆದಾರರು ಎದುರು ನೋಡುತ್ತಿದ್ದರು ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಸರ್ಕಾರವು ಶುಕ್ರವಾರ ಆರ್ಥಿಕ ಸಮೀಕ್ಷೆಯನ್ನು 2020-21ರ ಸಂಸತ್ತಿನಲ್ಲಿ ಮಂಡಿಸಲಿದ್ದು, ಫೆಬ್ರವರಿ 1ರ ಸೋಮವಾರ ಕೇಂದ್ರ ಬಜೆಟ್ 2021-22 ಮಂಡಿಸಲಿದೆ.