ETV Bharat / business

ಹರ್ಷತಂದ ದೀಪಾವಳಿ: ಏರಿಕೆಯ ಡ್ಯಾನ್ಸ್​ ಮಾಡುತ್ತಿದೆ ಸೆನ್ಸೆಕ್ಸ್ ಗೂಳಿ!

ದೀಪಾವಳಿ ಬಳಿಕ ಆರಂಭವಾದ ಮಂಗಳವಾರದ ಮೊದಲ ವಹಿವಾಟಿನಂದು 315 ಅಂಕ ಏರಿಕೆ ಕಂಡಿದೆ. ಲೋಹ, ಕೈಗಾರಿಕೆ, ಬ್ಯಾಂಕಿಂಗ್ ಮತ್ತು ಹಣಕಾಸು ಷೇರುಗಳಲ್ಲಿ ಭಾರಿ ಖರೀದಿ ಕಂಡುಬಂತು. ರಾಷ್ಟ್ರೀಯ ಷೇರು ಸೂಚ್ಯಂಕ 94 ಅಂಕ ಏರಿಕೆಯಾಗಿ 12874.20 ಅಂಕಗಳ ಮಟ್ಟದಲ್ಲಿ ಕೊನೆಗೊಂಡಿತು.

Sensex
ಸೆನ್ಸೆಕ್ಸ್​
author img

By

Published : Nov 17, 2020, 4:54 PM IST

ಮುಂಬೈ: ಮೊನೆ ನಡೆದ ದೇಶಿ ಷೇರುಪೇಟೆಯ ದೀಪಾವಳಿ ವಿಶೇಷ 'ಮುಹೂರ್ತ ಟ್ರೇಡಿಂಗ್'ನಲ್ಲಿ ದಾಖಲೆ ಏರಿಕೆ ದಾಖಲಿಸಿತ್ತು. ಈ ಬಳಿಕವೂ ತನ್ನ ವಹಿವಾಟಿನ ಏರಿಕೆಯನ್ನು ಇಂದು ಕೂಡ ಕಾಯ್ದುಕೊಂಡಿದೆ.

ದೀಪಾವಳಿ ಬಳಿಕ ಆರಂಭವಾದ ಮಂಗಳವಾರದ ಮೊದಲ ವಹಿವಾಟಿನಂದು 315 ಅಂಕ ಏರಿಕೆ ಕಂಡಿದೆ. ಲೋಹ, ಕೈಗಾರಿಕೆ, ಬ್ಯಾಂಕಿಂಗ್ ಮತ್ತು ಹಣಕಾಸು ಷೇರುಗಳಲ್ಲಿ ಭಾರಿ ಖರೀದಿ ಕಂಡುಬಂತು.

ದಿನದ ಅಂತ್ಯದ ವೇಳೆಗೆ ಸೆನ್ಸೆಕ್ಸ್​ 315 ಅಂಕ ಏರಿಕೆಯಾಗಿ 43952.71 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಷೇರು ಸೂಚ್ಯಂಕ 94 ಅಂಕ ಏರಿಕೆಯಾಗಿ 12874.20 ಅಂಕಗಳ ಮಟ್ಟದಲ್ಲಿ ಕೊನೆಗೊಂಡಿತು.

ಸೆನ್ಸೆಕ್ಸ್ ವಿಭಾಗದಲ್ಲಿ ಟಾಟಾ ಸ್ಟೀಲ್ ಶೇ 6ರಷ್ಟು ಏರಿಕೆ ಕಂಡಿತು. ಎಸ್‌ಬಿಐ, ಎಚ್‌ಡಿಎಫ್‌ಸಿ ಬ್ಯಾಂಕ್, ಬಜಾಜ್ ಫೈನಾನ್ಸ್, ಆಕ್ಸಿಸ್ ಬ್ಯಾಂಕ್, ಎಲ್‌ಟಿ, ಮಾರುತಿ, ಇಂಡಸ್ಇಂಡ್ ಬ್ಯಾಂಕ್ ಮತ್ತು ಎಚ್‌ಡಿಎಫ್‌ಸಿ ನಂತರದ ಸ್ಥಾನದಲ್ಲಿವೆ.

ಎನ್‌ಟಿಪಿಸಿ, ಎಚ್‌ಸಿಎಲ್ ಟೆಕ್, ಒಎನ್‌ಜಿಸಿ, ಇನ್ಫೋಸಿಸ್, ಐಟಿಸಿ, ಪವರ್‌ಗ್ರಿಡ್, ಮತ್ತು ಹಿಂದೂಸ್ತಾನ್ ಯೂನಿಲಿವರ್ ಟಾಪ್​ ಲೂಸರ್​ಗಳಾದವು.

ಏಷ್ಯಾದ ಶಾಂಘೈ ಮತ್ತು ಸಿಯೋಲ್‌ ಪೇಟೆಗಳು ಕೆಂಪು ಬಣ್ಣದಲ್ಲಿ ಕೊನೆಗೊಂಡರೆ, ಹಾಂಕಾಂಗ್​​ ಮತ್ತು ಟೋಕಿಯೊ ಲಾಭದೊಂದಿಗೆ ಅಂತ್ಯವಾದವು. ಯುರೋಪಿನ ಷೇರು ವಿನಿಮಯ ಕೇಂದ್ರಗಳು ಆರಂಭಿಕ ವಹಿವಾಟಿನಲ್ಲಿ ಮಿಶ್ರ ವಹಿವಾಟು ನಡೆಸುತ್ತಿದ್ದವು.

ಅಂತಾರಾಷ್ಟ್ರೀಯ ಬ್ರೆಂಟ್ ಕಚ್ಚಾ ತೈಲ, ಬ್ಯಾರೆಲ್‌ಗೆ ಶೇ 0.25ರಷ್ಟು ಇಳಿಕೆಯಾಗಿ 43.71 ಡಾಲರ್​​ನಲ್ಲಿ ವಹಿವಾಟು ನಡೆಸುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.