ಮುಂಬೈ: ಏಷ್ಯಾದ ಮಾರುಕಟ್ಟೆಗಳಲ್ಲಿ ಗಳಿಕೆ ಹಾಗೂ ಸರ್ಕಾರದ ಬಂಡವಾಳ ದ್ರಾವಣದ ಭರವಸೆಯ ಉತ್ತೇಜನೆಗೆ ಒಳಗಾದ ಪಿಎಸ್‌ಯು ಬ್ಯಾಂಕ್ ವಿಭಾಗದ ಷೇರುಗಳಿಕೆಯು ಭಾರತೀಯ ಷೇರು ಮಾರುಕಟ್ಟೆಯು ಸೋಮವಾರ ವಹಿವಾಟಿನಂದು ಗಳಿಕೆ ದಾಖಲಿಸಿದೆ.
ದಿನದ ವಹಿವಾಟು ಅಂತ್ಯದ ವೇಳೆಗೆ ಸೆನ್ಸೆಕ್ಸ್ 592.97 ಏರಿಕೆ ಕಂಡು 37,981.63 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಸೂಚ್ಯಂಕ 177.30 ಅಂಕ ಏರಿಕೆಯಾಗಿ 11,227.55 ಅಂಕಗಳ ಮಟ್ಟದಲ್ಲಿ ಕೊನೆಗೊಂಡಿತು.
ಇಂಡಸ್ಇಂಡ್ ಬ್ಯಾಂಕ್ ಸೆನ್ಸೆಕ್ಸ್ ಗಳಿಕೆಯಲ್ಲಿ ಅಗ್ರಸ್ಥಾನದಲ್ಲಿದ್ದು, ಬಜಾಜ್ ಫೈನಾನ್ಸ್, ಆಕ್ಸಿಸ್ ಬ್ಯಾಂಕ್, ಒಎನ್‌ಜಿಸಿ ಮತ್ತು ಪವರ್ ಗ್ರಿಡ್ ನಂತರದ ಸ್ಥಾನದಲ್ಲಿವೆ. 30 ಸೆನ್ಸೆಕ್ಸ್ ಷೇರುಗಳಲ್ಲಿ 28 ಗ್ರೀನ್ ವಲಯದಲ್ಲಿ ಕೊನೆಗೊಂಡವು.
ಮಾರುಕಟ್ಟೆ ನಿಯಂತ್ರಕ ಸೆಬಿ ಸೋಮವಾರ ಸೈಪ್ರೆಸ್ ಹಣ ಹೂಡಿಕೆ ಸಲಹೆಗಾರರ ಗ್ರಾಹಕರಿಗೆ ಮರುಪಾವತಿ ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದು, ಇದು ನೋಂದಾಯಿತ ಹೂಡಿಕೆ ಸಲಹೆ ಮತ್ತು ಸಂಶೋಧನಾ ವಿಶ್ಲೇಷಕ ಸೇವೆಗಳ ಮೂಲಕ ಶುಲ್ಕ ಸಂಗ್ರಹಿಸಿದೆ.
ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರವು ತನ್ನ ಬೃಹತ್ ಸಾಲ ಯೋಜನೆಗೆ ಮತ್ತಷ್ಟು ಹೆಚ್ಚಳ ಘೋಷಿಸಿದರೆ, ಈ ವಾರ ಬಾಂಡ್ ವ್ಯಾಪಾರಿಗಳ ಮೇಲಿನ ಕೆಟ್ಟ ಆತಂಕದ ಕಾರ್ಮೋಡಗಳು ಇಲ್ಲವಾಗಬಹುದು. ಬ್ಲೂಮ್‌ಬರ್ಗ್ ಸಮೀಕ್ಷೆಯ 16 ವ್ಯಾಪಾರಿಗಳಲ್ಲಿ 10 ಮಂದಿಯ ಪ್ರಕಾರ, ಅಕ್ಟೋಬರ್-ಮಾರ್ಚ್ ಅವಧಿಯಲ್ಲಿ ಸರ್ಕಾರವು ತನ್ನ ಸಾಲದ ಅಂದಾಜನ್ನು ಈಗಿರುವ 5 ಟ್ರಿಲಿಯನ್ ರೂಪಾಯಿಯಿಂದ ಆರು ಟ್ರಿಲಿಯನ್ ರೂಪಾಯಿಗಳಿಗೆ (81.5 ಬಿಲಿಯನ್ ಡಾಲರ್) ಏರಿಸಲಿದೆ ಎಂದು ವ್ಯಾಪಾರಿಗಳು ನಿರೀಕ್ಷಿಸಿದ್ದಾರೆ.
ಮೇಲಿನ ಈ ಎಲ್ಲ ಅಂಶಗಳು ಹೂಡಿಕೆದಾರರ ಮನೋಭಾವದಲ್ಲಿ ಸಕರಾತ್ಮಕತೆ ಮೂಡಿಸಿದವು. ಇದರ ನಡುವೆ ಎಚ್ಯುಎಲ್, ಇನ್ಫೋಸಿಸ್ ಹಾಗೂ ನೆಸ್ಲೆ ಷೇರು ಮೌಲ್ಯದಲ್ಲಿ ಇಳಿಕೆ ಕಂಡುಬಂತು.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಡೆಮಾಕ್ರಟಿಕ್ ಅಭ್ಯರ್ಥಿ ಜೋ ಬಿಡೆನ್ ನಡುವೆ ಮಂಗಳವಾರ ನಡೆಯಲಿರುವ ಮೊದಲ ಅಮೆರಿಕ ಅಧ್ಯಕ್ಷೀಯ ಚರ್ಚೆಯು ಜಾಗತಿಕ ಹೂಡಿಕೆದಾರರ ಗಮನ ಸೆಳೆದಿದೆ. ಇದು ಯುಎಸ್ ನೀತಿ ಮತ್ತು ಪ್ರಪಂಚದಾದ್ಯಂತ ಷೇರು ಬೆಲೆಗಳ ಮೇಲೆ ಪರಿಣಾಮ ಬೀರಬಹುದು ಎಂದು ವಿಶ್ಲೇಷಕರ ವಾದ.