ಮುಂಬೈ : ದೇಶೀಯ ಷೇರು ಮಾರುಕಟ್ಟೆಗಳು ಸಮತಟ್ಟಾಗಿವೆ. ಅಂತಾರಾಷ್ಟ್ರೀಯ ಮಾರುಕಟ್ಟೆಗಳ ಸಕಾರಾತ್ಮಕ ಸಂಕೇತಗಳೊಂದಿಗೆ ಲಾಭದತ್ತ ಜಿಗಿದ ಸೂಚ್ಯಂಕಗಳು, ಹೂಡಿಕೆದಾರರು ಲಾಭವನ್ನು ತೆಗೆದುಕೊಳ್ಳುವ ಪ್ರವೃತ್ತಿಯಿಂದಾಗಿ ಸೆನ್ಸೆಕ್ಸ್ ಅಲ್ಪ ಇಳಿಕೆ ಕಂಡಿದೆ.
ಬೆಳಗ್ಗೆ 52,039 ಅಂಕಗಳ ಮಟ್ಟದಿಂದ ಪ್ರಾರಂಭವಾದ ಸೆನ್ಸೆಕ್ಸ್ ದಿನವಿಡೀ ಎತ್ತರಕ್ಕೆ ಸಾಗಿತು. ಆರಂಭಿಕ ಲಾಭಗಳು ಕರಗಿದವು. ಲಾಭಾಂಶ ಪಡೆಯುವ ಉದ್ದೇಶದಿಂದ ಪೇಟೆಯಲ್ಲಿ ಮಾರಾಟದ ಒತ್ತಡ ಕಂಡು ಬಂತು. ತತ್ಪರಿಣಾಮ ಅಂತಿಮವಾಗಿ ಸೆನ್ಸೆಕ್ಸ್ 2.56 ಅಂಕ ಕಳೆದುಕೊಂಡು 51,934.88 ಅಂಕಗಳಲ್ಲಿ ಕೊನೆಗೊಂಡಿತು.
ಇದನ್ನೂ ಓದಿ: ಗಗನ ಮುಖಿಯಾದ ಬೆಳ್ಳಿ - ಬಂಗಾರ: ಜೂ.1ರ ಗೋಲ್ಡ್ ರೇಟ್ ಹೀಗಿದೆ
ರಾಷ್ಟ್ರೀಯ ಷೇರು ಸೂಚ್ಯಂಕ ನಿಫ್ಟಿ 7.95 ಅಂಕ ಕಳೆದುಕೊಂಡು 15,574.85 ಅಂಕಗಳಲ್ಲಿ ಸ್ಥಿರವಾಗಿದೆ. ನಿನ್ನೆ ವಹಿವಾಟಿನಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯ 72.90 ರೂ.ಗೆ ತಲುಪಿದೆ.
ಅದಾನಿ ಪೋರ್ಟ್ಸ್, ಒಎನ್‌ಜಿಸಿ, ಬಜಾಜ್ ಫೈನಾನ್ಸ್, ಎಸ್‌ಬಿಐ ಮತ್ತು ಬಜಾಜ್ ಆಟೋ ಲಿಮಿಟೆಡ್ ನಿಫ್ಟಿಯಲ್ಲಿ ಲಾಭ ಗಳಿಸಿವೆ. ಜೆಎಸ್‌ಡಬ್ಲ್ಯೂ ಸ್ಟೀಲ್, ಟಾಟಾ ಸ್ಟೀಲ್, ಐಸಿಐಸಿಐ ಬ್ಯಾಂಕ್, ಗ್ರಾಸಿಮ್ ಇಂಡಸ್ಟ್ರೀಸ್ ಮತ್ತು ಅಲ್ಟ್ರಾಟೆಕ್ ಸಿಮೆಂಟ್ ಷೇರುಗಳು ಸ್ವಲ್ಪ ನಷ್ಟವಾದವು. ಇನ್ಫ್ರಾ, ಐಟಿ ಮತ್ತು ಎನರ್ಜಿ ಷೇರುಗಳನ್ನು ಖರೀದಿಯಲ್ಲಿ ತೊಡಗಿದ್ದರೆ ಬ್ಯಾಂಕ್, ಆಟೋ ಮತ್ತು ಮೆಟಲ್ ಷೇರುಗಳು ನಷ್ಟ ಅನುಭವಿಸಿದವು.