ಮುಂಬೈ: 2018-19ನೇ ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕ ಫಲಿತಾಂಶ ಹಾಗೂ 2ನೇ ಹಂತದ ಮತದಾನಕ್ಕೂ ಮುನ್ನ ಷೇರುಪೇಟೆಯಲ್ಲಿ ಸಕರಾತ್ಮಕ ಚಲನೆ ಉಂಟಾಗಿದ್ದು, ಮಂಗಳವಾರದ ಆರಂಭಿಕ ವಹಿವಾಟಿನಲ್ಲಿ 300 ಅಂಕಗಳ ಜಿಗಿತ ದಾಖಲಿಸಿದೆ.
ಬೆಳಗ್ಗೆ 11.15ರ ಸುಮಾರಿಗೆ ಸೆನ್ಸೆಕ್ಸ್ 302.18 ಅಂಕಗಳ ಮುನ್ನಡೆ ಕಾಯ್ದುಕೊಂಡು 39,208.02 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಷೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 71.30 ಅಂಕಗಳ ಮುನ್ನಡೆಯೊಂದಿಗೆ 11,761.65 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್ಐಐ) ಸೋಮವಾರದ ಪೇಟೆಯಲ್ಲಿ ₹ 713.22 ಕೋಟಿ ಮೌಲ್ಯದ ಷೇರು ಖರೀದಿಸಿದ್ದರೇ ದೇಶಿ ಸಾಂಸ್ಥಿಕ ಹೂಡಿಕೆದಾರರು (ಡಿಐಐ) ₹ 581.36 ಕೋಟಿ ಷೇರುಗಳನ್ನು ಮಾರಾಟ ಮಾಡಿದ್ದಾರೆ.
ಡಾಲರ್ ಎದುರು ರೂಪಾಯಿ ಇಂದಿನ ಆರಂಭಿಕ ವಹಿವಾಟಿನಲ್ಲಿ 10 ಪೈಸೆಗಳ ಕುಸಿತ ಕಂಡು ₹ 69.53 ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು.
ಇಂದಿನ ವಹಿವಾಟಿನಲ್ಲಿ ಐಸಿಐಸಿಐ ಬ್ಯಾಂಕ್, ಕೋಲ್ ಇಂಡಿಯಾ, ವೆದಲ್, ಏಷ್ಯಾನ್ ಪೆಯಿಂಟ್ಸ್, ಹೀರೋ ಮೋಟಾರ್, ಟಿಸಿಎಸ್, ಇಂಡಸ್ಇಂಡ್ ಬ್ಯಾಂಕ್, ಎಂ&ಎಂ, ಕೋಟ್ಯಾಕ್ ಬ್ಯಾಂಕ್, ಯೆಸ್ ಬ್ಯಾಂಕ್, ಭಾರ್ತಿ ಏರ್ಟೆಲ್, ಐಟಿಸಿ, ಎಚ್ಸಿಎಲ್ ಟೆಕ್, ಸನ್ ಫಾರ್ಮಾ ಷೇರುಗಳು ಚುರುಕಿನ ವಹಿವಾಟು ನಡೆಸಿದ್ದರೇ ಒಎನ್ಜಿಸಿ, ಟಾಟಾ ಸ್ಟೀಲ್, ಹಿಂದೂಸ್ತಾನ್ ಯುನಿಲಿವರ್, ಟಾಟಾ ಮೋಟಾರ್ಸ್ ಹಾಗೂ ಇನ್ಫಿ ಷೇರುಗಳ ಮೌಲ್ಯ ಇಳಿಕೆ ಕಂಡವು.