ಮುಂಬೈ: ಭಾರತೀಯ ಷೇರು ಸೂಚ್ಯಂಕಗಳು ಸೋಮವಾರ ಹೊಸ ಗರಿಷ್ಠ ಮಟ್ಟವನ್ನು ಮುಟ್ಟಿದ್ದು, ಬಿಎಸ್‌ಇ ಸೆನ್ಸೆಕ್ಸ್ ಮೊದಲ ಬಾರಿಗೆ 48,000 ಅಂಕಗಳನ್ನು ಮುಟ್ಟಿದೆ.
ಇಕ್ವಿಟಿ ಬೆಂಚ್‌ಮಾರ್ಕ್ ಸೆನ್ಸೆಕ್ಸ್ ಸೋಮವಾರ ಆರಂಭಿಕ ವಹಿವಾಟಿನಲ್ಲಿ ಸುಮಾರು 300 ಪಾಯಿಂಟ್‌ಗಳ ಏರಿಕೆ ಕಂಡಿದ್ದು, ಇಂಡೆಕ್ಸ್ ಮೇಜರ್ಗಳಾದ ಐಟಿಸಿ, ಇನ್ಫೋಸಿಸ್ ಮತ್ತು ಐಸಿಐಸಿಐ ಬ್ಯಾಂಕ್‌ಗಳು ಲಾಭ ಗಳಿಸಿದೆ.
30-ಷೇರುಗಳ ಬಿಎಸ್‌ಇ ಸೂಚ್ಯಂಕವು ಆರಂಭಿಕ ವಹಿವಾಟಿನಲ್ಲಿ ತನ್ನ ಜೀವಿತಾವಧಿಯ ಅಂತರ್ ದಿನದ ಗರಿಷ್ಠ 48,168.22 ಅನ್ನು ಮುಟ್ಟಿದೆ. ಇದು 272.73 ಪಾಯಿಂಟ್‌ಗಳು ಅಥವಾ 0.57 ರಷ್ಟು ಹೆಚ್ಚಳವಾಗಿ 48,141.71 ಕ್ಕೆ ವಹಿವಾಟು ನಡೆಸುತ್ತಿದೆ ಮತ್ತು ವಿಶಾಲವಾದ ಎನ್‌ಎಸ್‌ಇ ನಿಫ್ಟಿ 90.90 ಪಾಯಿಂಟ್‌ಗಳು ಅಥವಾ 0.65 ರಷ್ಟು ಏರಿಕೆ ಕಂಡು 14,109.40 ರ ದಾಖಲೆಯ ಗರಿಷ್ಠ ಮಟ್ಟಕ್ಕೆ ತಲುಪಿದೆ.
ಸೆನ್ಸೆಕ್ಸ್ ಪ್ಯಾಕ್‌ನಲ್ಲಿ ಟಿಸಿಎಸ್ ಶೇ 2 ರಷ್ಟು ಏರಿಕೆ ಕಂಡಿದ್ದು, ಒಎನ್‌ಜಿಸಿ, ಎಸ್‌ಬಿಐ, ಎಲ್ ಆಂಡ್ ಟಿ, ಇನ್ಫೋಸಿಸ್, ಎಚ್‌ಸಿಎಲ್ ಟೆಕ್, ಐಸಿಐಸಿಐ ಬ್ಯಾಂಕ್ ಮತ್ತು ಆಕ್ಸಿಸ್ ಬ್ಯಾಂಕ್ ನಂತರದ ಸ್ಥಾನದಲ್ಲಿವೆ. ಮತ್ತೊಂದೆಡೆ, ಎಚ್‌ಡಿಎಫ್‌ಸಿ, ಏಷ್ಯನ್ ಪೇಂಟ್ಸ್ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಹಿಂದುಳಿದಿವೆ.
ಈ ಹಿಂದಿನ ವಹಿವಾಟಿನಲ್ಲಿ ಸೆನ್ಸೆಕ್ಸ್ 117.65 ಪಾಯಿಂಟ್ ಅಥವಾ 0.25 ರಷ್ಟು ಏರಿಕೆಯಾಗಿದ್ದು, ಗರಿಷ್ಠ 47,868.98 ಕ್ಕೆ ತಲುಪಿದೆ. ಆದರೆ ನಿಫ್ಟಿ ಸಾರ್ವಕಾಲಿಕ ಗರಿಷ್ಠ 14,018.50 ಕ್ಕೆ ಮುಚ್ಚಿದೆ.
ಇದನ್ನೂ ಓದಿ: Bitcoin ಮುಂದೆ ಬಡವಾದ ಡಾಲರ್: 1 ಕಾಯಿನ್ ಇದ್ರೆ 30 ತೊಲೆ ಚಿನ್ನ ಸೇರಿ ಏನೆಲ್ಲ ಕೊಳ್ಳಬಹುದು!
ತಾತ್ಕಾಲಿಕ ವಿನಿಮಯ ದತ್ತಾಂಶಗಳ ಪ್ರಕಾರ ವಿದೇಶಿ ಬಂಡವಾಳ ಹೂಡಿಕೆದಾರರು (ಎಫ್‌ಪಿಐ) ಶುಕ್ರವಾರ ನಿವ್ವಳ 506.21 ಕೋಟಿ ರೂ.ಗಳ ಷೇರುಗಳನ್ನು ಖರೀದಿಸಿದ್ದರು.
ದೇಶೀಯ ಷೇರುಗಳು ದೃಢವಾಗಿ ಕಾಣುತ್ತಿವೆ. ಜಿಎಸ್‌ಟಿ ಸಂಗ್ರಹಣೆ, ವಿದ್ಯುತ್ ಬೇಡಿಕೆ ಮತ್ತು ರೈಲ್ವೆ ಸರಕು ಸಾಗಣೆ ವಿಷಯದಲ್ಲಿ 2020 ರ ಡಿಸೆಂಬರ್‌ನಲ್ಲಿ ಆದ ಆರ್ಥಿಕ ಬೆಳವಣಿಗೆಗಳು ಮಾರುಕಟ್ಟೆಗೆ ಬಲ ನೀಡಲಿವೆ ಎಂದು ರಿಲಯನ್ಸ್ ಸೆಕ್ಯುರಿಟೀಸ್‌ನ ಸ್ಟ್ರಾಟಜಿ ಹೆಡ್ ಬಿನೋದ್ ಮೋದಿ ಹೇಳಿದರು.
ಈ ಮಧ್ಯೆ ಎರಡು ಕೊರೊನಾ ಲಸಿಕೆಗಳಿಗೆ ಅನುಮೋದನೆ ಮತ್ತು ಶೀಘ್ರದಲ್ಲೇ ಲಸಿಕಾಕರಣ ಪ್ರಕ್ರಿಯೆಗಳ ಪ್ರಾರಂಭವು ಮಾರುಕಟ್ಟೆಗಳು ಮತ್ತು ಆರ್ಥಿಕತೆಗೆ ಸಕಾರಾತ್ಮಕವಾಗಿವೆ. ಜಾಗತಿಕ ತೈಲ ಬೆಲೆಗಳ ಮಾನದಂಡವಾದ ಬ್ರೆಂಟ್ ಕಚ್ಚಾತೈಲ ಬೆಲೆ ಪ್ರತಿ ಬ್ಯಾರೆಲ್‌ಗೆ 0.98 ರಷ್ಟು ಹೆಚ್ಚಳವಾಗಿ 52.31 ಡಾಲರ್‌ಗೆ ವಹಿವಾಟು ನಡೆಸುತ್ತಿದೆ.