ಮುಂಬೈ: ನಿನ್ನೆಯಷ್ಟೇ 48,000 ಕ್ಕೆ ತಲುಪಿ ಇತಿಹಾಸ ಬರೆದಿದ್ದ ಸೆನ್ಸೆಕ್ಸ್, ಇಂದು ಆರಂಭಿಕ ವಹಿವಾಟಿನಲ್ಲಿಯೇ ಇಳಿಕೆ ಕಂಡಿದೆ. ಮುಂಬೈ ಷೇರುಮಾರುಕಟ್ಟೆ 104 ಅಂಕಗಳನ್ನ ಕಳೆದುಕೊಂಡು ನಷ್ಟದಿಂದಲೇ ದಿನದ ವಹಿವಾಟು ಆರಂಭಿಸಿದೆ.
ಜಾಗತಿಕ ಷೇರುಗಳಲ್ಲಿನ ದುರ್ಬಲ ಪ್ರವೃತ್ತಿಯ ಮಧ್ಯೆ ಇಂಡೆಕ್ಸ್ ಮೇಜರ್ಗಳಾದ ರಿಲಯನ್ಸ್ ಇಂಡಸ್ಟ್ರೀಸ್, ಐಸಿಐಸಿಐ ಬ್ಯಾಂಕ್ ಮತ್ತು ಕೊಟಕ್ ಬ್ಯಾಂಕ್ ಷೇರುಗಳು ನಷ್ಟ ಅನುಭವಿಸಿದ್ದರಿಂದ ಸೆನ್ಸೆಕ್ಸ್ ಮಂಗಳವಾರ ಆರಂಭಿಕ ವಹಿವಾಟಿನಲ್ಲಿ 104 ಪಾಯಿಂಟ್‌ಗಳ ಕುಸಿತ ಕಂಡಿದೆ.
ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ 104 ಪಾಯಿಂಟ್‌ಗಳ ಕುಸಿತ ಕಂಡಿದ್ದು, ಪ್ರಸ್ತುತ 48,072 ರಲ್ಲಿ ವಹಿವಾಟು ನಡೆಸುತ್ತಿದೆ. ನಿಫ್ಟಿ 14,016 ಕ್ಕೆ ತಲುಪಿದೆ.
30 ಷೇರುಗಳ ಬಿಎಸ್‌ಇ ಸೂಚ್ಯಂಕವು 112.74 ಪಾಯಿಂಟ್‌ಗಳು ಅಥವಾ 0.23 ರಷ್ಟು ಕಡಿಮೆಯಾಗಿ 48,064.06 ಕ್ಕೆ ವಹಿವಾಟು ನಡೆಸುತ್ತಿದೆ ಮತ್ತು ವಿಶಾಲವಾದ ಎನ್‌ಎಸ್‌ಇ ನಿಫ್ಟಿ 38.25 ಪಾಯಿಂಟ್ ಅಥವಾ 0.27 ರಷ್ಟು ಕುಸಿದು 14,094.65 ಕ್ಕೆ ತಲುಪಿದೆ.
ಸೆನ್ಸೆಕ್ಸ್ ಪ್ಯಾಕ್‌ನಲ್ಲಿ ಒಎನ್‌ಜಿಸಿ ಅಗ್ರಸ್ಥಾನದಲ್ಲಿದ್ದು, ಶೇ 2 ರಷ್ಟು ಕುಸಿದಿದೆ. ಎಂ & ಎಂ, ಎನ್‌ಟಿಪಿಸಿ, ಬಜಾಜ್ ಆಟೋ, ಕೊಟಕ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ನಂತರದ ಸ್ಥಾನದಲ್ಲಿವೆ. ಮತ್ತೊಂದೆಡೆ, ಆಕ್ಸಿಸ್ ಬ್ಯಾಂಕ್, ಎಚ್‌ಡಿಎಫ್‌ಸಿ, ಟಿಸಿಎಸ್ ಮತ್ತು ಎಚ್‌ಯುಎಲ್ ಲಾಭ ಗಳಿಸಿದವರಲ್ಲಿ ಸೇರಿವೆ.
ಇದನ್ನೂ ಓದಿ: GST ನಷ್ಟ ಪರಿಹಾರ: 10ನೇ ಕಂತಿನಡಿ ರಾಜ್ಯಗಳಿಗೆ 6,000 ಕೋಟಿ ರೂ. ಬಿಡುಗಡೆ
ಜಾಗತಿಕ ತೈಲ ಮಾನದಂಡವಾದ ಬ್ರೆಂಟ್ ಕಚ್ಚಾ ಬ್ಯಾರೆಲ್‌ಗೆ 0.14 ರಷ್ಟು ಕಡಿಮೆಯಾಗಿ 51.02 ಡಾಲರ್‌ಗೆ ವಹಿವಾಟು ನಡೆಸುತ್ತಿದೆ.