ಮುಂಬೈ: ಕೆಲ ದಿನಗಳಿಂದ ಕಳೆಗುಂದಿದ್ದ ಷೇರುಪೇಟೆಯಲ್ಲಿ ಇಂದು ಆರಂಭಿಕ ಏರಿಕೆ ದಾಖಲಾಗಿದೆ. ಮುಂಬೈ ಸಂವೇದಿ ಸೂಚ್ಯಂಕ 662 ಅಂಕಗಳ ಆರಂಭಿಕ ಏರಿಕೆ ದಾಖಲಿಸುವ ಮೂಲಕ ಸಂತಸದ ವಾತಾವರಣಕ್ಕೆ ಕಾರಣವಾಗಿದೆ.
ಇನ್ನು ರಾಷ್ಟ್ರೀಯ ಸಂವೇದಿ ಸೂಚ್ಯಂಕ ನಿಫ್ಟಿ ಕೂಡಾ 218 ಅಂಕಗಳ ಏರಿಕೆ ದಾಖಲಿಸಿ 17328 ಅಂಕಗಳಲ್ಲಿ ವ್ಯವಹಾರ ನಿರತವಾಗಿತ್ತು. ಗುರುವಾರ ಆರಂಭಿಕ ವಹಿವಾಟಿನಲ್ಲಿ ಸುಮಾರು 1300 ಅಂಕಗಳ ಕುಸಿತ ಕಂಡು ಬಂದಿತ್ತು. ಆದರೆ, ಸಂಜೆ ವೇಳೆಗೆ ತುಸು ಚೇತರಿಕೆ ಕಂಡುಕೊಂಡು ಭಾರಿ ನಷ್ಟದಿಂದ ಬಚಾವಾಗಿತ್ತು. ಅಮೆರಿಕ ಫೆಡರಲ್ ಬ್ಯಾಂಕ್ ನೀತಿ ಹಾಗೂ ರಷ್ಯಾ - ಉಕ್ರೇನ್ ನಡುವಣ ಉದ್ವಿಗ್ನ ವಾತಾವರಣ ನಿನ್ನೆ ಷೇರುಪೇಟೆ ಕುಸಿತಕ್ಕೆ ಕಾರಣವಾಗಿತ್ತು.
ಆದರೆ ಇಂದು ಆ ಭೀತಿ ಮಾಯವಾಗಿ ಆರಂಭಿಕ ಏರಿಕೆ ದಾಖಲಾಗಿದೆ. ಇಂದಿನ ವಹಿವಾಟಿನಲ್ಲಿ ಮಿಡ್ ಹಾಗೂ ಸ್ಮಾಲ್ ಕ್ಯಾಪ್ ಷೇರುಗಳು ಕುಸಿತ ಕಂಡಿವೆ. ಇನ್ನ ಹೆಚ್ಸಿಎಲ್ ಶೇ 4.61ರಷ್ಟು ಕುಸಿದು ಇಂದಿನ ಟಾಪ್ ಲೂಸರ್ ಆಗಿದೆ. ಉಳಿದಂತೆ ವಿಪ್ರೋ, ಟೆಕ್ ಮಹಿಂದ್ರಾ, ಐಸರ್ ಮೋಟರ್ಸ್ ಸಹ ನಷ್ಟ ಅನುಭವಿಸಿವೆ.
ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಇನ್ನೊಂದೆಡೆ ಸಿಪ್ಲಾ, ಒಎನ್ಜಿಸಿ, ಆಕ್ಸಿಸ್ ಬ್ಯಾಂಕ್, ಇಂಡಿಯನ್ ಆಯಿಲ್ ಷೇರುಗಳು ಇಂದಿನ ವ್ಯವಹಾರದಲ್ಲಿ ಏರಿಕೆ ದಾಖಲಿಸಿವೆ. ಈ ವಾರದ ವಹಿವಾಟಿನಲ್ಲಿ 1028 ಷೇರುಗಳು ಚೇತರಿಕೆ ಕಂಡರೆ, ಒಟ್ಟಾರೆ 2244 ಷೇರುಗಳು ಕುಸಿತದ ಹಾದಿ ಹಿಡಿದಿವೆ.
ಇದನ್ನು ಓದಿ:ಕೇವಲ ಆರು ವರ್ಷಕ್ಕೆ ಮಿಲಿಯನೇರ್ ಆದ ಬಾಲಕಿ.. ಬಾಲೆಯ ಯಶಸ್ಸಿನ ಹಿಂದಿನ ಗುಟ್ಟೇನು?