ಮುಂಬೈ: ಭಾರತೀಯ ಸ್ಮಾರ್ಟ್ಫೋನ್ ಪ್ರಿಯರು ಎದುರುನೋಡುತ್ತಿದ್ದ ಸ್ಯಾಮ್ಸಂಗ್ ಮಡಚುವ (ಫೋಲ್ಡಿಂಗ್ ಫೋನ್) ಭಾರತೀಯ ಮಾರುಕಟ್ಟೆಗೆ ಕೆಲವೇ ದಿನಗಳಲ್ಲಿ ಲಗ್ಗೆ ಇಡಲಿದೆ.
ಅಕ್ಟೋಬರ್ 1ರಿಂದ ಸ್ಯಾಮ್ಸಂಗ್ ಗ್ಯಾಲಾಕ್ಸಿ ಫೋಲ್ಡಿಂಗ್ ಮೊಬೈಲ್ ಅಧಿಕೃತವಾಗಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಆಗಲಿದೆ ಎಂದು ಹೇಳಲಾಗುತ್ತಿದ್ದು, ಈ ಫೋನ್ ಆಯ್ದ ಮಳಿಗೆ ಹಾಗೂ ಮುಂಗಡ ಬುಕಿಂಗ್ ಮೂಲಕ ಖರೀದಿಸಬಹುದಾಗಿದೆ.
ದೇಶಿ ಮಾರುಕಟ್ಟೆಯಲ್ಲಿ ಗ್ಯಾಲಾಕ್ಸಿ ಫೋಲ್ಡಿಂಗ್ ಮೊಬೈಲ್ ದರ ₹ 1.50 ಲಕ್ಷದಿಂದ ₹ 1.75 ಲಕ್ಷ ನಡುವೆ ಇರಲಿದೆ. ಅಧಿಕೃತ ಬೆಲೆಯೆಷ್ಟಿರಲಿದೆ ಎಂಬುದು ಅಕ್ಟೋಬರ್ 1ರಂದು ಬಿಡುಗಡೆಯಾದ ಬಳಿಕ ತಿಳಿಯಲಿದೆ. ಗ್ಯಾಲಾಕ್ಸಿ ಫೋಲ್ಡ್ ಫೋನ್ 7.3 ಅಂಗುಲದ ಇನ್ಫಿನಿಟಿ ಫ್ಲೆಕ್ಸ್ ಪರದೆ ಹೊಂದಿರಲಿದೆ. 4.6 ಅಮಲೋಡ್ ಹೊರಾಂಗಣ ಪರದೆ ಇರಲಿದೆ.
ಮುಂಭಾಗದ ಕ್ಯಾಮೆರಾ 10ಎಂಪಿ, ಹಿಂಭಾಗದ ಎರಡೂ ಕ್ಯಾಮೆರಾಗಳು ಕ್ರಮವಾಗಿ 10ಎಂಪಿ ಹಾಗೂ 8ಎಂಪಿ ಸಾಮರ್ಥ್ಯ ಹೊಂದಿರಲಿವೆ. 3 ಕ್ಯಾಮೆರಾ ಸೆಟಿಂಗ್ಸ್ನಡಿ 12ಎಂಪಿಯ ಮುಖ್ಯ ಕ್ಯಾಮೆರಾ ಜೊತೆಗೆ 16 ಎಂಪಿಯ ವೈಡ್ ಆ್ಯಂಗಲ್ ಕ್ಯಾಮೆರಾ ಮತ್ತು 12ಎಂಪಿಯ ಟೆಲಿಪೋನ್ ಕ್ಯಾಮೆರಾವಿದೆ. 12ಜಿಬಿ ರ್ಯಾಮ್ ಮತ್ತು 512ಜಿಬಿಯ ಮೆಮೊರಿ ಸಾಮರ್ಥ್ಯವಿದೆ.