ETV Bharat / business

ಎಲೆಕ್ಟ್ರಿಕ್ ವಾಹನ ಮಾರುಕಟ್ಟೆಗೆ ಶಾಕ್​ .. ಇ-ವೆಹಿಕಲ್ ಮಾರಾಟ ಶೇ 20ರಷ್ಟು ಕುಸಿತ

author img

By

Published : Apr 22, 2021, 3:11 PM IST

2020-21ರ ಆರ್ಥಿಕ ವರ್ಷದಲ್ಲಿ ಇ 2 ಡಬ್ಲ್ಯೂ ವಿಭಾಗದ ಮಾರಾಟವು ಶೇ 6ರಷ್ಟು ಇಳಿದು 1,43,837ಕ್ಕೆ ತಲುಪಿದೆ. ಈ ಹಿಂದಿನ ಆರ್ಥಿಕ ವರ್ಷದಲ್ಲಿ 1,52,000 ಯುನಿಟ್‌ ಮಾರಾಟ ಆಗಿದ್ದವು. 2020-21ರ ಹಣಕಾಸು ವರ್ಷದಲ್ಲಿ ಇ 2 ಡಬ್ಲ್ಯೂ ಹೈಸ್ಪೀಡ್ ಮತ್ತು ಕಡಿಮೆ -ಸ್ಪೀಡ್ ಮಾರಾಟವು ಕ್ರಮವಾಗಿ 40,836 ಮತ್ತು 1,03,000 ಯುನಿಟ್ ಆಗಿದೆ.

EVs
EVs

ನವದೆಹಲಿ: ಭಾರತದಲ್ಲಿ ಎಲೆಕ್ಟ್ರಿಕ್​​ ವಾಹನಗಳ ಮಾರಾಟವು 2020-21ರ ಆರ್ಥಿಕ ವರ್ಷದಲ್ಲಿ ಶೇ 20ರಷ್ಟು ಕುಸಿದು 2,36,802 ಯುನಿಟ್‌ಗಳಿಗೆ ತಲುಪಿದೆ ಎಂದು ಸೊಸೈಟಿ ಆಫ್ ಮ್ಯಾನ್ಯುಫ್ಯಾಕ್ಚರರ್ಸ್ ಆಫ್ ಎಲೆಕ್ಟ್ರಿಕ್ ವೆಹಿಕಲ್ (ಎಸ್‌ಎಂಇವಿ) ತಿಳಿಸಿದೆ.

2019-20ರಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು (ಇ 2 ಡಬ್ಲ್ಯೂ), ಎಲೆಕ್ಟ್ರಿಕ್ ತ್ರಿಚಕ್ರ ವಾಹನಗಳು (ಇ 3 ಡಬ್ಲ್ಯೂ) ಮತ್ತು ಎಲೆಕ್ಟ್ರಿಕ್ ನಾಲ್ಕು ಚಕ್ರಗಳ (ಇ 4 ಡಬ್ಲ್ಯೂ) ಸೇರಿದಂತೆ ಎಲೆಕ್ಟ್ರಿಕ್ ವಾಹನಗಳ (ಇವಿ) ಮಾರಾಟವು 2,95,683 ಯುನಿಟ್‌ಗಳಷ್ಟಿತ್ತು.

2020-21ರ ಆರ್ಥಿಕ ವರ್ಷದಲ್ಲಿ ಇ 2 ಡಬ್ಲ್ಯೂ ವಿಭಾಗದ ಮಾರಾಟವು ಶೇ 6ರಷ್ಟು ಇಳಿದು 1,43,837ಕ್ಕೆ ತಲುಪಿದೆ. ಈ ಹಿಂದಿನ ಆರ್ಥಿಕ ವರ್ಷದಲ್ಲಿ 1,52,000 ಯುನಿಟ್‌ ಮಾರಾಟ ಆಗಿದ್ದವು. 2020-21ರ ಹಣಕಾಸು ವರ್ಷದಲ್ಲಿ ಇ 2 ಡಬ್ಲ್ಯೂ ಹೈಸ್ಪೀಡ್ ಮತ್ತು ಕಡಿಮೆ -ಸ್ಪೀಡ್ ಮಾರಾಟವು ಕ್ರಮವಾಗಿ 40,836 ಮತ್ತು 1,03,000 ಯುನಿಟ್ ಆಗಿದೆ ಎಂದು ಎಸ್‌ಎಂಇವಿ ಪ್ರಕಟಣೆಯಲ್ಲಿ ತಿಳಿಸಿದೆ.

ಇ 3 ಡಬ್ಲ್ಯೂ ವಿಭಾಗವು 88,378 ಯುನಿಟ್ ಮಾರಾಟ ದಾಖಲಿಸಿದೆ. ಸಾರಿಗೆ ಪ್ರಾಧಿಕಾರದಲ್ಲಿ ನೋಂದಾಯಿಸದ ಇ 3 ಡಬ್ಲ್ಯೂ ಡೇಟಾ ಒಳಗೊಂಡಿಲ್ಲ. ಇ 4 ಡಬ್ಲ್ಯೂ ವಿಭಾಗದಲ್ಲಿ 4,588 ಯುನಿಟ್‌ ನೋಂದಣಿಯಾಗಿವೆ. ಈ ಹಿಂದಿನ ಆರ್ಥಿಕ ವರ್ಷದಲ್ಲಿನ 3,000 ಯುನಿಟ್‌ಗಳಿಗೆ ಹೋಲಿಸಿದರೆ, ಶೇ 53ರಷ್ಟು ಹೆಚ್ಚಾಗಿದೆ.

ಮಾರಾಟದ ಕಾರ್ಯಕ್ಷಮತೆಯ ಬಗ್ಗೆ ಪ್ರತಿಕ್ರಿಯಿಸಿದ ಎಸ್‌ಎಂಇವಿ ಮಹಾನಿರ್ದೇಶಕ ಸೊಹಿಂದರ್ ಗಿಲ್, 2021ರ ವಿತ್ತೀಯ ವರ್ಷದ ಪ್ರಾರಂಭವಾಗುವ ಮೊದಲು ನಾವು ಉತ್ತಮ ಬೆಳವಣಿಗೆ ನಿರೀಕ್ಷಿಸುತ್ತಿದ್ದೇವೆ. ಆದರೆ ವಿವಿಧ ಕಾರಣಗಳಿಂದಾಗಿ ಮಾರಾಟವು ಸ್ಥಿರವಾಗಿ ಉಳಿದಿದೆ. ಎಲೆಕ್ಟ್ರಿಕ್ ತ್ರಿಚಕ್ರ ಮತ್ತು ದ್ವಿಚಕ್ರ ವಾಹನ ವಿಭಾಗದ ಮಾರಾಟವು ನಿಂತಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ತೀರಾ ಕಡಿಮೆಯಾಗಿದೆ ಎಂದರು.

ಇದನ್ನೂ ಓದಿ: ಲಸಿಕೆ ಉತ್ಪಾದನೆಗೆ ಆರ್ಥಿಕ ನೆರವು: ಪ್ರಧಾನಿಗೆ ಧನ್ಯವಾದ ಸಲ್ಲಿಸಿದ ಎಸ್‌ಐಐ ಸಿಇಒ

ಜನರು ಸುಧಾರಿತ ಲಿಥಿಯಂ ಅಯಾನ್ ಬ್ಯಾಟರಿಗಳತ್ತ ಸಾಗಲು ಪ್ರಾರಂಭಿಸಿದ್ದು ಒಳ್ಳೆಯ ಬೆಳವಣಿಗೆ. ದ್ವಿಚಕ್ರ ವಾಹನ ವಿಭಾಗದಲ್ಲಿ ನಗರ-ವೇಗ ಮತ್ತು ಹೈಸ್ಪೀಡ್ ವಿಭಾಗವು ಬೆಳವಣಿಗೆಗೆ ಸಾಕ್ಷಿಯಾಗಿದೆ ಎಂದು ಹೇಳಿದರು.

ಫೇಮೆ-II ಯೋಜನೆಯಡಿ ಗುರಿ ಸಾಧಿಸಲು ಇನ್ನೂ ಹೆಚ್ಚಿನದನ್ನು ಮಾಡಬೇಕಾಗಿದೆ. ಬೆಳವಣಿಗೆಯನ್ನು ಉತ್ತೇಜಿಸಲು ಮತ್ತು 2022ರ ಅಂತ್ಯದ ವೇಳೆಗೆ ಗುರಿ ಸಾಧಿಸಲು ನೀತಿಗಳ ಬದಲಾವಣೆಯ ರೂಪದಲ್ಲಿ ಸರ್ಕಾರದ ಸಮಯೋಚಿತ ಹಸ್ತಕ್ಷೇಪದ ಅಗತ್ಯವಿದೆ ಎಂದು ಗಿಲ್ ಪ್ರತಿಪಾದಿಸಿದರು.

ಎಸ್‌ಬಿಐ ಮತ್ತು ಆಕ್ಸಿಸ್‌ನಂತಹ ಕೆಲವೇ ಕೆಲವು ಬ್ಯಾಂಕ್​ಗಳಲ್ಲಿ ಇವಿಗಳಿಗಾಗಿ ಬಲವಾದ ಬ್ಯಾಂಕ್ ಹಣಕಾಸು ವ್ಯವಸ್ಥೆಯು ನಿರೀಕ್ಷಿತ ಪ್ರಮಾಣದಲ್ಲಿ ಸಿಗುತ್ತಿಲ್ಲ. ಆಯ್ದ ಮಾದರಿಗಳಲ್ಲಿ ಸಾಲ ನೀಡುತ್ತದೆ. ಮಾರಾಟವನ್ನು ಹೆಚ್ಚಿಸಲು ಇವಿಗಳಲ್ಲಿ ಸಾಲ ನೀಡುವಂತೆ ಸರ್ಕಾರ ಬ್ಯಾಂಕ್​ಗಳನ್ನು ಕೇಳಬೇಕು ಎಂದು ಮನವಿ ಮಾಡಿದೆ.

ಮುಂದಿನ 2-3 ವರ್ಷಗಳವರೆಗೆ ಈ ವಿಭಾಗದಿಂದ ಸಾಕಷ್ಟು ಬೆಳವಣಿಗೆ ಬರುವುದರಿಂದ ಬಿ 2 ಬಿ ವಲಯದಲ್ಲಿ ಇವಿ ಭವಿಷ್ಯವು ಸಕಾರಾತ್ಮಕವಾಗಿದೆ ಎಂದು ಅಮೆಜಾನ್ ಇಂಡಿಯಾ ಹಾಗೂ ಫ್ಲಿಪ್‌ಕಾರ್ಟ್ ನಂತಹ ವಿತರಣಾ ಸಮೂಹದಲ್ಲಿ ಇವಿ ನಿಯೋಜಿಸುವುದಾಗಿ ಘೋಷಿಸಿದ್ದಾರೆ.

ದೆಹಲಿ, ಮಹಾರಾಷ್ಟ್ರ, ಆಂಧ್ರಪ್ರದೇಶ, ಹರಿಯಾಣ, ಕರ್ನಾಟಕ, ಕೇರಳ, ಮಧ್ಯಪ್ರದೇಶ, ಮೇಘಾಲಯ, ಪಂಜಾಬ್, ತಮಿಳುನಾಡು, ತೆಲಂಗಾಣ, ಉತ್ತರ ಪ್ರದೇಶ ಮತ್ತು ಉತ್ತರಾಖಂಡ ಸೇರಿದಂತೆ ಹಲವು ರಾಜ್ಯಗಳು ತಮ್ಮ ಇವಿ ನೀತಿ ರೂಪಿಸಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.