ಮುಂಬೈ: ಇನ್ಮೋಬಿ ಮೊಬೈಲ್ ಕಂಟೆಂಟ್ ಪ್ಲಾಟ್ ಫಾರ್ಮ್ ಗ್ಲಾನ್ಸ್ (InMobi's mobile content platform Glance) ಖರೀದಿಸಲು ರಿಲಯನ್ಸ್ ಇಂಡಸ್ಟ್ರೀಸ್ ಸುಮಾರು 250 ರಿಂದ 300 ಮಿಲಿಯನ್ ಡಾಲರ್ ಹೂಡಿಕೆ ಮಾಡಬಹುದು ಎಂದು ಮೂಲಗಳು ತಿಳಿಸಿವೆ.
ಆದರೆ, ಈ ಬಗ್ಗೆ ರಿಲಯನ್ಸ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಕಂಪನಿಯು ಈ ಮೊಬೈಲ್ ಫೋನ್‌ಗೆ ಗೂಗಲ್‌ನೊಂದಿಗೆ ಅಭಿವೃದ್ಧಿಪಡಿಸಲಾಗಿರುವ ಕ್ಯೂರೇಟೆಡ್ ಕಂಟೆಂಟ್ ಅನ್ನು ಒದಗಿಸಲು ಸಾಧ್ಯವಾಗುತ್ತದೆ. ಹೀಗಾಗಿ ಈ ಬೆಳವಣಿಗೆ ಭಾರಿ ಮಹತ್ವ ಪಡೆದುಕೊಂಡಿದೆ.
ಕಂಪನಿಯು ಫೋನ್‌ನ ಲಾಕ್ ಸ್ಕ್ರೀನ್‌ಗಳಲ್ಲಿ ಸುದ್ದಿ ಮತ್ತು ಕಿರು ವಿಡಿಯೋಗಳನ್ನು ಒಳಗೊಂಡಂತೆ ಕ್ಯೂರೇಟೆಡ್ ವಿಷಯವನ್ನು ಒದಗಿಸುತ್ತದೆ. ಮೂಲಗಳ ಪ್ರಕಾರ ಈ ವಹಿವಾಟು ಮುಂದಿನ ಕೆಲ ವಾರಗಳಲ್ಲೇ ಪೂರ್ಣಗೊಳ್ಳುವ ನಿರೀಕ್ಷೆಯಿದೆ.
ಜುಲೈ 2020 ರಲ್ಲಿ, ರಿಲಯನ್ಸ್ ಜಿಯೋ ಮತ್ತು ಗೂಗಲ್ ಜಂಟಿಯಾಗಿ ಗ್ರಾಹಕರಿಗೆ ಕೈಗೆಟುಕುವ ಬೆಲೆಯ ಸ್ಮಾರ್ಟ್ ಫೋನ್ ಅಭಿವೃದ್ಧಿಪಡಿಸುವುದಾಗಿ ಹೇಳಿತ್ತು. ಜಿಯೋ ಮತ್ತು ಗೂಗಲ್ ಜಂಟಿಯಾಗಿ ವಿನ್ಯಾಸಗೊಳಿಸಿರುವ ಬಹುನಿರೀಕ್ಷಿತ ಸ್ಮಾರ್ಟ್ಫೋನ್ ‘ಜಿಯೋಫೋನ್ ನೆಕ್ಸ್ಟ್’ (Jio Phone Next) ಅನ್ನು ದೀಪಾವಳಿಗೂ ಮುನ್ನವೇ ಬಿಡುಗಡೆಯಾಗುವ ಸಾಧ್ಯತೆಯಿದೆ.
ಇದನ್ನೂ ಓದಿ: ದೀಪಾವಳಿಗೂ ಮುನ್ನವೇ Jio Phone Next ಮಾರುಕಟ್ಟೆಗೆ..!
ಇದು ಆಂಡ್ರಾಯ್ಡ್(Android) ಮತ್ತು ಪ್ಲೇ ಸ್ಟೋರ್(Play Store)ನ್ನೊಳಗೊಂಡಿರುವ ಆಪ್ಟಿಮೈಸ್ಡ್ ಆಪರೇಟಿಂಗ್ ಸಿಸ್ಟಮ್ ಆಗಿದೆ. ಡಿವೈಸ್ ಮತ್ತು ಆಪರೇಟಿಂಗ್ ಸಿಸ್ಟಮ್ ಪ್ರೀಮಿಯಂ ಸಾಮರ್ಥ್ಯ ಹೊಂದಿರುವ ಈ ಫೋನ್, ಇತರ ಸ್ಮಾರ್ಟ್ಫೋನ್ಗಳಿಗಿಂತ ಭಿನ್ನವಾಗಿದೆ. ಇದರಲ್ಲಿ ವಾಯ್ಸ್ ಫಸ್ಟ್ ಫೀಚರ್ಸ್ ಸೇರಿದಂತೆ ಅನೇಕ ಆಯ್ಕೆಗಳನ್ನು ಸೇರಿಸಲಾಗಿದೆ. ಇತ್ತೀಚಿನ ಆಂಡ್ರಾಯ್ಡ್ ಫೀಚರ್ಸ್ ಮತ್ತು ಸುರಕ್ಷತಾ ಅಪ್‌ಡೇಟ್‌ಗಳಿವೆ.