ETV Bharat / business

ಕೊರೊನಾ ನಿರ್ಬಂಧಗಳು ಚಿಲ್ಲರೆ ವ್ಯಾಪಾರೋದ್ಯಮ ಶಾಶ್ವತ ಮುಚ್ಚುವಿಕೆಗೆ ಕಾರಣವಾಗಲಿವೆ : ಆರ್‌ಎಐ ಆತಂಕ

ಚಿಲ್ಲರೆ ವ್ಯಾಪಾರೋದ್ಯಮ ಸ್ಥಗಿತಗೊಳಿಸುವುದು ಪರಿಹಾರವಲ್ಲ. ಕಳೆದ ವರ್ಷದ ವ್ಯವಹಾರದ ಮೇಲಿನ ಪರಿಣಾಮವನ್ನು ಪರಿಗಣಿಸಿ, ಈ ಹಂತದಲ್ಲಿ ಆರ್ಥಿಕ ಚಟುವಟಿಕೆ ಮುಚ್ಚುವುದು ಈ ವ್ಯಾಪಾರಿಗಳ ವ್ಯವಹಾರಗಳನ್ನು ಶಾಶ್ವತ ಮುಚ್ಚಲು ಕಾರಣವಾಗುತ್ತದೆ..

Retailers stare at permanent closure amid growing curbs
ಚಿಲ್ಲರೆ ವ್ಯಾಪಾರೋದ್ಯಮಕ್ಕೆ ಹೊಡೆತ
author img

By

Published : Apr 20, 2021, 6:23 PM IST

ನವದೆಹಲಿ : ಕೋವಿಡ್​ ಎರಡನೇ ಅಲೆ ಆರ್ಭಟ ಹಿನ್ನೆಲೆ ರಾಜ್ಯಗಳಲ್ಲಿ ವಿವಿಧ ನಿರ್ಬಂಧಗಳನ್ನು ವಿಧಿಸಲಾಗುತ್ತಿದೆ. ಈ ಹಿನ್ನೆಲೆ ಆತಂಕ ವ್ಯಕ್ತಪಡಿಸುತ್ತಿರುವ ಚಿಲ್ಲರೆ ವ್ಯಾಪಾರಿಗಳ ಸಂಘವು (RAI) ಈ ಹಂತದಲ್ಲಿ ಆರ್ಥಿಕ ಚಟುವಟಿಕೆ ಮುಚ್ಚುವುದರಿಂದ ವ್ಯವಹಾರಗಳು ಶಾಶ್ವತ ಮುಚ್ಚಲ್ಪಡುತ್ತವೆ ಮತ್ತು ಲಕ್ಷಾಂತರ ಮಂದಿ ಉದ್ಯೋಗ ಕಳೆದುಕೊಳ್ಳುತ್ತಾರೆ ಎಂದು ಹೇಳಿದೆ.

ಚಿಲ್ಲರೆ ಉದ್ಯಮವು ಕಳೆದ ವರ್ಷ ಕೊರೊನಾದಿಂದ ಎದುರಾದ ನಷ್ಟದಿಂದಲೇ ಇನ್ನೂ ಚೇತರಿಸಿಕೊಂಡಿಲ್ಲ. ಈ ಮಧ್ಯೆ ಈಗಲೂ ಮತ್ತಷ್ಟು ನಷ್ಟ ಅನುಭವಿಸುವಂತಾಗಿದೆ. ಅನಿವಾರ್ಯವಲ್ಲದ ಅಥವಾ ಆಹಾರೇತರ ಚಿಲ್ಲರೆ ಮತ್ತು ಮಾಲ್‌ಗಳು ಕಟ್ಟುನಿಟ್ಟಿನ ನಿಯಮಗಳೊಂದಿಗೆ ಕಾರ್ಯನಿರ್ವಹಿಸಲು ಅನುಮತಿಸಬೇಕು ಎಂದು ಮನವಿ ಮಾಡಿಕೊಂಡಿದೆ.

ಚಿಲ್ಲರೆ ವ್ಯಾಪಾರೋದ್ಯಮ ಸ್ಥಗಿತಗೊಳಿಸುವುದು ಪರಿಹಾರವಲ್ಲ. ಕಳೆದ ವರ್ಷದ ವ್ಯವಹಾರದ ಮೇಲಿನ ಪರಿಣಾಮವನ್ನು ಪರಿಗಣಿಸಿ, ಈ ಹಂತದಲ್ಲಿ ಆರ್ಥಿಕ ಚಟುವಟಿಕೆ ಮುಚ್ಚುವುದು ಈ ವ್ಯಾಪಾರಿಗಳ ವ್ಯವಹಾರಗಳನ್ನು ಶಾಶ್ವತ ಮುಚ್ಚಲು ಕಾರಣವಾಗುತ್ತದೆ.

ಇದರಿಂದಾಗಿ ಲಕ್ಷಾಂತರ ಉದ್ಯೋಗ ನಷ್ಟಗಳು ಉಂಟಾಗುತ್ತವೆ ಎಂದು ಆರ್‌ಐಐ ಸಿಇಒ ಕುಮಾರ್ ರಾಜಗೋಪಾಲನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಹೀಗಾಗಿ, ಮಾಲ್​ಗಳು ಉದ್ಯಮಗಳನ್ನು ಸ್ಥಗಿತಗೊಳಿಸುವ ಬದಲು ಸಾಮಾಜಿಕ ಅಂತರ, ಸ್ಯಾನಿಟೈಸೇಶನ್‌ನಂತಹ ಆದೇಶಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.