ಮುಂಬೈ : ಭಾರತೀಯ ರಿಸರ್ವ್ ಬ್ಯಾಂಕ್ (RBI) ಡಿಜಿಟಲ್ ಕರೆನ್ಸಿ ತರುವ ನಿಟ್ಟಿನಲ್ಲಿ ಮತ್ತೊಂದು ಹೆಜ್ಜೆ ಇಟ್ಟಿದೆ. ಈ ವರ್ಷದ ಅಂತ್ಯದ ವೇಳೆಗೆ ಡಿಜಿಟಲ್ ಕರೆನ್ಸಿ ಕಾರ್ಯಾಚರಣೆಗಳ ಮಾದರಿ ಅನಾವರಣಗೊಳಿಸಬಹುದು ಎಂದು ಆರ್‌ಬಿಐ ಉಪ ಗವರ್ನರ್ ಟಿ ರವಿಶಂಕರ್ ಹೇಳಿದ್ದಾರೆ. ಅವರು ದ್ವೈಮಾಸಿಕ ನೀತಿ ಪರಿಶೀಲನಾ ನಿರ್ಧಾರಗಳ ಅನಾವರಣದ ಸಮಯದಲ್ಲಿ ಈ ವಿಷಯ ಬಹಿರಂಗಪಡಿಸಿದರು.
ಆರ್ಥಿಕತೆಯ ಚೇತರಿಕೆಗಾಗಿ ಪ್ರಮುಖ ದರಗಳನ್ನು ದಾಖಲೆಯ ಕನಿಷ್ಠ ಮಟ್ಟದಲ್ಲೇ ಇರಿಸಲು ಆರು ಸದಸ್ಯರ ಹಣಕಾಸು ನೀತಿ ಸಮಿತಿ (ಎಂಪಿಸಿ) ಸರ್ವಾನುಮತದಿಂದ ನಿರ್ಧಾರ ಕೈಗೊಂಡಿದೆ. ಕೋವಿಡ್ ಪರಿಣಾಮದ ಪ್ರಭಾವವನ್ನು ತಗ್ಗಿಸಲು ಆರ್‌ಬಿಐ ಈವರೆಗೆ 100ಕ್ಕೂ ಹೆಚ್ಚು ಕ್ರಮಗಳನ್ನು ತೆಗೆದುಕೊಂಡಿದೆ.