ETV Bharat / business

ಸಾರ್ವಜನಿಕರ ಗಮನಕ್ಕೆ..! N-95 ಮಾಸ್ಕ್ ಬೆಲೆಯಲ್ಲಿ ಶೇ 47ರಷ್ಟು ಇಳಿಕೆ - ರಾಷ್ಟ್ರೀಯ ಔಷಧೀಯ ಬೆಲೆ ಪ್ರಾಧಿಕಾರ

ದೇಶದಲ್ಲಿ ಕೈಗೆಟುಕುವ ದರದಲ್ಲಿ ಉಸಿರಾಟದ ಸಂರಕ್ಷಣಾ ಸಾಧನದ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಬೆಲೆ ನಿಯಂತ್ರಕ ರಾಷ್ಟ್ರೀಯ ಔಷಧೀಯ ಬೆಲೆ ಪ್ರಾಧಿಕಾರದ (ಎನ್‌ಪಿಪಿಎ) ಸಲಹೆಯ ಬಳಿಕ ಎನ್ -95 ಮುಖಗವಸುಗಳ ದರವನ್ನು ಶೇ 47ರಷ್ಟು ಕಡಿತಗೊಳಿಸಲಾಗಿದೆ.

N95 masks
ಮಾಸ್ಕ್​
author img

By

Published : May 25, 2020, 10:54 PM IST

ನವದೆಹಲಿ: ದೇಶದಲ್ಲಿ ಕೊರೊನಾ ವೈರಸ್​ ಭೀತಿ ಹೆಚ್ಚಾದ ಬೆನ್ನಲ್ಲೇ ಈ ವೈರಸ್ ಹರಡುವಿಕೆಯನ್ನ ಸ್ವಲ್ಪಮಟ್ಟಿಗೆ ತಡೆಗಟ್ಟಬಲ್ಲ ಎನ್​​-95 ಹೆಸರಿನ ಮುಖಗವಸು ಬೆಲೆಯಲ್ಲಿ ಭಾರೀ ಪ್ರಮಾಣದಲ್ಲಿ ಇಳಿಕೆಯಾಗಿದೆ.

ದೇಶದಲ್ಲಿ ಕೈಗೆಟುಕುವ ದರದಲ್ಲಿ ಉಸಿರಾಟದ ಸಂರಕ್ಷಣಾ ಸಾಧನದ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಬೆಲೆ ನಿಯಂತ್ರಕ ರಾಷ್ಟ್ರೀಯ ಔಷಧೀಯ ಬೆಲೆ ಪ್ರಾಧಿಕಾರದ (ಎನ್‌ಪಿಪಿಎ) ಸಲಹೆಯ ಬಳಿಕ ಎನ್ -95 ಮುಖಗವಸುಗಳ ದರವನ್ನು ಶೇ 47ರಷ್ಟು ಕಡಿತಗೊಳಿಸಲಾಗಿದೆ.

ಎನ್ -95 ಮಾಸ್ಕ್​ಗಳು ಈ ಮೊದಲು ಮಾರುಕಟ್ಟೆಯಲ್ಲಿ ಪ್ರತಿ ಯೂನಿಟ್‌ಗೆ 150 ರಿಂದ 300 ರೂ.ಗಳಿಗೆ ಮಾರಾಟ ಮಾಡಲಾಗುತ್ತಿತ್ತು. ಎನ್‌ಪಿಪಿಎ ಸಲಹೆಯ ಮೇರೆಗೆ ದರ ಕಡಿತವಾಗಿದ್ದು, ಸೋಂಕು ನಿವಾರಣೆಗೆ ಮಾಸ್ಕ್​​ ಧರಿಸುವಿಕೆ ಹೆಚ್ಚಳವಾಗಬಹುದು.

ಎನ್ -95 ಮುಖಗವಸುಗಳ ಹೆಚ್ಚಿನ ಬೆಲೆಗಳ ಸಮಸ್ಯೆಯನ್ನು ಪರಿಹರಿಸಲಾಗಿದೆ. ದೇಶದಲ್ಲಿ ಕೈಗೆಟುಕುವ ಬೆಲೆಯಲ್ಲಿ ಅವುಗಳ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಎನ್​ಪಿಪಿಎ ಮಧ್ಯೆ ಪ್ರವೇಶಿಸಿದೆ ಎಂದು ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

ಎನ್​ಪಿಪಿಎ 2020ರ ಮೇ 21ರಂದು ಎನ್ -95 ಮುಖಗವಸುಗಳ ಎಲ್ಲ ತಯಾರಕರು / ಆಮದುದಾರರು / ಪೂರೈಕೆದಾರರಿಗೆ ಸರ್ಕಾರೇತರ ಖರೀದಿಗಳ ಬೆಲೆಗಳಲ್ಲಿ ಸಮಾನತೆಯನ್ನು ಕಾಪಾಡಿಕೊಳ್ಳಲು ಮತ್ತು ಸಮಂಜಸವಾದ ಬೆಲೆಯಲ್ಲಿ ಲಭ್ಯವಾಗುವಂತೆ ಸಲಹೆಯನ್ನು ನೀಡಿತು ಎಂದು ಹೇಳಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.