ಮುಂಬೈ: ಕಳೆದ ವರ್ಷದ 3ನೇ ತ್ರೈಮಾಸಿಕದಲ್ಲಿ ಫ್ಲ್ಯಾಟ್‌ಗಳ ಬುಕ್ಕಿಂಗ್ ಎರಡು ಪಟ್ಟು ಜಿಗಿತ ಕಂಡ ಹಿನ್ನೆಲೆ ಮುಂಬೈ ಷೇರುಪೇಟೆಯಲ್ಲಿ ಪ್ರೆಸ್ಟೀಜ್ ಎಸ್ಟೇಟ್ ಷೇರುಗಳ ಮೌಲ್ಯ ಶೇ.8ರಷ್ಟು ಏರಿಕೆ ಕಂಡಿದೆ.
ಕಳೆದ ವರ್ಷದ ಡಿಸೆಂಬರ್‌ಗೆ ಕೊನೆಗೊಂಡ ತ್ರೈಮಾಸಿಕದಲ್ಲಿ ಪ್ಲ್ಯಾಟ್‌ಗಳ ಮಾರಾಟದ ಬುಕ್ಕಿಂಗ್‌ನಲ್ಲಿ ಕಂಪನಿಯು ಎರಡು ಪಟ್ಟು ಜಿಗಿತ ಕಂಡಿರುವ ವರದಿ ಮಾಡಿದ ನಂತರ ಹೂಡಿಕೆದಾರರು ಈ ಸಂಸ್ಥೆಗಳ ಷೇರುಗಳ ಖರೀದಿಗೆ ಹೆಚ್ಚಿನ ಆಸಕ್ತಿ ತೋರಿದ್ದಾರೆ. ಬಿಎಸ್‌ಇನಲ್ಲಿ ಶೇ.7.96ರಷ್ಟು ಗಳಿಕೆ ಕಂಡು 52 ವಾರದ ಗರಿಷ್ಠ ಮಟ್ಟವಾದ 553.40 ರೂಪಾಯಿಗೆ ತಲುಪಿದೆ.
ಡಿಸೆಂಬರ್‌ಗೆ ಕೊನೆಗೊಂಡ ತ್ರೈಮಾಸಿಕದಲ್ಲಿ ಮಾರಾಟದ ಫ್ಲ್ಯಾಟ್‌ಗಳ ಬುಕ್ಕಿಂಗ್‌ನಿಂದ ದಾಖಲೆಯ 4,267.6 ಕೋಟಿ ರೂ.ಗಳ ಗಳಿಕೆಯನ್ನು ಕಂಡಿದೆ. ಇದೇ ಅವಧಿಯ ಹಿಂದಿನ ವರ್ಷದಲ್ಲಿ 2,026 ಕೋಟಿ ರೂ.ಮೌಲ್ಯದ ಬುಕ್ಕಿಂಗ್ ನಡೆದಿತ್ತು. ಇದು ವರ್ಷದಿಂದ ವರ್ಷಕ್ಕೆ ಶೇ.70ರಷ್ಟು ಹೆಚ್ಚಾಗಿದೆ.
ಏಪ್ರಿಲ್-ಡಿಸೆಂಬರ್ 2021ರ ಅವಧಿಯಲ್ಲಿ ಕಂಪನಿಯ ಮಾರಾಟದ ಬುಕ್ಕಿಂಗ್ ಶೇ.97ರಷ್ಟು ಏರಿಕೆಯಾಗಿ ದಾಖಲೆಯ 7,113.4 ಕೋಟಿ ರೂಪಾಯಿ ಗಳಿಸಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ 3,610.3 ಕೋಟಿ ರೂ.ವಹಿವಾಟು ನಡೆದಿತ್ತು.
ಪ್ರೆಸ್ಟೀಜ್ ಗ್ರೂಪ್‌ನ ಅಧ್ಯಕ್ಷ ಇರ್ಫಾನ್ ರಜಾಕ್ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಹೊಸ ಮಾರಾಟವು ನಮ್ಮ ಹೊಸದಾಗಿ ಪ್ರಾರಂಭಿಸಲಾದ ಯೋಜನೆಗಳಿಗೆ ಉತ್ತಮ ಪ್ರತಿಕ್ರಿಯೆ ಹಾಗೂ ಬೆಂಬಲ ವ್ಯಕ್ತವಾಗುತ್ತಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಏಳು ದಿನದಲ್ಲಿ ಶೇ70 ರಷ್ಟು ಏರಿಕೆ ಕಂಡ ಕಾಫಿ ಡೇ ಎಂಟ್ರಪ್ರೈಸಸ್ ಷೇರುಗಳ ಮೌಲ್ಯ!