ನವದೆಹಲಿ: ಆರ್ಥಿಕ ಬೆಳವಣಿಗೆಯ ದರ ಕುಸಿಯುತ್ತಿರುವಾಗಲೆಲ್ಲ ಕಚ್ಚಾ ತೈಲ ದರವು ಪ್ರಧಾನಿ ನರೇಂದ್ರ ಮೋದಿ ಅವರ ಸ್ನೇಹಿತನಂತೆ ವರ್ತಿಸುತ್ತದೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.
ಶುಕ್ರವಾರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಆರ್ಥಿಕತೆಗೆ ಉತ್ತೇಜನ ನೀಡುವಂತಹ ಸುಧಾರಣೆಗಳನ್ನು ಹೊರಡಿಸಿದ ಬಳಿಕ ಕಚ್ಚಾ ತೈಲ ದರದಲ್ಲಿ ಇಳಿಕೆ ಕಂಡುಬಂದಿದೆ.
ಅಮೆರಿಕದ ಸರಕುಗಳ ಮೇಲೆ ಚೀನಾ ಹೊಸದಾಗಿ ಸುಂಕ ಹೇರಿಸುವ ನಿರ್ಧಾರ ಪ್ರಕಟಿಸುತ್ತಿದ್ದಂತೆ ಅಮೆರಿಕದ ಪ್ರತಿ ಬ್ಯಾರೆಲ್ ಕಚ್ಚಾ ತೈಲದ ಮೇಲೆ ಶೇ 3ರಷ್ಟು ಕುಸಿದು 53.58 ಡಾಲರ್ಗೆ ತಲುಪಿದ್ದು, ಇದು ಜಾಗತಿಕ ಬೇಡಿಕೆಯ ಪುನರುಜ್ಜೀವನದ ಭರವಸೆಯಾಗಿ ಕಾಣಿಸುತ್ತಿದೆ. ಜಾಗತಿಕ ಬ್ರೆಂಟ್ ಕಚ್ಚಾ ತೈಲವು ಪ್ರತಿ ಬ್ಯಾರೆಲ್ ಮೇಲೆ ಶೇ 2ರಷ್ಟು ಕುಸಿತ ಅಥವಾ 1.19 ಡಾಲರ್ ಇಳಿಕೆಯಾಗಿ 58.75 ಡಾಲರ್ನಲ್ಲಿ ವಹಿವಾಟು ನಡೆಸುವುದು ಭಾರತಕ್ಕೆ ಉಪಯುಕ್ತವಾಗಲಿದೆ.
ತೈಲ ಬೆಲೆ ಕುಸಿತವು ಆರ್ಥಿಕತೆಯ ಪುನರುಜ್ಜೀವನಗೊಳಿಸುವ ಹಂತಕ್ಕೆ ಬೆಂಬಲವಾಗಿ ನಿಲುತ್ತದೆ. ಅಗ್ಗದ ತೈಲ ಆಮದು ಚಾಲ್ತಿ ಖಾತೆ ಕೊರತೆ ಮತ್ತು ಹಣದುಬ್ಬರ ಏರಿಕೆಯನ್ನು ತಡೆಯುತ್ತದೆ. ತೈಲದ ಮೇಲಿನ ಸಬ್ಸಿಡಿ ಕಡಿತಗೊಳ್ಳುತ್ತದೆ.
ಯಥಾಸ್ಥಿಯಲ್ಲಿ ಮುಂದುವರಿದ ಡೀಸೆಲ್ ಮತ್ತು ಪೆಟ್ರೋಲ್ ದರ
ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ದೇಶದ ಪ್ರಮುಖ ನಗರಗಳಾದ ಮುಂಬೈ, ಚೆನ್ನೈ, ಕೋಲ್ಕತ್ತಾ ಮತ್ತು ಬೆಂಗಳೂರನಲ್ಲಿ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಯಥವತ್ತಾಗಿ ಮುಂದುವರಿದಿದೆ.
ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ದರವು ದೆಹಲಿ, ಮುಂಬೈ, ಚೆನ್ನೈ, ಕೋಲ್ಕತ್ತಾ ಮತ್ತು ಬೆಂಗಳೂರಿನಲ್ಲಿ ಕ್ರಮವಾಗಿ ₹ 71.84 & ₹, ₹ 77.50 & ₹ 67.49, ₹ 74.62 & ₹ 68.26, ₹ 74.54 & ₹ 68.79 ಹಾಗೂ ₹ 74.35 & ₹ 67.35 ಮಾರಾಟ ಆಗುತ್ತಿದೆ.