ನವದೆಹಲಿ: ಸರ್ಕಾರ ಬೆಂಬಲಿತ ತೈಲ ಮಾರುಕಟ್ಟೆ ಕಂಪನಿಗಳು ಶುಕ್ರವಾರದಂದು ಪೆಟ್ರೋಲ್ ದರದಲ್ಲಿ ಇಳಿಕೆ ಮಾಡಿದ್ದು, ದೆಹಲಿ, ಮುಂಬೈ, ಕೊಲ್ಕತ್ತಾ, ಚೆನ್ನೈ ಹಾಗೂ ಬೆಂಗಳೂರಿನಲ್ಲಿ ಡೀಸೆಲ್ ಬೆಲೆ ಜಿಗಿತ ಕಂಡಿದೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಲೀಟರ್ ಪೆಟ್ರೋಲ್ ನಿನ್ನೆ ₹ 71.18ರಲ್ಲಿ ಮಾರಾಟ ಆಗುತ್ತಿದ್ದರೆ ಇಂದು ₹ 71.10ರಲ್ಲಿ ವಾಹನ ಸವಾರರು ಖರೀದಿಸುತ್ತಿದ್ದಾರೆ. ಅದೇ ರೀತಿ, ಲೀಟರ್ ಡೀಸೆಲ್ ಬೆಲೆಯಲ್ಲಿ 5 ಪೈಸೆ ಇಳಿಕೆಯಾಗಿದ್ದು, ₹ 65.91 ವಹಿವಾಟು ನಡೆಸುತ್ತಿದೆ.
ಮುಂಬೈ, ಕೊಲ್ಕತ್ತಾ, ಚೆನ್ನೈ ಹಾಗೂ ಬೆಂಗಳೂರಿನಲ್ಲಿ ಲೀ. ಪೆಟ್ರೋಲ್ ಹಾಗೂ ಡೀಸೆಲ್ ಕ್ರಮವಾಗಿ ₹ 76.71 & ₹ 69.11, ₹ 73.17 & ₹ 67.71, ₹ 73.79 & 69.72 ದರದಲ್ಲಿ ಮಾರಾಟವಾಗುತ್ತಿದೆ.
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್ ದರದಲ್ಲಿ 8 ಪೈಸೆ ಇಳಿಕೆ ಕಂಡು ₹ 73.42 ದರದಲ್ಲಿ ಮಾರಾಟ ಆಗುತ್ತಿದೆ. ಡೀಸೆಲ್ ಬೆಲೆಯಲ್ಲಿ 6 ಪೈಸೆ ಜಿಗಿತವಾಗಿ ₹ 68.11ರಲ್ಲಿ ವಹಿವಾಟು ನಿರತವಾಗಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರಲ್ಗೆ 73.00 ನಷ್ಟಿದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಪೆಟ್ರೋಲ್ ವಿತರಣಾ ಕಂಪೆನಿಗಳು ಮತ್ತು ಸ್ಥಳದಿಂದ ಸ್ಥಳಕ್ಕೆ ಸ್ವಲ್ಪ ವ್ಯತ್ಯಾಸ ಇರಲಿದೆ.