ನವದೆಹಲಿ: ಕಚ್ಚಾತೈಲ ಬಾವಿಗಳ ಮೇಲೆ ಉಗ್ರರು ಡ್ರೋನ್ ದಾಳಿ ನಡೆಸಿದ ಬಳಿಕ ಭಾರಿ ಏರಿಕೆ ಕಂಡಿದ್ದ ಕಚ್ಚಾತೈಲ ಬೆಲೆ ಈಗ ಇಳಿಕೆ ಹಾದಿ ಹಿಡಿದಿದೆ. ಉಗ್ರರ ದಾಳಿಯಿಂದಾಗಿ ಇಂಧನ ಬೆಲೆ ದಿಡೀರ್ ಆಗಿ 80 ರೂ.ಗಡಿಯತ್ತ ಹೋಗುತ್ತಿದ್ದ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಇಳಿಕೆಯಾಗುವ ಸಾಧ್ಯತೆಗಳಿವೆ.
ಕಳೆದ ತಿಂಗಳಾಂತ್ಯಕ್ಕೆ ಬ್ಯಾರಲ್ವೊಂದಕ್ಕೆ 70 ಡಾಲರ್ ತಲುಪಿದ್ದ ಕಚ್ಚಾತೈಲ ಬೆಲೆ ಈಗ 59.4 ಡಾಲರ್ಗೆ ಇಳಿಕೆ ಕಂಡಿದೆ. ಪರಿಣಾಮ ದೇಶೀಯ ಮಾರುಕಟ್ಟೆಯಲ್ಲೂ ಪೆಟ್ರೋಲ್- ಡೀಸೆಲ್ ಬೆಲೆ ಇಳಿಕೆಯಾಗುವ ಸಾಧ್ಯತೆ ಇದೆ.
ಸರ್ಕಾರ ಹಾಗೂ ಪೆಟ್ರೋಲಿಯಂ ಕಂಪನಿಗಳು ಮುಂದಿನ ಎರಡು ವಾರಗಳಲ್ಲಿ ಬೆಲೆ ಇಳಿಕೆ ಮಾಡುವ ಸಾಧ್ಯತೆಗಳಿವೆ ಎನ್ನಲಾಗಿದೆ.