ನವದೆಹಲಿ: ತೈಲ ಮಾರಾಟ ಕಂಪನಿಗಳು (ಒಎಂಸಿಗಳು) ಜಾಗತಿಕ ತೈಲ ಮಾರುಕಟ್ಟೆಯಲ್ಲಿನ ಬೆಳವಣಿಗೆಗಳನ್ನು ಎದುರು ನೋಡುತ್ತಿದ್ದು, ಕಳೆದ ಮೂರು ದಿನಗಳಿಂದ ಪೆಟ್ರೋಲ್ ಮತ್ತು ಡೀಸೆಲ್ ಚಿಲ್ಲರೆ ದರ ಯಥಾವತ್ತಾಗಿದೆ.
ಪೆಟ್ರೋಲ್ ಮತ್ತು ಡೀಸೆಲ್‌ನ ಪಂಪ್ ಬೆಲೆಯಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ. ಇದರೊಂದಿಗೆ ರಾಷ್ಟ್ರ ರಾಜಧಾನಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್ಗೆ 91.17 ರೂ. ಮತ್ತು ಡೀಸೆಲ್ ದರ 81.47 ರೂ.ಯಲ್ಲಿ ಸಾಗುತ್ತಿದೆ. ದೇಶಾದ್ಯಂತ ಪ್ರಮುಖ ನಗರಗಳಲ್ಲಿ ಸಹ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಬದಲಾಗದೆ ಉಳಿದಿದೆ.
ಮಂಗಳವಾರದ ಬೆಲೆ ವಿರಾಮವು ಜಾಗತಿಕ ಮಾರುಕಟ್ಟೆಗಳಲ್ಲಿ ಉತ್ಪನ್ನದ ಬೆಲೆಯಲ್ಲಿ ಇಳಿಕೆಯಾಗಿದೆ ಎಂದು ಒಎಂಸಿ ಮೂಲಗಳು ತಿಳಿಸಿವೆ. ಕಳೆದೆರಡು ವಾರಗಳಿಂದ ಏರಿಕೆಯಲ್ಲಿದ್ದ ಕಚ್ಚಾ ತೈಲವು, ಇತ್ತೀಚೆಗೆ ಕೆಳಮುಖ ಚಲನೆಯಲ್ಲಿದೆ. ಈಗ ಬ್ಯಾರೆಲ್‌ಗೆ 63 ಡಾಲರ್ಗಿಂತ ಕಡಿಮೆಯಿದೆ.
ಇದನ್ನೂ ಓದಿ: ಜಾಗತಿಕ ಕುಬೇರರ ಪಟ್ಟಿಯಲ್ಲಿ ಅಂಬಾನಿಗೆ 8ನೇ ಸ್ಥಾನ: ಕೊರೊನಾ ಮಧ್ಯೆ ಜಿಯೋ ಒಡೆಯ ಗಳಿಸಿದ್ದೆಷ್ಟು?
ಫೆಬ್ರವರಿ 9ರಿಂದ ಇಂಧನ ಚಿಲ್ಲರೆ ದರ ಸತತವಾಗಿ ಏರುಗತಿಯಲ್ಲಿ ಸಾಗುತ್ತಿದೆ. ಅಂದಿನಿಂದ ಸಂಭವಿಸಿದ 14 ಬಾರಿ ದರ ಏರಿಕೆಯಲ್ಲಿ ಲೀಟರ್ ಪೆಟ್ರೋಲ್ ಮೇಲೆ 4.22 ರೂ. ಹಾಗೂ ಡೀಸೆಲ್ 4.34 ರೂ.ಯಷ್ಟು ಹೆಚ್ಚಳವಾಗಿದೆ. ಹಿಂದಿನ ವಾರಗಳ ದರ ಹೆಚ್ಚಳದಿಂದ ದೇಶದ ಹಲವು ನಗರಗಳಲ್ಲಿ ಪೆಟ್ರೋಲ್ ಐತಿಹಾಸಿಕ ಗರಿಷ್ಠ ಮಟ್ಟ 100 ರೂ. ಗಡಿ ದಾಟಿತ್ತು.
ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು 2021ರಲ್ಲಿ 26 ಬಾರಿ ಹೆಚ್ಚಾಗಿದ್ದು, ಎರಡು ಇಂಧನಗಳ ಬೆಲೆಗಳು ಕ್ರಮವಾಗಿ 7.46 ಮತ್ತು 7.60 ರೂ.ನಷ್ಟು ಏರಿಕೆಯಾಗಿವೆ. ಮುಂದಿನ ದಿನಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಮತ್ತಷ್ಟು ಹೆಚ್ಚಾಗಬಹುದು ಎಂದು ತೈಲ ಕಂಪೆನಿ ಅಧಿಕಾರಿಗಳು ತಿಳಿಸಿದ್ದಾರೆ. ಒಎಂಸಿಗಳು ವಾಹನ ಇಂಧನಗಳ ಮಾರಾಟದಿಂದ ನಷ್ಟವಾಗದಂತೆ ತಡೆಯಲು ಜಾಗತಿಕ ಬೆಳವಣಿಗೆಗಳಿಗೆ ಅನುಗುಣವಾಗಿ ಚಿಲ್ಲರೆ ಬೆಲೆಗಳನ್ನು ಸಮತೋಲನ ಕಾಯ್ದುಕೊಳ್ಳಬಹುದು.