ನವದೆಹಲಿ: ಜಾಗತಿಕ ತೈಲ ಮಾರುಕಟ್ಟೆ ಬೆಲೆಗಳಲ್ಲಿ ನಿಯಮಿತವಾಗಿ ಏರುಪೇರಾಗಿದ್ದರೂ ದೇಶದಲ್ಲಿ ಇಂಧನ ಚಿಲ್ಲರೆ ದರಗಳು ಕಳೆದ ಎರಡು ವಾರಗಳಿಂದ ಯಥಾವತ್ತಾಗಿ ಮುಂದುವರೆದಿವೆ.
ರಾಷ್ಟ್ರ ರಾಜಧಾನಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 91.17 ರೂ. ಮತ್ತು ಡೀಸೆಲ್ 81.47 ರೂ.ಗೆ ಮಾರಾಟ ಆಗುತ್ತಿದ್ದು, 14 ದಿನಗಳಿಂದ ಇಂಧನ ಬೆಲೆಗಳು ಪರಿಷ್ಕರಣೆಯಾಗದೇ ಯಥಾವತ್ತಾಗಿ ಮುಂದುವರಿದಿವೆ.
ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಬದಲಾಗದೇ ಉಳಿದಿದೆ. ಆದರೆ, ಈ ಸ್ಥಿರತೆಯು ದೇಶದ ಹಲವು ಭಾಗಗಳಲ್ಲಿ ಪ್ರತಿ ಲೀಟರ್‌ಗೆ (ಪೆಟ್ರೋಲ್) 100 ರೂ. ದಾಟಿದ್ದು, ಇದನ್ನು ತಗ್ಗಿಸಲು ನೆರವಾಗಿಲ್ಲ.
ಫೆಬ್ರವರಿ ಆರಂಭದಿಂದಲೂ ಕಚ್ಚಾ ತೈಲ ಬ್ಯಾರೆಲ್‌ಗೆ 7 ಡಾಲರ್‌ಗಿಂತ ಹೆಚ್ಚಿನ ಲಾಭ ಗಳಿಸಿದೆ. ಇದು 14 ಬಾರಿ ಇಂಧನ ಬೆಲೆ ಹೆಚ್ಚಿಸಲು ಒಎಂಸಿಗಳನ್ನು ನೂಕಿತು. ದೆಹಲಿಯಲ್ಲಿ ಲೀಟರ್ ಪೆಟ್ರೋಲ್ ಮೇಲೆ 4.22 ರೂ. ಮತ್ತು ಡೀಸೆಲ್‌ಗೆ 4.34 ರೂ.ಯಷ್ಟು ಹೆಚ್ಚಾಯಿತು. ಕಚ್ಚಾ ತೈಲ ಈಗ ಬ್ಯಾರೆಲ್‌ಗೆ 69.5 ಡಾಲರ್‌ಗಳಲ್ಲಿ ವಹಿವಾಟು ನಡೆಸುತ್ತಿದೆ.
ಸ್ಥಳೀಯ ಮಾರಾಟ ತೆರಿಗೆ ಅಥವಾ ವ್ಯಾಟ್ ಮತ್ತು ಸರಕು ಶುಲ್ಕ ಅವಲಂಬಿಸಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿವೆ.
ಕೇಂದ್ರ ಮತ್ತು ರಾಜ್ಯ ತೆರಿಗೆಗಳು ಪೆಟ್ರೋಲ್‌ನ ಚಿಲ್ಲರೆ ಮಾರಾಟದ ಬೆಲೆಯ ಶೇ 61ಕ್ಕಿಂತಲೂ ಅಧಿಕವಾಗಿವೆ. ಡೀಸೆಲ್ ಮೇಲೆ ಶೇ 56ರಷ್ಟು ಟ್ಯಾಕ್ಸ್ ಹೊಂದಿವೆ. ಕೇಂದ್ರವು ಪ್ರತಿ ಲೀಟರ್ ಪೆಟ್ರೋಲ್ ಅಬಕಾರಿ ಸುಂಕವಾಗಿ 32.90 ರೂ. ಮತ್ತು ಡೀಸೆಲ್‌ಗೆ 31.80 ರೂ. ವಿಧಿಸುತ್ತದೆ. ಅಂತಾರಾಷ್ಟ್ರೀಯ ಬೆಲೆ ಮತ್ತು ವಿದೇಶಿ ವಿನಿಮಯ ದರಗಳಿಗೆ ಅನುಗುಣವಾಗಿ ಇಂಧನ ಬೆಲೆಗಳನ್ನು ಪ್ರತಿದಿನ ಪರಿಷ್ಕರಿಸಲಾಗುತ್ತದೆ.