ETV Bharat / business

ಪೆಟ್ರೋಲ್ ಬಳಿಕ ಸೆಂಚುರಿ ಬಾರಿಸಿದ ಡೀಸೆಲ್​: ಬೆಂಗಳೂರಲ್ಲಿ ಇಂಧನ ದರ ಹೀಗಿದೆ

ಇಂದಿನ ಬೆಲೆ ಪರಿಷ್ಕರಣೆಯೊಂದಿಗೆ ಮುಂಬೈನಲ್ಲಿ ಈಗ ಒಂದು ಲೀಟರ್ ಪೆಟ್ರೋಲ್ ಬೆಲೆ 102.30 ರೂ. ಆಗಿದ್ದರೇ ಡೀಸೆಲ್ ಬೆಲೆ 94.39 ರೂ. ಎಂದು ಭಾರತೀಯ ಇಂಡಿಯನ್ ಆಯಿಲ್ ಕಾರ್ಪೊರೇಷನ್ ವೆಬ್‌ಸೈಟ್ ತಿಳಿಸಿದೆ. ದೇಶದ ಮೆಟ್ರೋ ನಗರಗಳ ಪೈಕಿ ಮುಂಬೈ ಮೇ 29ರಂದು ಮೊದಲ ಬಾರಿಗೆ ಪೆಟ್ರೋಲ್ ಅನ್ನು ಲೀಟರ್​ಗೆ 100 ರೂ. ದರದಲ್ಲಿ ಮಾರಾಟ ಮಾಡಿದೆ. ರಾಜಸ್ಥಾನ, ಮಧ್ಯಪ್ರದೇಶ, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ ಮತ್ತು ಲಡಾಕ್ ಸೇರಿದಂತೆ ಕನಿಷ್ಠ ಆರು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಪೆಟ್ರೋಲ್ ಪ್ರತಿ ಲೀಟರ್ 100 ರೂ. ದಾಟಿದೆ.

Petrol
Petrol
author img

By

Published : Jun 12, 2021, 2:46 PM IST

ನವದೆಹಲಿ: ಎಲ್ಲ ಮಹಾನಗರಗಳಲ್ಲಿ ಸತತ ಎರಡನೇ ಬಾರಿಗೆ ದರಗಳನ್ನು ಹೆಚ್ಚಿಸಿದ್ದರಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಶನಿವಾರ (ಜೂನ್ 12) ಹೊಸ ದಾಖಲೆಯ ಗರಿಷ್ಠ ಮಟ್ಟ ಮುಟ್ಟಿದೆ. ಕೆಲವು ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕಂಡುಬಂದ ದರ ಪರಿಷ್ಕರಣೆಯಲ್ಲಿ, ಸರ್ಕಾರಿ ಸ್ವಾಮ್ಯದ ತೈಲ ಸಂಸ್ಥೆಗಳು 18 ದಿನಗಳ ವಿರಾಮವನ್ನು ಕೊನೆಗೊಳಿಸಿ, ಮೇ 4ರ ಬಳಿಕ 23 ಬಾರಿ ಬೆಲೆ ಏರಿಕೆ ಮಾಡಿವೆ.

ಇಂದಿನ ಬೆಲೆ ಪರಿಷ್ಕರಣೆಯೊಂದಿಗೆ ಮುಂಬೈನಲ್ಲಿ ಈಗ ಒಂದು ಲೀಟರ್ ಪೆಟ್ರೋಲ್ ಬೆಲೆ 102.30 ರೂ. ಆಗಿದ್ದರೇ ಡೀಸೆಲ್ ಬೆಲೆ 94.39 ರೂ. ಎಂದು ಭಾರತೀಯ ಇಂಡಿಯನ್ ಆಯಿಲ್ ಕಾರ್ಪೊರೇಷನ್ ವೆಬ್‌ಸೈಟ್ ತಿಳಿಸಿದೆ. ದೇಶದ ಮೆಟ್ರೋ ನಗರಗಳ ಪೈಕಿ ಮುಂಬೈ ಮೇ 29ರಂದು ಮೊದಲ ಬಾರಿಗೆ ಪೆಟ್ರೋಲ್ ಅನ್ನು ಲೀಟರ್​ಗೆ 100 ರೂ. ದರದಲ್ಲಿ ಮಾರಾಟ ಮಾಡಿದೆ.

ದೆಹಲಿಯಲ್ಲಿ ಇಂದು ಪೆಟ್ರೋಲ್ 96.12 ರೂ.ಗೆ ಮಾರಾಟವಾಗಿದ್ದರೆ, ಡೀಸೆಲ್ ಬೆಲೆ 86.98 ರೂ.ಯಷ್ಟಿದೆ. ಚೆನ್ನೈನಲ್ಲಿ ಲೀಟರ್ ಪೆಟ್ರೋಲ್‌ 97.43 ರೂ. ಮತ್ತು ಡೀಸೆಲ್‌ 91.64 ರೂ.ಯಷ್ಟಿದೆ. ಕೋಲ್ಕತ್ತಾದಲ್ಲಿ ದರ ಏರಿಕೆಯ ನಂತರ ಪೆಟ್ರೋಲ್ ಪ್ರತಿ ಲೀಟರ್‌ಗೆ 96.06 ರೂ. ಮತ್ತು ಡೀಸೆಲ್ ಲೀಟರ್‌ಗೆ 89.83 ರೂ. ಆಗಿದೆ.

ಓದಿ: ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಆರ್ಟಿಕಲ್​ 370 ಮರು ಜಾರಿ: ಸಿಂಗ್ ಕ್ಲಬ್‌ಹೌಸ್ ಚಾಟ್ ಸೋರಿಕೆಗೆ ರಾಜಕೀಯ ಬಿರುಗಾಳಿ

ರಾಜಸ್ಥಾನ, ಮಧ್ಯಪ್ರದೇಶ, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ ಮತ್ತು ಲಡಾಕ್ ಸೇರಿದಂತೆ ಕನಿಷ್ಠ ಆರು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಪೆಟ್ರೋಲ್ ಪ್ರತಿ ಲೀಟರ್ 100 ರೂ. ದಾಟಿದೆ.

ಡೀಸೆಲ್ 100 ರೂ.ಗೆ ಏರಿಕೆ:

ರಾಜಸ್ಥಾನದ ಶ್ರೀ ಗಂಗಾನಗರ ಜಿಲ್ಲೆಯಲ್ಲಿ ಡೀಸೆಲ್ ಬೆಲೆ ಮೊದಲ ಬಾರಿಗೆ 100 ರೂ. ದಾಟಿದೆ. ಪ್ರತಿ ಲೀಟರ್‌ಗೆ 100.05 ರೂ.ಗೆ ಮಾರಾಟವಾಗುತ್ತಿದೆ. ಭಾರತ - ಪಾಕಿಸ್ತಾನ ಗಡಿಯ ಸಮೀಪವಿರುವ ಜಿಲ್ಲೆಯಲ್ಲಿ ಈಗಾಗಲೇ ಪೆಟ್ರೋಲ್ ಪ್ರತಿ ಲೀಟರ್‌ಗೆ 107 ರೂ.ಗಳಷ್ಟಾಗಿದೆ.

ಸ್ಥಳೀಯ ತೆರಿಗೆಗಳಾದ ವ್ಯಾಟ್ ಮತ್ತು ಸರಕು ಶುಲ್ಕದ ಆಧಾರದ ಮೇಲೆ ಇಂಧನ ಬೆಲೆಗಳು ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿರುತ್ತದೆ. ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ರಾಜಸ್ಥಾನ ಅತಿ ಹೆಚ್ಚು ವ್ಯಾಟ್ ವಿಧಿಸುತ್ತಿದ್ದು, ನಂತರದ ಸ್ಥಾನದಲ್ಲಿ ಮಧ್ಯಪ್ರದೇಶ, ಮಹಾರಾಷ್ಟ್ರ, ಆಂಧ್ರಪ್ರದೇಶ ಮತ್ತು ತೆಲಂಗಾಣಗಳಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.