ETV Bharat / business

ಬೆಂಗಳೂರಿನಲ್ಲಿ ಪೆಟ್ರೋಲ್‌ ಬೆಲೆ ₹ 99.99: ಮುಂಬೈನಲ್ಲಿ ಹೊಸ ದಾಖಲೆ - ಇಂಧನ ಬೆಲೆಯಲ್ಲಿ ಮತ್ತೆ ಏರಿಕೆ

ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳಲ್ಲಿ ಮತ್ತೆ ಏರಿಕೆಯಾಗಿದ್ದು, ದೇಶದ ವಾಣಿಜ್ಯ ನಗರಿ ಮುಂಬೈ ಪೆಟ್ರೋಲ್ ಬೆಲೆ ವಿಚಾರದಲ್ಲಿ ದಾಖಲೆ ಬರೆದಿದೆ.

Petrol, diesel prices today on June 22: Prices hiked again to reach historic high, check rates in your city
ಇಂಧನ ಬೆಲೆಯಲ್ಲಿ ಮತ್ತೆ ಏರಿಕೆ: ಮುಂಬೈ ಪೆಟ್ರೋಲ್ ಬೆಲೆ ದಾಖಲೆ
author img

By

Published : Jun 22, 2021, 10:03 AM IST

ನವದೆಹಲಿ: ಇಂಧನ ಬೆಲೆಗಳಲ್ಲಿ ಒಂದು ದಿನದ ತಟಸ್ಥತೆಯ ನಂತರ ಮತ್ತೆ ಏರಿಕೆ ಕಂಡುಬಂದಿದೆ. ದೇಶದೆಲ್ಲೆಡೆ ಸರಾಸರಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಒಂದು ಲೀಟರ್​ಗೆ 25 ಪೈಸೆಯಿಂದ 28 ಪೈಸೆಗಳಷ್ಟು ಏರಿಕೆ ಕಂಡಿವೆ.

ಈ ಬೆಲೆ ಏರಿಕೆಯಿಂದಾಗಿ ಹಿಂದೆಂದೂ ತಲುಪಿರದ ಮಟ್ಟಿಗೆ ಇಂಧ ಬೆಲೆ ತಲುಪಿದೆ ಎಂದು ಸರ್ಕಾರದ ಒಡೆತನದ ಇಂಧನ ರಿಟೇಲರ್​ ಉದ್ಯಮಗಳು ಮಾಹಿತಿ ನೀಡಿವೆ.

ಮುಂಬೈನಲ್ಲಿ ಸೋಮವಾರ ಒಂದು ಲೀಟರ್ ಪೆಟ್ರೋಲ್ ಬೆಲೆ 103.36ರಷ್ಟಿದ್ದು, ಈಗ 27 ಪೈಸೆ ಏರಿಕೆಯೊಂದಿಗೆ 103.63 ರೂಪಾಯಿಗೆ ತಲುಪಿದೆ. ಪೆಟ್ರೋಲ್ ಬೆಲೆ ಈ ಬೆಲೆಗೆ ಮುಟ್ಟಿರುವುದು ಇದೇ ಮೊದಲು. ಮೇ 29ರಂದು ಮುಂಬೈನಲ್ಲಿ ಪೆಟ್ರೋಲ್ ಬೆಲೆ ನೂರು ರೂಪಾಯಿ ತಲುಪಿತ್ತು.

ಡೀಸೆಲ್ ಬೆಲೆಯೂ 28 ಪೈಸೆ ಏರಿಕೆಯಾಗಿದ್ದು, ಮುಂಬೈನಲ್ಲಿ ಒಂದು ಲೀಟರ್ ಬೆಲೆ 95.72 ರೂಪಾಯಿಗೆ ತಲುಪಿದೆ. ಸೋಮವಾರ ಡಿಸೇಲ್ ಬೆಲೆ ಒಂದು ಲೀಟರ್​ಗೆ 95.44 ರೂಪಾಯಿ ಆಗಿತ್ತು.

ಇದನ್ನೂ ಓದಿ: ಲಕ್ಷದ್ವೀಪ ಕರ್ನಾಟಕ ಹೈಕೋರ್ಟ್ ವ್ಯಾಪ್ತಿಗೆ ಒಳಪಡುತ್ತಾ? ಅಧಿಕಾರಿಗಳು ಹೇಳೋದೇನು?

ತಮಿಳುನಾಡು ರಾಜಧಾನಿ ಚೆನ್ನೈನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ತಲಾ 25 ಪೈಸೆ ಹೆಚ್ಚಳವಾಗಿದೆ. ಪ್ರಸ್ತುತ ಪೆಟ್ರೋಲ್ ಬೆಲೆ 98.65 ರೂಪಾಯಿ ಮತ್ತು ಡೀಸೆಲ್ ಬೆಲೆ 92.83 ರೂಪಾಯಿಯಷ್ಟಿದೆ.

ಕೋಲ್ಕತಾದಲ್ಲಿ 26 ಪೈಸೆಯಷ್ಟು ಡಿಸೇಲ್​​​ ಬೆಲೆ ಏರಿಕೆ ಕಂಡಿದ್ದು, ಲೀಟರ್​ಗೆ 91 ರೂಪಾಯಿ ತಲುಪಿದೆ. ಪೆಟ್ರೋಲ್ ಬೆಲೆಯೂ 27 ಪೈಸೆ ಏರಿಕೆಯಾಗಿ ಒಂದು ಲೀಟರ್​ ಪೆಟ್ರೋಲ್ ಬೆಲೆ 97.38 ರೂಪಾಯಿಗೆ ತಲುಪಿದೆ.

ಬೆಂಗಳೂರಿನಲ್ಲಿ ಎಷ್ಟಿದೆ ಇಂಧನ ಬೆಲೆ?

ದೇಶದ ಎಲ್ಲಾ ಮೆಟ್ರೋ ನಗರಗಳಲ್ಲಿ ಈ ಮೊದಲು ಪೆಟ್ರೋಲ್ ಬೆಲೆ ನೂರರ ಗಡಿ ದಾಟಿತ್ತು. ಈಗ ಬೆಂಗಳೂರಿನಲ್ಲಿ ಒಂದು ಲೀಟರ್ ಪೆಟ್ರೋಲ್​ಗೆ 99.99 ರೂಪಾಯಿ ಇದೆ. ಸೋಮವಾರವೂ ಪೆಟ್ರೋಲ್ ಬೆಲೆ ಇಷ್ಟೇ ಇತ್ತು.

ಇನ್ನು ಡೀಸೆಲ್ ಬೆಲೆ 28 ಪೈಸೆ ಏರಿಕೆ ಕಂಡಿದ್ದು, ಸೋಮವಾರ 93.26 ರೂಪಾಯಿ ಇದ್ದ ಲೀಟರ್ ಡಿಸೇಲ್ ಬೆಲೆ ಈಗ 93.54 ರೂಪಾಯಿಗೆ ಏರಿಕೆಯಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.