ಮುಂಬೈ: ಸರ್ಕಾರಿ ಸ್ವಾಮ್ಯದ ತೈಲ ವಿತರಣಾ ಕಂಪನಿಗಳು ಭಾನುವಾರದಂದು ಇಂಧನದ ಚಿಲ್ಲರೆ ಮಾರುಕಟ್ಟೆ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ನಲ್ಲಿ 9 ಪೈಸೆ & 13 ಪೈಸೆಯಷ್ಟು ದರ ಕಡಿತಗೊಳಿಸಿವೆ.
ದೆಹಲಿಯಲ್ಲಿ ಲೀ. ಪೆಟ್ರೋಲ್ ₹ 71.91 ಲಭ್ಯವಾಗುತ್ತಿದ್ದು, 8 ಪೈಸೆಯಷ್ಟು ಕಡಿಮೆಯಾಗಿದೆ. ಡೀಸೆಲ್ ₹ 65.25ರಲ್ಲಿ ಖರೀದಿ ಆಗುತ್ತಿದ್ದು, 13 ಪೈಸೆ ಕಡಿತಗೊಂಡಿದೆ.
ದೇಶದ ಪ್ರಮುಖ ನಗರಗಳಾದ ಚೆನ್ನೈ, ಕೋಲ್ಕತ್ತಾ ಮತ್ತು ಮುಂಬೈನಲ್ಲಿ ಲೀ. ಪೆಟ್ರೋಲ್ ಮತ್ತು ಡೀಸೆಲ್ನಲ್ಲಿ ಕ್ರಮವಾಗಿ ₹ 74.61& ₹ 68.95, ₹ 74.61 & ₹ 67.64 ಹಾಗೂ ₹ 77.57 ₹ 67.64ನಲ್ಲಿ ಮಾರಾಟ ಆಗುತ್ತಿದೆ.
ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್ ಮೇಲೆ 8 ಪೈಸೆ ಕಡಿತವಾಗಿ ₹ 74.34ರಲ್ಲಿ ಹಾಗೂ ಡೀಸೆಲ್ 12 ಪೈಸೆ ಇಳಿಕೆಯಾಗಿ ₹ 67.46ರಲ್ಲಿ ವಹಿವಾಟು ನಡೆಸುತ್ತಿದೆ.