ನವದೆಹಲಿ: ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿ ಇರುವ ಚಿಲ್ಲರೆ ಇಂಧನ ದರದಲ್ಲಿ ಮತ್ತೆ ಏರಿಕೆಯಾಗಿದೆ.
ಶುಕ್ರವಾರದಂದು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ತಲಾ 30 ಪೈಸೆ ಹೆಚ್ಚಳವಾಗಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಲೀಟರ್ ಪೆಟ್ರೋಲ್ 86.95 ರೂ. ಹಾಗೂ ಡೀಸೆಲ್ ಪ್ರತಿ ಲೀಟರ್‌ಗೆ 77.13 ರೂ.ಯಲ್ಲಿದೆ.
ದೆಹಲಿ ಹೊರತಾಗಿ ಇತರ ಮಹಾನಗರಗಳಲ್ಲಿಯೂ ಇಂಧನ ದರ ಜಿಗಿದಿದೆ. ಮುಂಬೈನಲ್ಲಿ ಲೀಟರ್ ಪೆಟ್ರೋಲ್ ಬೆಲೆ 93.49 ರೂ. ಇದ್ದರೆ ಚೆನ್ನೈನಲ್ಲಿ 30 ಪೈಸೆ ಹೆಚ್ಚಳದ ನಂತರ 89.39 ರೂ.ಗೆ ತಲುಪಿದೆ.
ಕೋಲ್ಕತ್ತಾ ಮತ್ತು ಹೈದರಾಬಾದ್‌ನಲ್ಲಿ ಕ್ರಮವಾಗಿ ಲೀಟರ್‌ಗೆ 88.30 ಮತ್ತು 90.42 ರೂ.ಯಲ್ಲಿ ಲಭ್ಯವಾಗುತ್ತಿದೆ. ಡೀಸೆಲ್ ಬೆಲೆ ಮುಂಬೈಯಲ್ಲಿ ಪ್ರತಿ ಲೀಟರ್‌ಗೆ 83.99 ರೂ.ಗೆ ಏರಿದ್ದು, ಚೆನ್ನೈನಲ್ಲಿ ಲೀಟರ್‌ಗೆ 82.33 ರೂ; ಕೋಲ್ಕತ್ತಾದಲ್ಲಿ 80.71 ರೂ. ಮತ್ತು ಹೈದರಾಬಾದ್‌ನಲ್ಲಿ 84.14 ರೂ.ಯಷ್ಟಿದೆ.
ಸರ್ಕಾರಿ ತೈಲ ಮಾರಾಟ ಕಂಪನಿಗಳು (ಒಎಂಸಿಗಳು) ಅಂತಾರಾಷ್ಟ್ರೀಯ ತೈಲ ಬೆಲೆ ಮತ್ತು ವಿದೇಶಿ ವಿನಿಮಯ ದರಗಳ ಆಧಾರದ ಮೇಲೆ ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಪರಿಷ್ಕರಿಸುತ್ತವೆ.
ಇದನ್ನೂ ಓದಿ: ಭಾರತದಲ್ಲಿ ಪೇಪಾಲ್ ಡಿಜಿಟಲ್ ಪಾವತಿ ಸೇವೆ ಬಂದ್: ಯಾವ ದಿನದಿಂದ ಜಾರಿ?