ಮುಂಬೈ: ಎರಡು ವಾರಗಳ ಸುದೀರ್ಘ ವಿರಾಮದ ನಂತರ ಸರ್ಕಾರಿ ಸ್ವಾಮ್ಯದ ಚಿಲ್ಲರೆ ಇಂಧನ ವ್ಯಾಪಾರಿಗಳು ದೈನಂದಿನ ತೈಲ ದರ ಪರಿಷ್ಕರಣೆ ಪುನರಾರಂಭಿಸಿದ್ದರಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಸತತ ಮೂರನೇ ದಿನವೂ ಏರಿಕೆಯಾಗಿದೆ.
ದೆಹಲಿಯಲ್ಲಿ ಪೆಟ್ರೋಲ್ ದರವನ್ನು 25 ಪೈಸೆ ಡೀಸೆಲ್ ದರ 20 ಪೈಸೆ ಹೆಚ್ಚಾಗಿದೆ. ಇದರ ಪರಿಣಾಮವಾಗಿ, ಪೆಟ್ರೋಲ್ ರಾಷ್ಟ್ರ ರಾಜಧಾನಿಯಲ್ಲಿ ಪ್ರತಿ ಲೀಟರ್‌ಗೆ 90.99 ರೂ. ಮತ್ತು ಡೀಸೆಲ್ 81.42 ರೂ.ಗೆ ಮಾರಾಟವಾಗುತ್ತಿದೆ.
ಇದನ್ನೂ ಓದಿ: ಪಿಎಂಸಿ ಬ್ಯಾಂಕ್ ಹಗರಣ: ಬ್ಯಾಂಕ್ನ ಮೂವರು ಮಾಜಿ ನಿರ್ದೇಶಕರಿಗೆ ಬಾಂಬೆ ಹೈಕೋರ್ಟ್ ಜಾಮೀನು
ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಮಂಗಳವಾರ ಕ್ರಮವಾಗಿ 15 ಪೈಸೆ ಹಾಗೂ 18 ಪೈಸೆ ಹಾಗೂ ಬುಧವಾರ ಕ್ರಮವಾಗಿ 19 ಪೈಸೆ ಮತ್ತು 21 ಪೈಸೆ ಏರಿಕೆಯಾಗಿದ್ದವು. 18 ದಿನಗಳ ವಿರಾಮದ ನಂತರ ಸತತ 3ನೇ ಹೆಚ್ಚಳವಾಗಿದೆ.
ಮುಂಬೈಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕ್ರಮವಾಗಿ ₹ 97.34 ಮತ್ತು ₹ 88.49 ತಲುಪಿದೆ. ಚೆನ್ನೈ ನಿವಾಸಿಗಳು ಗುರುವಾರ ಪೆಟ್ರೋಲ್ ₹ 92.90 ಮತ್ತು ಡೀಸೆಲ್ ₹ 86.35ಕ್ಕೆ ಪಡೆಯಬಹುದು. ಕೋಲ್ಕತ್ತಾದಲ್ಲಿ ₹ 91.14 ಮತ್ತು ₹ 84.26 ಬೆಲೆಯಲ್ಲಿ ಮಾರಾಟ ಆಗುತ್ತಿದೆ. ಬೆಂಗಳೂರಲ್ಲಿ ಪೆಟ್ರೋಲ್ ₹ 93.77 ಹಾಗೂ ಡೀಸೆಲ್ 86.01 ರೂ.ಯಲ್ಲಿ ಖರೀದಿ ಆಗುತ್ತಿದೆ. ದೇಶಾದ್ಯಂತ ದರಗಳನ್ನು ಹೆಚ್ಚಿಸಲಾಗಿದೆ. ಸ್ಥಳೀಯ ತೆರಿಗೆ ವಿಧಿಸುವಿಕೆ (ವ್ಯಾಟ್) ಅವಲಂಬಿಸಿ ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತದೆ.