ETV Bharat / business

ಶತಕ ದಾಟಿದರೂ ನಿಲ್ಲದ ಪೆಟ್ರೋಲ್-ಡೀಸೆಲ್​ ದರ: ಇಂದು ಮತ್ತೆ ಬೆಲೆ ಏರಿಕೆ ಬರೆ - ಡೀಸೆಲ್ ದರಗಳು

ಮುಂಬೈನಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ ₹ 101 ದಾಟಿದ್ದು, ಡೀಸೆಲ್ ಲೀಟರ್‌ಗೆ ₹ 93.64 ರಷ್ಟಿದೆ. ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್ ₹ 97.92 ಯಲ್ಲಿ ಮಾರಾಟ ಆಗುತ್ತಿದ್ದರೇ ಡೀಸೆಲ್, ₹ 90.81 ಯಲ್ಲಿ ಖರೀದಿ ಆಗುತ್ತಿದೆ. ರಾಜ್ಯದ ಬಳ್ಳಾರಿ ಮತ್ತು ಶಿರಸಿಯಲ್ಲಿ ಪೆಟ್ರೋಲ್ ದರವು ಕ್ರಮವಾಗಿ ₹ 100.08 & ₹ 100.28 ಯಷ್ಟಾಗಿದೆ. ಇದು ರಾಜ್ಯದಲ್ಲೇ ₹ 100ಕ್ಕಿಂತ ಹೆಚ್ಚಾಗಿರುವುದು ಇದೇ ಮೊದಲು.

Petrol
Petrol
author img

By

Published : Jun 7, 2021, 9:51 AM IST

ಮುಂಬೈ: ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಸತತ ಎರಡನೇ ದಿನ ಜೂನ್ 7ರಂದು ಪ್ರತಿ ಲೀಟರ್‌ಗೆ 27-28 ಪೈಸೆ ಹೆಚ್ಚಿಸಲಾಗಿದೆ ಎಂದು ತೈಲ ಮಾರುಕಟ್ಟೆ ಕಂಪನಿಗಳು (ಒಎಂಸಿ) ತಿಳಿಸಿವೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಸೋಮವಾರ ಪ್ರತಿ ಲೀಟರ್‌ಗೆ ₹ 95 ದಾಟಿದ್ದು, ₹ 95.37ಯಲ್ಲಿ ಮಾರಾಟ ಆಗುತ್ತಿದೆ. ಡೀಸೆಲ್ ಬೆಲೆ ₹ 86.28 ಯಲ್ಲಿ ಖರೀದಿ ಆಗುತ್ತಿದೆ.

ಮುಂಬೈನಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ ₹ 101 ದಾಟಿದ್ದು, ಡೀಸೆಲ್ ಲೀಟರ್‌ಗೆ ₹ 93.64 ರಷ್ಟಿದೆ. ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್ ₹ 97.92 ಯಲ್ಲಿ ಮಾರಾಟ ಆಗುತ್ತಿದ್ದರೆ ಡೀಸೆಲ್, ₹ 90.81 ಯಲ್ಲಿ ಖರೀದಿ ಆಗುತ್ತಿದೆ. ರಾಜ್ಯದ ಬಳ್ಳಾರಿ ಮತ್ತು ಶಿರಸಿಯಲ್ಲಿ ಪೆಟ್ರೋಲ್ ದರವು ಕ್ರಮವಾಗಿ ₹ 100.08 & ₹ 100.28 ಯಷ್ಟಾಗಿದೆ. ಇದು ರಾಜ್ಯದಲ್ಲೇ ₹ 100ಕ್ಕಿಂತ ಹೆಚ್ಚಾಗಿರುವುದು ಇದೇ ಮೊದಲು.

ಇದನ್ನೂ ಓದಿ: ಜನರಿಗೆ ನುಂಗಲಾರದ ತುತ್ತಾಯ್ತು ಅಡುಗೆ ಎಣ್ಣೆ.. ದುಪ್ಪಟ್ಟಾದ ದರಕ್ಕೆ ಕಂಗಾಲಾದ ಜನ

ಚೆನ್ನೈ ಮತ್ತು ಕೋಲ್ಕತ್ತಾದಲ್ಲಿ ಪೆಟ್ರೋಲ್ ಇಂಧನವನ್ನು ಕ್ರಮವಾಗಿ ₹ 96.77 ಹಾಗೂ ₹ 95.34 ಗೆ ಮಾರಾಟ ಮಾಡಲಾಯಿತು. ಇದು ಜೂನ್ 6ರ ಬೆಲೆಗಿಂತ ಹೆಚ್ಚಾಗಿದೆ.

ಇತ್ತೀಚಿನ ಹೆಚ್ಚಳವೆಂದರೆ ಮೇ 4 ರಿಂದ ಇಲ್ಲಿಯತನಕ 21ನೇ ಬೆಲೆ ಏರಿಕೆಯಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ18 ದಿನಗಳ ದರ ವಿರಾಮದ ನಂತರ ಬೆಲೆ ಪರಿಷ್ಕರಣೆ ಮುಂದುವರಿಸಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.