ಮುಂಬೈ: ಹೊಸ ವರ್ಷದ ಶುರುವಿನಲ್ಲಿ ಒಂದಲ್ಲಾ ಒಂದು ಸರಕಿನ ದರ ಏರಿಕೆ ಆಗುತ್ತಲೇ ಸಾಗುತ್ತಿದೆ. ಮೊನ್ನೆ ರೈಲ್ವೆ ಟಿಕೆಟ್ ದರ, ನಿನ್ನೆ ಸಬ್ಸಿಡಿ ರಹಿತ ಸಿಲಿಂಡರ್ ಬೆಲೆ ಇಂದು ಪೆಟ್ರೋಲ್ ಧಾರಣೆಯಲ್ಲಿ ಹೆಚ್ಚಳವಾಗಿದೆ.
ದೇಶದ ಪ್ರಮುಖ ಮೆಟ್ರೋ ನಗರಗಳಲ್ಲಿ ಪೆಟ್ರೋಲ್ ದರ 8-11 ಪೈಸೆಯಷ್ಟು ಹೆಚ್ಚಳವಾಗಿದ್ದರೆ ಡೀಸೆಲ್ ಬೆಲೆಯಲ್ಲಿ 11-14 ಪೈಸೆಯಷ್ಟು ಏರಿಕೆಯಾಗಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ₹ 75.25 ಹಾಗೂ ಡೀಸೆಲ್ ₹ 68.10ರಲ್ಲಿ ಮಾರಾಟ ಆಗುತ್ತಿದೆ.
ಪ್ರಮುಖ ಮೆಟ್ರೋ ನಗರಗಳಾದ ಕೋಲ್ಕತ್ತಾ, ಮುಂಬೈ, ಚೆನ್ನೈ ಹಾಗೂ ಬೆಂಗಳೂರಿನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಅನುಕ್ರಮವಾಗಿ ₹ 77.87 & ₹ 70.49, ₹ 80.87 & ₹ 71.43, ₹ 78.20 & ₹ 71.89 ಹಾಗೂ ₹ 77.32 & ₹ 67.97 ಪಾವತಿಸಿ ಗ್ರಾಹಕರು ಖರೀದಿಸುತ್ತಿದ್ದಾರೆ.