ನವದೆಹಲಿ: ದೇಶೀಯ ಚಿಲ್ಲರೆ ತೈಲ ಮಾರುಕಟ್ಟೆಯಲ್ಲಿ ಸತತ ಎರಡನೇ ದಿನವೂ ಇಂಧನ ಬೆಲೆಯಲ್ಲಿ ಸ್ವಲ್ಪ ಕುಸಿತ ಕಂಡಿದೆ.
ದೇಶೀಯ ತೈಲ ಕಂಪನಿಗಳು ಪೆಟ್ರೋಲ್ ಅನ್ನು ಲೀಟರ್‌ಗೆ 21 ಪೈಸೆ ಮತ್ತು ಡೀಸೆಲ್ ಮೇಲೆ ಲೀಟರ್‌ಗೆ 20 ಪೈಸೆ ಕಡಿಮೆ ಮಾಡಲು ನಿರ್ಧರಿಸಿವೆ. ಇದರೊಂದಿಗೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಿನ್ನೆ ಒಂದು ಲೀಟರ್ ಪೆಟ್ರೋಲ್ ಬೆಲೆ 90.99 ರೂ.ಗಳಷ್ಟಿತ್ತು. ಇದು 21 ಪೈಸೆ ಇಳಿದು 90.78 ರೂ.ಗೆ ತಲುಪಿದೆ. ಡೀಸೆಲ್ ಬೆಲೆ 81.30 ರೂ.ಗಳಾಗಿದ್ದರೆ, ಅದು 20 ಪೈಸೆ ಇಳಿದು 81.10 ರೂ.ಗೆ ತಲುಪಿದೆ.
ಹೈದರಾಬಾದ್‌ನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಲೀಟರ್‌ಗೆ 22 ಪೈಸೆ ಕಡಿಮೆಯಾಗಿದೆ. ಇದರೊಂದಿಗೆ ಒಂದು ಲೀಟರ್ ಪೆಟ್ರೋಲ್ ಬೆಲೆ 94.39 ರೂ ಮತ್ತು ಡೀಸೆಲ್ ಬೆಲೆ 88.45 ರೂ.ಗಳಷ್ಟಿದೆ.
ದೇಶೀಯ ತೈಲ ಕಂಪನಿಗಳು ಬುಧವಾರ ದೇಶದಲ್ಲಿ ಹೆಚ್ಚುತ್ತಿರುವ ಇಂಧನ ಬೆಲೆಗಳಿಂದ ವಿರಾಮ ತೆಗೆದುಕೊಂಡವು. ನಿನ್ನೆ ಪೆಟ್ರೋಲ್ಗೆ 18 ಪೈಸೆ ಮತ್ತು ಡೀಸೆಲ್ಗೆ 17 ಪೈಸೆ ತಗ್ಗಿತ್ತು. ಕಳೆದ ವರ್ಷ ಮಾರ್ಚ್ 16ರ ನಂತರ ದೇಶದಲ್ಲಿ ಮೊದಲ ಬಾರಿಗೆ ಪೆಟ್ರೋಲ್ ಬೆಲೆಯನ್ನು ಬುಧವಾರ ಕಡಿತಗೊಳಿಸಲಾಗಿದೆ.
ನಗರ | ಪೆಟ್ರೋಲ್ ಬೆಲೆ ಲೀ. (ರೂ) | ಡೀಸೆಲ್ ಬೆಲೆ ಲೀ. (ರೂ) |
ದೆಹಲಿ | 90.78 | 81.10 |
ಚೆನ್ನೈ | 92.77 | 86.10 |
ಬೆಂಗಳೂರು | 93.82 | 85.99 |
ಮುಂಬೈ | 97.19 | 88.20 |
ಹೈದರಾಬಾದ್ | 94.39 | 88.45 |