ನವದೆಹಲಿ: ಅಂತಾರಾಷ್ಟ್ರೀಯ ತೈಲ ದರಗಳ ಪರಿಷ್ಕರಣೆಯು ಕಳೆದ ಎರಡು ತಿಂಗಳ ಬಳಿಕ ಮತ್ತೆ ಆರಂಭವಾಗಿದ್ದು, ಸತತ ಐದು ದಿನಗಳ ಏರಿಕೆಯ ನಂತರ ಇಂದು ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಬದಲಾಗದೆ ಹಾಗೆಯೇ ಉಳಿದಿದೆ.
ರಾಜಧಾನಿಯಲ್ಲಿ ಪೆಟ್ರೋಲ್ ದರ ಲೀಟರ್‌ಗೆ 81.59 ರೂ. ಮತ್ತು ಡೀಸೆಲ್ ಅನ್ನು ಲೀಟರ್‌ಗೆ 71.41 ರೂ. ಇದೆ. ಐದು ದಿನಗಳಲ್ಲಿ ಪೆಟ್ರೋಲ್ ಬೆಲೆ 53 ಪೈಸೆ ಮತ್ತು ಡೀಸೆಲ್ ದರ ಪ್ರತಿ ಲೀಟರ್‌ಗೆ 95 ಪೈಸೆ ಏರಿಕೆಯಾಗಿದೆ. ಬ್ರೆಂಟ್ ಕಚ್ಚಾ ತೈಲ ಇಂಟರ್ ಕಾಂಟಿನೆಂಟಲ್ ಎಕ್ಸ್ಚೇಂಜ್ನಲ್ಲಿ (ಐಸಿಇ) ಬ್ಯಾರಲ್ಗೆ 48 ಡಾಲರ್ ದಾಟಿದೆ.
ಸೆಪ್ಟೆಂಬರ್ 22 ರಿಂದ ಪೆಟ್ರೋಲ್ ಬೆಲೆ ಸ್ಥಿರವಾಗಿತ್ತು ಮತ್ತು ಅಕ್ಟೋಬರ್ 2 ರಿಂದ ಡೀಸೆಲ್ ದರಗಳು ಬದಲಾಗಿಲ್ಲ. ಆದರೆ ಎರಡು ತಿಂಗಳ ನಂತರ ಶುಕ್ರವಾರದಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಏರಿಕೆ ಕಂಡುಬಂದಿದೆ. ಕೊರೊನಾ ಹಿನ್ನೆಲೆ ನಷ್ಟ ಅನುಭವಿಸಿದ್ದು, ಇದರಿಂದ ಚೇತರಿಸಿಕೊಳ್ಳಲು ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆಗೆ ಆಶ್ರಯಿಸಲಾಗಿದೆ.