ನವದೆಹಲಿ : ಮೇ 4ರಿಂದ ಏರಿಕೆಯಾಗುತ್ತಿರುವ ಪೆಟ್ರೋಲ್ ಮತ್ತು ಡೀಸೆಲ್ ದರ ಈವರೆಗೂ 10 ಬಾರಿ ಏರಿಕೆ ಆಗಿದೆ. ತೈಲ ದರ ಈಗ ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿದೆ.
ಅಂತಾರಾಷ್ಟ್ರೀಯ ತೈಲ ಬೆಲೆ ಏರಿಕೆಯ ಮೇಲೆ ತೈಲ ಕಂಪನಿಗಳು ಪೆಟ್ರೋಲ್ ಮತ್ತು ಡೀಸೆಲ್ ದರ ಹೆಚ್ಚಿಸಿದ ಹಿನ್ನೆಲೆಯಲ್ಲಿ ಮುಂಬೈನಲ್ಲಿ ಪೆಟ್ರೋಲ್ ಬೆಲೆ ಮಂಗಳವಾರ 99 ರೂ.ಗೆ ಬಂದು ನಿಂತಿದೆ.
ಸರ್ಕಾರಿ ಸ್ವಾಮ್ಯದ ಇಂಧನ ಚಿಲ್ಲರೆ ವ್ಯಾಪಾರಿಗಳ ಬೆಲೆ ಅಧಿಸೂಚನೆಯ ಪ್ರಕಾರ, ಪೆಟ್ರೋಲ್ ಬೆಲೆಯನ್ನು ಲೀಟರ್‌ಗೆ 27 ಪೈಸೆ ಮತ್ತು ಡೀಸೆಲ್ 29 ಪೈಸೆ ಹೆಚ್ಚಿಸಲಾಗಿದೆ. ಈ ಮೂಲಕ ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ತಳ್ಳಿದೆ.
ದೆಹಲಿಯಲ್ಲಿ ಪೆಟ್ರೋಲ್ ದರ ಲೀಟರ್‌ಗೆ 92.85 ರೂ. ಮತ್ತು ಡೀಸೆಲ್ 83.51 ರೂ.ಗೆ ಏರಿದೆ. ರಾಜಸ್ಥಾನ, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರದ ಹಲವು ನಗರಗಳಲ್ಲಿ ದರಗಳು ಈಗಾಗಲೇ 100 ರೂ. ದಾಟಿದ್ದವು. ಇತ್ತೀಚಿನ ಹೆಚ್ಚಳದೊಂದಿಗೆ ಮುಂಬೈನ ಬೆಲೆಯೂ ಸಹ ಆ ಮಟ್ಟಕ್ಕೆ ತಲುಪಿದೆ.
ಇದನ್ನೂ ಓದಿ: ಅಪೊಲೊ ಆಸ್ಪತ್ರೆಗಳಲ್ಲಿ ಸ್ಪುಟ್ನಿಕ್ ವಿ ಲಸಿಕೆಗೆ ಚಾಲನೆ: ಪ್ರತಿ ಡೋಸ್‌ಗೆ 1,250 ರೂ. ದರ ನಿಗದಿ
ಮುಂಬೈನಲ್ಲಿ ಒಂದು ಲೀಟರ್ ಪೆಟ್ರೋಲ್ ಈಗ 99.14 ರೂ.ಯಷ್ಟಾಗಿದೆ. ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ 90.71 ರೂ.ಯಲ್ಲಿ ಮಾರಾಟ ಆಗುತ್ತಿದೆ. ಸ್ಥಳೀಯ ತೆರಿಗೆಗಳಾದ ವ್ಯಾಟ್ ಮತ್ತು ಸರಕು ಶುಲ್ಕದ ಆಧಾರದ ಮೇಲೆ ಇಂಧನ ಬೆಲೆಗಳು ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿರುತ್ತದೆ.
ರಾಜಸ್ಥಾನವು ದೇಶದಲ್ಲಿ ಅತಿ ಹೆಚ್ಚು ಮೌಲ್ಯವರ್ಧಿತ ತೆರಿಗೆ (ವ್ಯಾಟ್) ವಿಧಿಸುತ್ತದೆ. ನಂತರದ ಸ್ಥಾನದಲ್ಲಿ ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರ ಇದೆ. ಮಾರ್ಚ್ 15ರ ನಂತರ ಮೊದಲ ಬಾರಿಗೆ ಬ್ರೆಂಟ್ ಕಚ್ಚಾ ತೈಲ ಬೆಲೆ ಬ್ಯಾರೆಲ್‌ಗೆ 70 ಡಾಲರ್‌ಗಿಂತ ಹೆಚ್ಚಾಗಿದೆ.
ಪಶ್ಚಿಮ ಬಂಗಾಳದಂತಹ ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಸರ್ಕಾರಿ ಸ್ವಾಮ್ಯದ ತೈಲ ಸಂಸ್ಥೆಗಳು ದರ ಪರಿಷ್ಕರಣೆಯಲ್ಲಿ 18 ದಿನಗಳ ವಿರಾಮ ಕೊನೆಗೊಳಿಸಿದ ಬಳಿಕ, ಮೇ 4ರಿಂದ ಬೆಲೆಗಳು ಹತ್ತನೇ ಬಾರಿ ಹೆಚ್ಚಳವಾಗಿದೆ.
ರಾಜಸ್ಥಾನದ ಶ್ರೀ ಗಂಗನಗರ ಜಿಲ್ಲೆಯು ದೇಶದಲ್ಲಿ ಅತಿ ಹೆಚ್ಚು ಪೆಟ್ರೋಲ್ ಮತ್ತು ಡೀಸೆಲ್ ಪ್ರತಿ ಲೀಟರ್‌ಗೆ 103.80 ರೂ ಮತ್ತು 96.30 ರೂ.ಯಲ್ಲಿ ಖರೀದಿ ಆಗುತ್ತಿದೆ. ಕಳೆದ ಹತ್ತು ಬಾರಿಯಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್ ಮೇಲೆ 2.46 ರೂ ಮತ್ತು ಡೀಸೆಲ್ 2.78 ರೂ.ಯಷ್ಟು ಏರಿಕೆಯಾಗಿದೆ.