ನವದೆಹಲಿ: ಭಾರತದಲ್ಲಿ ಪ್ರಯಾಣಿಕರ ವಾಹನಗಳ ಮಾರಾಟವು ಆಗಸ್ಟ್‌ನಲ್ಲಿ ಶೇ. 14.16ರಷ್ಟು ಏರಿಕೆಯಾಗಿ 2,15,916ಕ್ಕೆ ತಲುಪಿದೆ. ಕಳೆದ ವರ್ಷ ಇದೇ ತಿಂಗಳಲ್ಲಿ 1,89,129 ಯುನಿಟ್‌ಗಳಷ್ಟಿತ್ತು ಎಂದು ವಾಹನ ಉದ್ಯಮ ಸಂಸ್ಥೆ ಸಿಯಾಮ್ ತಿಳಿಸಿದೆ.
ಸೊಸೈಟಿ ಆಫ್ ಇಂಡಿಯನ್ ಆಟೋ ಮೊಬೈಲ್ ತಯಾರಕರ (ಸಿಯಾಮ್) ಇತ್ತೀಚಿನ ಮಾಹಿತಿಯ ಪ್ರಕಾರ, ದ್ವಿಚಕ್ರ ವಾಹನಗಳ ಮಾರಾಟವು ಶೇಕಡಾ 3ರಷ್ಟು ಏರಿಕೆಯಾಗಿ 15,59,665ಕ್ಕೆ ತಲುಪಿದೆ. ಕಳೆದ ವರ್ಷ ಇದೇ ತಿಂಗಳಲ್ಲಿ 15,14,196 ಯುನಿಟ್‌ಗಳಿಷ್ಟು.
ಮೋಟರ್ ಸೈಕಲ್ ಮಾರಾಟವು 10,32,476 ಯುನಿಟ್ ಆಗಿದ್ದು, 2019ರ ಆಗಸ್ಟ್‌ನಲ್ಲಿ 9,37,486 ಯುನಿಟ್ಗಳಿತ್ತು. ಹೀಗಾಗಿ ಶೇಕಡಾ 10.13ರಷ್ಟು ಏರಿಕೆಯಾಗಿದೆ.
ಸ್ಕೂಟರ್ ಮಾರಾಟವು ಶೇಕಡಾ 12.3ರಷ್ಟು ಇಳಿಕೆಯಾಗಿ 4,56,848ಕ್ಕೆ ತಲುಪಿದೆ. ಕಳೆದ ವರ್ಷ ಇದೇ ತಿಂಗಳಲ್ಲಿ 5,20,898 ಯುನಿಟ್ ಮಾರಾಟವಾಗಿತ್ತು.