ನವದೆಹಲಿ : ಸ್ಮಾರ್ಟ್‌ಫೋನ್ ಬ್ರಾಂಡ್ ಒಪ್ಪೋ ತನ್ನ ಉತ್ಪನ್ನಗಳನ್ನು ವಾಟ್ಸ್‌ಆ್ಯಪ್ ಅಪ್ಲಿಕೇಷನ್‌ನಲ್ಲಿ ಆರ್ಡರ್ ಪಡೆದು ಗ್ರಾಹಕರ ಮನೆಗೆ ತಲುಪಿಸುವುದಾಗಿ ತಿಳಿಸಿದೆ.
ಮೇ 24 ರಿಂದ ಗ್ರಾಹಕರು ಯಾವುದೇ ಒಪ್ಪೋ ಉತ್ಪನ್ನವನ್ನು ವಾಟ್ಸ್ಆ್ಯಪ್ ಮೂಲಕ ಆರ್ಡರ್ ಮಾಡಬಹುದು. 91-9871502777ಗೆ ಪಿನ್ ಕೋಡ್ ನಮೂದಿಸಿ ಮತ್ತು ಹತ್ತಿರದ ಚಿಲ್ಲರೆ ಅಂಗಡಿಗಳಿಂದ ಕರೆ ಸ್ವೀಕರಿಸಬಹುದು ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.
ಈ ಮಾರಾಟ ಕ್ರಮವು ದೀರ್ಘಕಾಲೀನ ಓಮ್ನಿಚಾನಲ್ ಕಾರ್ಯತಂತ್ರಕ್ಕೆ ಅನುಗುಣವಾಗಿದೆ. ಸ್ಥಳೀಯ ಅಂಗಡಿ ಮತ್ತು ಮುಖ್ಯ ಪಾಲುದಾರರಿಗೆ ಒಪ್ಪೋ ಉತ್ಪನ್ನಗಳನ್ನು ವಾಟ್ಸ್ಆ್ಯಪ್ ಮೂಲಕ ಮಾರಾಟ ಮಾಡಲು ಮತ್ತು ಮನೆಯಲ್ಲಿ ಕುಳಿತ ಗ್ರಾಹಕರ ಕೈಸೇರಿಸುವ ಪ್ರಯತ್ನದ ಭಾಗವಾಗಿದೆ ಎಂದಿದೆ.
ಇದನ್ನೂ ಓದಿ: ಕಾಗದದಲ್ಲಿ ಮಾತ್ರವೇ ಕೇಂದ್ರ ಸರ್ಕಾರ ಸಾವಿರಾರು ಕೋಟಿ ರೂ. ಖರ್ಚು ಮಾಡಿದೆ : ಸುಪ್ರೀಂ ಕಿಡಿ
ಒಪ್ಪೋ ತನ್ನ ಎಲ್ಲ ಉತ್ಪನ್ನಗಳ ರಿಪೇರಿ ವಾರಂಟಿಯನ್ನು ಜೂನ್ 30ರವರೆಗೆ ವಿಸ್ತರಣೆ ಮಾಡಿದೆ. ಈ ಘೋಷಿಸುವ ಮೂಲಕ ಗ್ರಾಹಕರಿಗೆ ತನ್ನ ಬೆಂಬಲ ವಿಸ್ತರಿಸಿದೆ. ಲಾಕ್‌ಡೌನ್ ಅವಧಿಯಲ್ಲಿ ಖಾತರಿ ಅವಧಿ ಮುಗಿದ ಉತ್ಪನ್ನಗಳಿಗೆ ಅನ್ವಯಿಸುತ್ತದೆ ಎಂದು ಹೇಳಿದೆ.
ಒಪ್ಪೋ ಈಗ ನೋಯ್ಡಾದಲ್ಲಿನ 110 ಎಕರೆ ಸೌಲಭ್ಯದಲ್ಲಿ ಪ್ರತಿ ಮೂರು ಸೆಕೆಂಡಿಗೆ ಒಂದು ಸ್ಮಾರ್ಟ್‌ಫೋನ್ ತಯಾರಿಸುತ್ತಿದೆ. ತಡೆರಹಿತ ಪೂರೈಕೆ ಸರಪಳಿಯನ್ನು ಖಚಿತಪಡಿಸಿಕೊಳ್ಳಲು, ಕಾರ್ಖಾನೆಯು ಯಾವುದೇ ಹಂತದಲ್ಲಿ 1.2 ಮಿಲಿಯನ್ ಫೋನ್‌ಗಳಿಗೆ ವಸ್ತುಗಳನ್ನು ಸಂಗ್ರಹಿಸುತ್ತದೆ ಎಂದು ಕಂಪನಿ ಇತ್ತೀಚೆಗೆ ಹೇಳಿತ್ತು.