ETV Bharat / business

ಮತ್ತೆ ಮುನಿದ ಈರುಳ್ಳಿ: ನ್ಯೂ ಇಯರ್​ಗೆ ರುಚಿಯಾದ ಬಿರಿಯಾನಿ ಮಾಡೋದು ಕಷ್ಟ! - ಈರುಳ್ಳಿ ಇತ್ತೀಚಿನ ದರ

2021ರ ಜನವರಿ 1ರಿಂದ ಜಾರಿಗೆ ಬರುವಂತೆ ಅಡಿಗೆಯ ಪ್ರಧಾನವಾದ ಈರುಳ್ಳಿ ರಫ್ತು ನಿಷೇಧವನ್ನು ಸರ್ಕಾರ ತೆಗೆದುಹಾಕಿದೆ. ಈ ನಂತರ ನಾಸಿಕ್‌ನ ಲಸಲ್‌ಗಾಂವ್ ಸಗಟು ಮಂಡಿಯಲ್ಲಿ ಈರುಳ್ಳಿ ಬೆಲೆ ಎರಡು ದಿನಗಳಲ್ಲಿ ಶೇ 28ರಷ್ಟು ಏರಿಕೆಯಾಗಿ ಪ್ರತಿ ಕ್ವಿಂಟಲ್‌ 2,500 ರೂ.ಗೆ ತಲುಪಿದೆ.

Onion prices
ಈರುಳ್ಳಿ
author img

By

Published : Dec 30, 2020, 10:01 PM IST

Updated : Dec 30, 2020, 10:17 PM IST

ಮುಂಬೈ: ಹೊಸ ವರ್ಷದಿಂದ ಎಲ್​ಪಿಜಿಯಿಂದ ಡಿಜಿಟಲ್​​ ಪಾವತಿ ತನಕ ದರ ಏರಿಕೆ ಆಗಲಿದೆ. ಅಡುಗೆ ಮನೆಯೆ ಖಾಯಂ ಸದಸ್ಯ ಈರುಳ್ಳಿ ಮತ್ತೆ ಗಗನ ಮುಖಿಯಾಗಿದೆ. ಆನಿಯನ್​​ ದರ ಹೆಚ್ಚಳವಾಗಿರುವುದರಿಂದ ನ್ಯೂ ಇಯರ್​ಗೆಂದು ವಿಶೇಷ ಬಿರಿಯಾನಿ ಮಾಡುವ ಸೆಂಟರ್​ಗಳು ಸಂಕಷ್ಟಕ್ಕೆ ಈಡಾಗಿವೆ. ಈರುಳ್ಳಿ ಇಲ್ಲದೇ ಬಿರಿಯಾನಿ ಮಾಡಿದರೆ ರುಚಿ ಬರಲ್ಲ. ಈರುಳ್ಳಿ ಹಾಕಿದರೆ ಬೆಲೆ ಗಿಟ್ಟಲ್ಲ. ಈಗ ಅಂಗಡಿಯವರು ಇಕ್ಕಟ್ಟಿನಲ್ಲಿ ಸಿಲುಕುವಂತಾಗಿದೆ.

2021ರ ಜನವರಿ 1ರಿಂದ ಜಾರಿಗೆ ಬರುವಂತೆ ಅಡಿಗೆಯ ಪ್ರಧಾನವಾದ ಈರುಳ್ಳಿ ರಫ್ತು ನಿಷೇಧವನ್ನು ಸರ್ಕಾರ ತೆಗೆದುಹಾಕಿದೆ. ಈ ನಂತರ ನಾಸಿಕ್‌ನ ಲಸಲ್‌ಗಾಂವ್ ಸಗಟು ಮಂಡಿಯಲ್ಲಿ ಈರುಳ್ಳಿ ಬೆಲೆ ಎರಡು ದಿನಗಳಲ್ಲಿ ಶೇ 28ರಷ್ಟು ಏರಿಕೆಯಾಗಿ ಪ್ರತಿ ಕ್ವಿಂಟಲ್‌ 2,500 ರೂ.ಗೆ ತಲುಪಿದೆ.

ಇದನ್ನೂ ಓದಿ: ಅನಿಲ್​ ಅಂಬಾನಿಯ ಆರ್​ಕಾಮ್​ಗೆ No ಇನ್​ಕಮ್:​ ಮಲ್ಯ, ನೀರವ್​ಗಿಂತ ಅತ್ಯಧಿಕ ಸಾಲದ ಹೊರೆ!

ಸರಕುಗಳ ಬೆಲೆ ಕುಸಿಯುತ್ತಿರುವ ಕಾರಣ ಜನವರಿ 1ರಿಂದ ಜಾರಿಗೆ ಬರುವಂತೆ ಎಲ್ಲ ಬಗೆಯ ಈರುಳ್ಳಿ ಮೇಲಿನ ರಫ್ತು ನಿಷೇಧವನ್ನು ಸರ್ಕಾರ ಸೋಮವಾರ ತೆಗೆದುಹಾಕಿದೆ.

ಎಲ್ಲ ಬಗೆಯ ಈರುಳ್ಳಿ ರಫ್ತು ನಿಷೇಧ ಹಿಂತೆಗೆತವು 2021ರ ಜನವರಿ 1ರಿಂದ ಜಾರಿಗೆ ಬರಲಿದೆ ಎಂದು ವಿದೇಶಾಂಗ ವ್ಯಾಪಾರ ನಿರ್ದೇಶನಾಲಯ (ಡಿಜಿಎಫ್‌ಟಿ) ಅಧಿಸೂಚನೆಯಲ್ಲಿ ತಿಳಿಸಿದೆ.

ಲಸಲ್​ಗಾಂವ್ ಸಗಟು ಮಂಡಿಯಲ್ಲಿ ಸೋಮವಾರ ಈರುಳ್ಳಿ ಬೆಲೆ ಕ್ವಿಂಟಲ್‌ಗೆ ಸರಾಸರಿ 1,951 ರೂ.ಯಷ್ಟಿತ್ತು. ಅಂದಿನಿಂದ ದರಗಳು ಸ್ಥಿರವಾಗಿ ಏರುತ್ತಿವೆ. ಮಂಗಳವಾರ ಈರುಳ್ಳಿ ಬೆಲೆ ಕ್ವಿಂಟಲ್‌ಗೆ ಸರಾಸರಿ 2,400 ರೂ.ಗೆ ಏರಿದರೇ ಬುಧವಾರ 2,500 ರೂ.ಗೆ ತಲುಪಿತು. ಈ ಎರಡು ದಿನಗಳಲ್ಲಿ ಸುಮಾರು ಶೇ 28ರಷ್ಟು ಹೆಚ್ಚಾಗಿದೆ. ರಾಷ್ಟ್ರ ರಾಜಧಾನಿಯಲ್ಲಿನ ಚಿಲ್ಲರೆ ಬೆಲೆಗಳು ಬುಧವಾರ ಪ್ರತಿ ಕೆಜಿಗೆ ಶೇ 25 - 42ರಷ್ಟರಿಂದ 50 ರೂ.ಗೆ ಏರಿದೆ.

ಸೆಪ್ಟೆಂಬರ್‌ನಲ್ಲಿ ಸರ್ಕಾರವು ಈರುಳ್ಳಿ ರಫ್ತಿಗೆ ನಿಷೇಧ ಹೇರಿ, ಬೆಲೆಗಳ ಏರಿಕೆ ಕುಸಿತ ಮಾಡಿ, ದೇಶೀಯ ಮಾರುಕಟ್ಟೆಯಲ್ಲಿ ಲಭ್ಯತೆ ಹೆಚ್ಚಿಸಲು ಈ ನಿರ್ಧಾರ ತೆಗೆದುಕೊಂಡಿತು. ದೇಶದಲ್ಲಿ ಅತಿಹೆಚ್ಚಾಗಿ ಈರುಳ್ಳಿ ಬೆಳೆಯುವ ರಾಜ್ಯಗಳಾದ ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ಕರ್ನಾಟಕದಲ್ಲಿ ನೆರೆಯಿಂದಾಗಿ ಇಳುವರಿ ಕುಸಿಯಿತು.

Last Updated : Dec 30, 2020, 10:17 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.